ಸರಕಾರಿ ವ್ಯವಸ್ಥೆಯ ದುರುಪಯೋಗ : ಸಿಬ್ಬಂದಿ ಮೇಲೆ ಅಧಿಕಾರಿಯಿಂದ ದೂರು

ಪುತ್ತೂರು: ಖಾಸಗಿ ವಿಚಾರಕ್ಕಾಗಿ ಇಲಾಖೆಯ ಲೆಟರ್ ಹೆಡ್, ಸೀಲ್ ಮತ್ತು ಸಹಿಯನ್ನು ದುರುಪಯೋಗ ಪಡಿಸಿಕೊಂಡಿರುವುದಾಗಿ ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕಾರ್ಯನಿರ್ವಹಣಾಧಿಕಾರಿಯೊಬ್ಬರು ಕಚೇರಿ ಸಿಬ್ಬಂದಿಗೆ ಆರೋಪಿಸಿ, ದೂರು ನೀಡಿದ್ದಾರೆ. ತಾಲೂಕು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ನೀಡಿದ ದೂರಿನಲ್ಲಿ ತಿಳಿಸಿರುವಂತೆ, ಸಿಬ್ಬಂದಿ ಶಿವಾನಂದ ತನ್ನ ವೈಯುಕ್ತಿಕ ಮತ್ತು ಸ್ವಹಿತಾಸಕ್ತಿಗಾಗಿ ಸರಕಾರಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದನು ಎಂದು ಹೇಳಲಾಗುತ್ತದೆ. ಪ್ರಕರನದ ಕುರಿತು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಾಲೂಕು ಪಂಚಾಯತ್ ದಾಖಲೆ ಪತ್ರಗಳ ವಂಚನೆ ಮಾಡಿರುವ ಬಗ್ಗೆಯೂ ಕಾರ್ಯನಿರ್ವಹಣಾಧಿಕಾರಿ ದೂರು ನೀಡಿದ್ದಾರೆ

Related Posts

Leave a Reply

Your email address will not be published.