ಪುತ್ತೂರು: ಕ್ಯೊಲದಲ್ಲಿ ಅಡಿಕೆ ತುಂಬಿದ ಗೋಣಿ ಕಳವು ಪ್ರಕರಣ: ನಾಲ್ವರ ಬಂಧನ
ಪುತ್ತೂರು: ಬಡಗನ್ನೂರು ಗ್ರಾಮದ ಕ್ಯೂಲ ದ ಹಳೆಯ ಮನೆಯೊಂದರ ಅಟ್ಟದಲ್ಲಿದ್ದ ಅಡಿಕೆ ತುಂಬಿದ ಗೋಣಿಗಳನ್ನು ಕಳವು ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ 4 ಮಂದಿಯನ್ನು ಪೊಲೀಸ್ರು ಬಂಧಿಸಿದ್ದಾರೆ.
ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ನಿವಾಸಿಗಳಾದ ಶ್ರವಣ್ ಕೆ, (20) ಹಾಗೂ ಜಯಚಂದ್ರ, (21) ಮತ್ತು ನಿಡ್ಪಳ್ಳಿ ಗ್ರಾಮದ ನಿವಾಸಿಗಳಾದ ಅಶೋಕ, (24) ಮತ್ತು ಪುನೀತ್ (20) ಬಂಧಿತರು
ಕ್ಯೋಲ ಸಮೀಪದ ನವೀನ್ ರೈ ಎಂಬವರ ಹಳೆಯ ಮನೆಯ ಕೊಟ್ಟಿಗೆಯ ಅಟ್ಟದಲ್ಲಿದ್ದ ಅಡಿಕೆ ಕಳ್ಳತನ ನಡೆದಿದ್ದು 23 ಗೋಣಿ, ಸುಲಿಯದ ಅಡಿಕೆಯನ್ನು ಕಳವು ಮಾಡಲಾಗಿತ್ತು. ಮನೆಯವರು ನೆಂಟರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ ಎನ್ನಲಾಗಿದೆ.
ಬಂಧಿತರಿಂದ ಸುಮಾರು ರೂ 1,55,925/- ಮೌಲ್ಯದ ಅಡಿಕೆ ಹಾಗೂ ಕಳವು ಮಾಡಲು ಉಪಯೋಗಿಸಿದ ಸ್ವಿಪ್ಟ್ ಕಾರು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿರುತ್ತಾರೆ.