ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಈ ವರ್ಷದ ಸೂಪರ ಹಿಟ್ ಕಾಂತಾರ ಚಲನಚಿತ್ರ ಸಿನಿಮಾ ನಿರ್ಮಾಪಕ ವಿಜಯ್ ಕಿರಂದೂರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಳದ ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ ವಿಜಯ್ ಅವರಿಗೆ ದೇವರ ಶೇಷ ವಸ್ತ್ರ ನೀಡಿ ದೇವಳದ ವತಿಯಿಂದ ಕಿರಂದೂರು ಅವರನ್ನು ಗೌರವಿಸಲಾಯಿತು.
‘ಕಾಂತಾರ’ ಕನ್ನಡದಲ್ಲಿ ಬಿಡುಗಡೆಯಾಗಿ 50 ದಿನ ಪೂರ್ಣಗೊಂಡಿದೆ. ‘ಕಾಂತಾರ’ ಚಿತ್ರದ ಒಟ್ಟಾರೆ ಮೇಕಿಂಗ್, ದಕ್ಷಿಣ ಕನ್ನಡ ಸೊಗಡು, ಕಂಬಳ ಮತ್ತು ಪ್ರಮುಖವಾಗಿ ಭೂತ ಕೋಲ ವಿಷಯ ಜನರಿಗೆ ಇಷ್ಟವಾಗಿದೆ. ಜೊತೆಗೆ ನಿರ್ದೇಶಕ ರಿಷಬ್ ಶೆಟ್ಟಿ, ನಟಿ ಸಪ್ತಮಿ ಗೌಡ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಂಡರು. ‘ಕಾಂತಾರ’ ಚಿತ್ರ ಕನ್ನಡದಲ್ಲಿ ರಿಲೀಸ್ ಆದ ಬಳಿಕ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗತೊಡಗಿತು. ಬಳಿಕ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ
ಉಳ್ಳಾಲ: ತುಳುನಾಡಿ ಆರಾದ್ಯ ದೈವ ಕಲ್ಲಾಪು ಬುರ್ದುಗೋಳಿ ಕೊರಗಜ್ಜನ ಉದ್ಭವಶಿಲೆಯ ಆದಿತಳಕ್ಕೆ ಹಾಗೂ ಕುತ್ತಾರು ಕೊರಗಜ್ಜನ ಆದಿತಳಕ್ಕೆ ಭೇಟಿ ನೀಡಿ ಕಾಂತಾರ ಚಲನ ಚಿತ್ರದ ನಾಯಕ ನಟಿ ಸಪ್ತಮೀ ಗೌಡ ಆಶೀರ್ವಾದ ಪಡೆದರು. ಈ ಸಂದರ್ಭ ಕಾಂತಾರ ಚಿತ್ರನಟ ಗುರು ಸನಿಲ್, ಕದ್ರಿ ಕ್ರಿಕೆಟಸ್೯ ಅಧ್ಯಕ್ಷ ಜಗದೀಶ್ ಕದ್ರಿ, ನಟಿ ತಾಯಿ ಶಾಂತಾ ಯು., ಕಲ್ಲಾಪು ಬುರ್ದುಗೋಳಿ ಕೊರಗಜ್ಜ ಸ್ಥಾನದ ವ್ಯವಸ್ಥಾಪನಾ ಸಮಿತಿಯ ವಿಶ್ವನಾಥ್ ನಾಯಕ್, ಕುತ್ತಾರು ಕೊರಗಜ್ಜನ ತಳದ ದೇವಿಪ್ರಸಾದ್
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕಾಂತಾರ ಖ್ಯಾತಿಯ ನಟಿ ಸಪ್ತಮಿಗೌಡ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಇವರನ್ನು ದೇವಳದ ವತಿಯಿಂದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಗೌರವಿಸಿದರು.ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಪ್ತಮಿ ಗೌಡ ‘ಕಾಂತಾರ ಯಶಸಿಸ್ಸಿನ ಬಗ್ಗೆ ಹೆಮ್ಮೆ ಇದೆ, ತುಳುನಾಡಿನ ದೈವಾರಾಧನೆ ಬಗ್ಗೆ ನನಗೆ ಮೊದಲು ತಿಳಿದಿರಲಿಲ್ಲ, ಕಾಂತಾರಾ ಚಿತ್ರದ ನಂತರ ತಿಳಿದುಕೊಂಡೆ, ಬೇರೆ ಬೇರೆ ನಿನಿಮಾದ
