ಪಬ್ಬಾಸ್ ಐಸ್‌ಕ್ರೀಂ ಪಾರ್ಲರ್ ನಲ್ಲಿ ಐಸ್‌ಕ್ರೀಂ ಸವಿದ ರಾಹುಲ್ ಗಾಂಧಿ
ಕಾಂಗ್ರೆಸ್ ಚುನಾವಣೆ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ನಗರದಲ್ಲಿರುವ ಪ್ರಸಿದ್ಧ ಹಾಗೂ ಟೇಸ್ಟಿಗೆ ಹೆಸರುವಾಸಿಯಾದ ಐಡಿಯಾಲ್ ಐಸ್‍ಕ್ರೀಂ ಅವರ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಐಸ್ ಕ್ರೀಮ್ ಸವಿದಿದ್ದಾರೆ.
ಮಂಗಳೂರಿನ ಲಾಲ್ ಬಾಗ್ ನಲ್ಲಿರುವ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್ ಗೆ ಕಾಂಗ್ರೆಸ್ ಮುಖಂಡರ ಜೊತೆಗೆ ಆಗಮಿಸಿದ ರಾಹುಲ್, ಐಸ್ ಕ್ರೀಂ ಸವಿದರು. ಮುಕುಂದ್ ಕಾಮತ್ ಮಾಲಕತ್ವದ ಪಬ್ಬಾಸ್ ಐಸ್‍ಕ್ರೀಂ ಪಾರ್ಲರ್‍ಗೆ ಭೇಟಿ ನೀಡಿ, ಐಸ್‍ಕ್ರೀಂ ಸವಿದು ಖುಷಿಪಟ್ಟರು.
ಈ ವೇಳೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಮೊಹಮ್ಮದ್ ನಲ್ಪಾಡ್ ಸೇರಿದಂತೆ ಇತರ ಕಾಂಗ್ರೆಸ್ ಮುಖಂಡರು ಜೊತೆಗಿದ್ದರು. ಬಿಗಿ ಭದ್ರತೆಯೊಂದಿಗೆ ಐಸ್ ಕ್ರೀಮ್ ಪಾರ್ಲರ್ ಗೆ ರಾಹುಲ್ ಆಗಮಿಸಿದ್ದರು. ಈ ವೇಳೆ, ಪಾರ್ಲರ್ ನಲ್ಲಿದ್ದ ಇತರೇ ಸಾರ್ವಜನಿಕರು ರಾಹುಲ್ ಗಾಂಧಿಯೊಂದಿಗೆ ಸೆಲ್ಫಿ ತೆಗೆಯಲು ಮುಗಿಬಿದ್ದರು. ಇದಕ್ಕೆ ಮುಗುಳ್ನಗುತ್ತಲೇ ರಾಹುಲ್ ಕೂಡ ಸಹಕರಿಸಿದರು.