ಪುತ್ತೂರು: ಹೃದಯಾಘಾತದಿಂದ ನವವಿವಾಹಿತೆ ಸಾವು
ಪುತ್ತೂರು: ಹೃದಯಾಘಾತದಿಂದ ನವವಿವಾಹಿತೆ ಸಾವನ್ನಪ್ಪಿದ ಘಟನೆ ಪಡುವನ್ನೂರು ಗ್ರಾಮದ ಪದಡ್ಕದಲ್ಲಿ ನಡೆದಿದೆ.
ಪುಷ್ಪಾ (22) ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ. ಅವರಿಗೆ ಮುಂಜಾನೆ ವೇಳೆಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಸ್ಪತ್ರೆ ತಲುಪುವ ಮೊದಲೇ ಪುಷ್ಪಾ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪುಷ್ಪಾ ಅವರು ಕೇವಲ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು ಎನ್ನಲಾಗಿದೆ.