ಬಹರೈನ್; “ತಾನು ಕರಗಿ ಇತರರರಿಗೆ ಬೆಳಕು ಕೊಡುವ ಮೇಣದ ಬತ್ತಿಯಂತೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಸಾರ್ಥಕೆಯನ್ನು ಕಾಣಬಹುದು . ಮಕ್ಕಳಿಗೆ ಮಾತೃ ಭಾಷೆಯನ್ನೂ ಕಳಿಸಿದಾಗ ಮಾತ್ರ ನಮ್ಮ ಸಂಸ್ಕ್ರತಿ ಉಳಿದು ಬೆಳೆಯಲು ಸಾಧ್ಯ . ನಾವು ಆರ್ಥಿಕವಾಗಿ ಬೆಳೆದಂತೆಲ್ಲಾ ಸಮಾಜವನ್ನೂ ಬೆಳೆಸಬೇಕು “ಎಂದು ಇಲ್ಲಿ ಇತ್ತೀಚಿಗೆ ಜರುಗಿದ ಬಂಟ್ಸ್ ಬಹರೈನ್ ನ ನೂತನ ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣ ಸಮಾರಂಭದಲ್ಲಿ ಬಂಟ್ಸ್ ಬಹರೈನ್ ನ ನೂತನ
ಸುಳ್ಯ ತಾಲೂಕಿನ ವಿದ್ಯಾರ್ಥಿನಿ ಅಪೂರ್ವ ಗೋಕುಲ್‍ದಾಸ್ ರಚಿಸಿರುವ ಪಂಜುರ್ಲಿ ದೈವದ ಚಿತ್ರ ಎಲ್ಲರ ಗಮನ ಸೆಳೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಕನ್ನಡ ಚಲನ ಚಿತ್ರ ಕಾಂತಾರದಲ್ಲಿ ಮೂಡಿ ಬಂದ ಪಂಜುರ್ಲಿ ದೈವದ ಚಿತ್ರವನ್ನು ಅಪೂರ್ವ ಗೋಕುಲ್‍ದಾಸ್ ಮನಮೋಹಕವಾಗಿ ರಚಿಸಿ ಮೆಚ್ಚಿಗೆ ಗಳಿಸಿದ್ದಾಳೆ. ಅಪೂರ್ವ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಗೋಕುಲ್‍ದಾಸ್ ಅವರ ಪುತ್ರಿ. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಎಂಟನೇ ತರಗತಿಯ
ಬೆಂಗಳೂರು: ಕಾಂತಾರ ಸಿನಿಮಾ ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಮಾಡುತ್ತಿದೆ. ಈ ನಡುವೆ ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡು ವಿವಾದ ಆಗಿತ್ತು. ಇದೀಗ ಈ ಹಾಡು ಬಳಸದಂತೆ ಕೋಯಿಕ್ಕೋಡ್ ಕೋರ್ಟ್ ಸೂಚನೆ ನೀಡಿರೋದು ಚಿತ್ರತಂಡಕ್ಕೆ ಬಿಗ್ ಶಾಕ್ ಕೊಟ್ಟಿದೆ. ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ ಇದನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪವನ್ನು
ಕಾರ್ಕಳ : ಕನ್ನಡದ ನಟ ಚೇತನ್ ವಿರುದ್ಧ ಹಿಂದು ಜಾಗರಣ ವೇದಿಕೆ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ .ಭೂತ ಕೋಲದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ. ಬೋಳ ಸದಾಶಿವ ಶೆಟ್ಟಿ, ಕೆಎಂಎಫ್ ನಿರ್ದೇಶಕ ನರಸಿಂಹ ಕಾಮತ್, ಹಿಂದು ಜಾಗರಣ ವೇದಿಕೆ ಕಾರ್ಕಳ ನಗರ ಸಂಯೋಜಕ್ ಸಂದೀಪ್ ಕಾರ್ಲ, ದೀಪಕ್ ಬೈಲೂರು, ಸುಭಾಶ್ಚಂದ್ರ ಹೆಗ್ಡೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ತುಳುರಂಗಭೂಮಿ ಕಲಾವಿದ ದೇವದಾಸ್ ಕಾಪಿಕಾಡ್ ಸಮಸ್ಯೆ ಮಾಡುವವರು ಸಮಸ್ಯೆ ಮಾಡೇ ಮಾಡುತ್ತಾರೆ.ನಮ್ಮ ಹಿರಿಯರು ನಡೆಸಿಕೊಂಡು ಬಂದಿದ್ದ ಆಚರಣೆಗೆ ಯಾವುದೇ ಧಕ್ಕೆ ಬಾರದಂತೆ, ಯಾವುದೇ ಜಾತಿಗೆ ಸಮಸ್ಯೆ ಬಾರದಂತೆ ಅಚ್ಚುಕಟ್ಟಾಗಿ ಸಿನೆಮಾ ನಿರ್ಮಿಸಿದ್ದಾರೆ. ಅದು ಯಾಕೆ ಕಾಣುತ್ತಿಲ್ಲ ಅನ್ನೊದು ಗೊತ್ತಾಗುತ್ತಿಲ್ಲ ಎಂದರು. ಕಾಂತಾರ ಸಿನೆಮಾ ಸದ್ಯದಲ್ಲೇ ತುಳುವಿನಲ್ಲಿ ಬರಲಿದ್ದು, ಜನ ಕನ್ನಡ ನೋಡಿದ್ದರೂ ಕೂಡ ತುಳುವಿನಲ್ಲಿ ಹೇಗೆ ಬರುತ್ತದೆ