ಪುತ್ತೂರಿನಲ್ಲಿ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆ ಶುಭಾರಂಭ
ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಲಕ್ಷಾಂತರ ಜನರ ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್ ಆಗಿದ್ದು, ಇದೀಗ ಪುತ್ತೂರಿನಲ್ಲಿ ತನ್ನ 10ನೇ ಆಭರಣ ಶೋರೂಂ ಉದ್ಘಾಟನೆಗೊಂಡಿತು.
ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಶೋರೂಂನ್ನು ಖ್ಯಾತ ನಟಿ ಪ್ರಿಯಾಮಣಿ ಅವರು ಉದ್ಘಾಟಿಸಿದರು. ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ವೈವಿಧ್ಯಮಯ ವಜ್ರಾಭರಣದ ಸಂಗ್ರಹವನ್ನು ಅನಾವರಣ ಮಾಡಿದರು.
ಎಸ್‌ಡಿಪಿಐ ಅಧ್ಯಕ್ಷ ಹಾಜೀ ಇಬ್ರಾಹಿಂ ಸಾಗರ್ ಆಂಟಿಕ್ ಚಿನ್ನಾಭರಣ ಸಂಗ್ರಹವನ್ನು ಬಿಡುಗಡೆ ಮಾಡಿದರು.
ಮೌಂಟೇನ್ ವ್ಯೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಪಿ. ಅಹಮ್ಮದ್ ಹಾಜಿ ಅಕರ್ಷಣ್ ಚಿನ್ನಾಭರಣ ಸಂಗ್ರಹವನ್ನು ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಸುದಾನ ವಸತಿ ಶಾಲೆಯ ಕರೆಸ್ಪಾಂಡೆಂಟ್ ರೆವರೆಂಡ್ ವಿಜಯ್ ಹಾರ್ವಿನ್, ಲಯನ್ಸ್ ೩೧೭ ಡಿ ಲಿಯೋ ಅಧ್ಯಕ್ಷೆ ಡಾ. ರಂಜಿತಾ ಎಚ್. ಶೆಟ್ಟಿ, ಸುಲ್ತಾನ್ ಡೈಮಂಡ್ಸ್ ಮತ್ತು ಗೋಲ್ಡ್‌ನ ವ್ಯವಸ್ಥಾಪನ ನಿರ್ದೇಶಕ ಡಾ. ಅಬ್ದುಲ್ ರಹೂಫ್, ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ರಹೀಮ್ ಉಪಸ್ಥಿತರಿದ್ದರು.