ಉಜಿರೆ ಶ್ರೀ ಧ.ಮಂ ಕಾಲೇಜು ವತಿಯಿಂದ ನಿವೃತ್ತ ಕರ್ನಲ್ ನಿತಿನ್ ಭಿಡೆ ಅವರಿಗೆ ಸನ್ಮಾನ

ಉಜಿರೆ: ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸುವಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧವಾಗಬೇಕು.ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಕೌಶಲ್ಯವನ್ನು ವಿದ್ಯಾರ್ಥಿಜೀವನದಲ್ಲೇಆರಂಭಿಸಬೇಕು. ಎಂದು ಭಾರತೀಯ ಸೇನೆಯ ನಿವೃತ್ತಕರ್ನಲ್ ನಿತಿನ್‍ಆರ್ ಭಿಡೆಅಭಿಪ್ರಾಯಪಟ್ಟರು.

ಶ್ರೀ ಧ. ಮಂ. ಡಿ.ಎಡ್. ಕಾಲೇಜು ಸಭಾಂಗಣದಲ್ಲಿಉಜಿರೆಎಸ್ ಡಿ ಎಮ್‍ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘವು ನಡೆಸಿಕೊಟ್ಟ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂವಾದಕಾರ್ಯಕ್ರಮ “ಎಸ್ ಡಿ ಎಂ ನೆನಪಿನಂಗಳ” ಕಾರ್ಯಕ್ರಮದ ಮೂರನೇ ಸರಣ ಯಲ್ಲಿ ಮುಖ್ಯಅಥಿತಿ ನೆಲೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ದೌರ್ಬಲ್ಯಗಳನ್ನು ತೋರ್ಪಡಿಸದೇಎದುರಾಗುವ ಸವಾಲುಗಳನ್ನು ದಿಟ್ಟವಾಗಿಎದುರಿಸಬೇಕೆಂದು ಪ್ರೋತ್ಸಹಿಸಿದರು.ತಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡ ಅವರು, ಇಂದಿನ ವಿದ್ಯಾರ್ಥಿಗಳೂ ಕೂಡ ಅಂದಿನ ವಿದ್ಯಾರ್ಥಿಗಳಂತೆ ಸವಾಲುಗಳಿಗೆ ಸೆಟೆದು ನಿಲ್ಲಬೇಕು,ಸವಾಲನ್ನೆದುರಿಸುವಕಿಚ್ಚನ್ನು ಮನದಲ್ಲಿ ಬೆಳೆಸಿಕೊಳ್ಳಬೇಕೆಂದರು.ಕಾಲೇಜಿನ ಪ್ರಾಂಶುಪಾಲ ಡಾ. ಬಿ ಎ ಕುಮಾರ ಹೆಗ್ಡೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ತಮ್ಮ ವಿದ್ಯಾರ್ಥಿ ನಿತಿನ್ ಭಿಡೆಯವರ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿಎನ್ ಸಿ ಸಿ ವಿಭಾಗದಲ್ಲಿರಾಷ್ಟ್ರ ಮಟ್ಟದಲ್ಲಿ ಸಾಧನೆಗೈದಕೆಡೆಟ್ ಗಳನ್ನು ಗೌರವಿಸಲಾಯಿತು. ಮತ್ತುಎಸ್ ಡಿ ಎಂ ಸ್ನಾತಕೋತ್ತರಕಾಲೇಜಿನ ವಿದ್ಯಾರ್ಥಿಯಾದ ಶಾಮ ಪ್ರಸಾದ್‍ಗೆಕಾಲೇಜಿನಆರ್ಹ ವಿದ್ಯಾರ್ಥಿಯೆಂದು ಗುರುತಿಸಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪೆÇ್ರೀತ್ಸಾಹಧನ ನೀಡಿಗೌರವಿಸಲಾಯಿತು.

ಕಾರ್ಯಕ್ರಮವನ್ನುಕೆಡೆಟ್‍ರಾಘವೇಂದ್ರ ಸ್ವಾಗತಿಸಿದರು. ಕೆಡೆಟ್ ಗಳಾದ ಯಶ್ವಂತ್ ಮತ್ತು ಪ್ರತಿಮಾಅವರು ವಿದ್ಯಾರ್ಥಿ ಸಾಧಕರನ್ನು ಪರಿಚಯಿಸಿದರು. ಕೆಡೆಟ್‍ಉದಿತ್ ಮುಖ್ಯ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕೆಡೆಟ್‍ರಕ್ಷಿತಾ ವಂದಿಸಿದರು. ಕೆಡೆಟ್ ಸೀಮಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್‍ಕಮಾಂಡರ್‍ಡಾ. ಶ್ರೀಧರ್ ಭಟ್, ಲೆಫ್ಟಿನೆಂಟ್ ಶುಭಾರಾಣ , ನೆನಪಿನಂಗಳ ಕಾರ್ಯಕ್ರಮ ಸಂಯೋಜಕರು ಮತ್ತು ಪ್ರಾಧ್ಯಾಪಕರಾದಡಾ. ಎಂ. ಪಿ. ಶ್ರೀನಾಥ್, ಮತ್ತು ಶೈಲೇಶ್‍ಕುಮಾರ್, ಶ್ರೀಮತಿ ಭಿಡೆ ಮತ್ತುಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.