ಉಡುಪಿ : ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‍ರಾಜ್ ಕಾಂಚನ್‍ರಿಂದ ಮತ ಪ್ರಚಾರ
ಉಡುಪಿಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿದ್ದ ಭಿನ್ನ ಮತ ಶಮನಕ್ಕೆ ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ಟಿಕೆಟ್ ಅಕಾಂಕ್ಷಿಗಳು ನಿನ್ನೆ ನಡೆದ ಸಭೆಯಲ್ಲಿ ಒಮ್ಮತವನ್ನು ಪ್ರದರ್ಶಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪ್ರಚಾರವೂ ಕೂಡ ಜೊರಾಗಿಯೇ ನಡೆಯುತ್ತಿದೆ. ಮನೆ ಮನೆ ಭೇಟಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಲಾಗುತ್ತಿದ್ದು ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಪ್ರಾಸದ್ ರಾಜ್ ಕಾಂಚನ್ ಹೇಳಿದ್ದಾರೆ.
ಅಷ್ಟೇ ಅಲ್ಲದೇ ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಗೊಂದಲಗಳ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಚನ್ ನನ್ನ ಮುಂದೆ ಯಾರೇ ಅಭ್ಯರ್ಥಿಗಳನ್ನು ಹಾಕಿದ್ರು ಕಾಂಗ್ರೆಸ್ ಎದುರಿಸಲು ತಯಾರಿದೆ. ಬಿಜೆಪಿ ಪಕ್ಷದ ದುರಾಡಳಿತದಿಂದ ಜನ ಬೆಸತ್ತು ಹೋಗಿದ್ದಾರೆ. ಮತದಾರರು ಕಾಂಗ್ರೆಸ್ ಪರ ನಿಲ್ಲಲ್ಲಿದ್ದಾರೆ ಎಂದರು.