ಮಂಜೇಶ್ವರ : ವರ್ಕಾಡಿ ಗ್ರಾಮ ಪಂಚಾಯತ್ ಮತ್ತು ಕೆಎಯು –ಇಟಿಸಿ ಮಂಜೇಶ್ವರ ಸಹಯೋಗದಲ್ಲಿ ವರ್ಕಾಡಿ ಪಂಚಾಯತಿನ ಹದಿಮೂರನೇ ಧರ್ಮನಗರ ವಾರ್ಡ್‍ನ ಪಿ.ಎಚ್.ಸಿ- ಕೆವಿಕೆ ರಸ್ತೆಯ ಬದಿಗಳಲ್ಲಿ ಹೂವಿನ ಗಿಡಗಳನ್ನು ನೆಡುವ ಮೂಲಕ ಹರಿತ ರೋಡ್ ಕಾರ್ಯಕ್ರಮಕ್ಕೆ ಹೂವಿನ ಗಿಡಗಳನ್ನು ನೆಟ್ಟು ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಚಾಲನೆ ನೀಡಿದರು. ಪಂಚಾಯತ್ ಅಭಿವೃದ್ಧಿ
ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಹಾಗೂ 8 ವಾರ್ಡುಗಳಲ್ಲಿರುವ ಮಂಜೇಶ್ವರ ರಾಗಂ ಜಂಕ್ಷನ್‍ನಿಂದ ಸಿರಾಜುಲ್ ಹುದಾ ಶಾಲೆಯಲ್ಲಿಂದ ರಸ್ತೆ ಸಂಪೂರ್ಣ ಹದಗೆಟ್ಟಿದು,್ದ ಕಳೆದ 15 ವರ್ಷಗಳಿಂದ ಜನಪ್ರತಿನಿಧಿಗಳಾಗಲೀ ಅಧಿಕಾರಿಗಳಾಗಲೀ ಇತ್ತ ಕಡೆ ತಿರುಗಿಯೂ ನೋಡದೆ ಇರುವುದು ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ಮಳೆ ಸ್ವಲ್ಪ ಸುರಿದರೆ ಸಾಕು.. ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ವಾಹನ ಸವಾರರ ಜೀವನಕ್ಕೂ ಸಂಚಾಕಾರವಾಗುತ್ತಿದೆ. ಈ
ಮಂಜೇಶ್ವರ ಗೋವಿಂದ ಪೈ -ಕೆದಂಬಾಡಿ ರಸ್ತೆ ಗ್ರಾಮೀಣ ಸಡಕ್ ಯೋಜನೆಯಲ್ಲಿ ಲೋಕೋಪಯೋಗಿ ಇಲಾಖೆಯ ಮುತುವರ್ಜಿಯಲ್ಲಿ 6 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಆರಂಭಗೊಂಡ ಮರು ಡಾಮರೀಕರಣ ಕಾಮಗಾರಿ ನಿಧಾನವಾಗಿ ನಡೆಯುತ್ತಿರುವುದು ನಾಗರಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಕಾಮಗಾರಿ ಪರಿಸರವನ್ನು ಶೋಚನೀಯ ಸ್ಥಿತಿಗೆ ತಳ್ಳಿದ್ದು, ವ್ಯಾಪಾರಿಗಳು, ಗ್ರಾಹಕರು, ಜನಸಾಮಾನ್ಯರು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡು
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪೈವಳಿಕೆಗೆ ಆಗಮಿಸಿದ್ದ ನವ ಕೇರಳ ಯಾತ್ರೆಗೆ ಕೇರಳದ ಸಿಎಂ ಪಿಣರಾಯಿ ವಿಜಯ್ ಅವರು ಚಾಲನೆ ನೀಡಿದರು. ರಾಜ್ಯ ಸರಕಾರದ ಅಭಿವೃದ್ದಿಯನ್ನು ಕೊಂಡಾಡಿದ ಮುಖ್ಯಮಂತ್ರಿಯವರು ಕೇಂದ್ರ ಸರಕಾರವನ್ನು ಹಾಗೂ ಯುಡಿಎಫ್‍ನ ಬಗ್ಗೆ ಅಸಮಧಾನ ವ್ಯಕ್ತಪಡಿಸಿ, ಅವರ ವಿರುದ್ಧ ಗಟ್ಟಿಯಾದ ಧ್ವನಿಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲೂ ರಾಜ್ಯ ಸರಕಾರ ಜಾರಿಗೆ ತಂದ ಯೋಜನೆಗಳು ಹಾಗೂ
ಮಂಜೇಶ್ವರ : ತಂದೆಯ ಸಹೋದರ ಕಾರನ್ನು ಮುಂದಕ್ಕೆ ತೆಗೆಯುತ್ತಿರುವ ಮಧ್ಯೆ ಕಾರಿನಡಿಯಲ್ಲಿ ಸಿಲುಕಿ ಒಂದೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ್ದಾನೆ. ಸೋಂಕಾಲ್ ಕೋಡಂಗ ರಸ್ತೆಯ ನಿಸಾರ್ – ತಸ್ರೀಫಾ ದಂಪತಿಗಳ ಪುತ್ರ ಮಾಶಿತುಲ್ ಜಿಶಾನ್ ಸಾವನ್ನಪ್ಪಿದ ದುರ್ದೈವಿ. ಉಪ್ಪಳಕ್ಕೆ ಹೋಗಲು ಬಾಲಕನ ಚಿಕ್ಕಪ್ಪ ಮನೆಯ ಗೇಟಿನೊಳಗೆ ಕಾರಿನಲ್ಲಿ ಆಗಮಿಸುತ್ತಿರುವಾಗ ಕಾರನ್ನು ನೋಡಿ ಎದುರಿಗೆ ಹೋದ ಮಗು ಕಾರಿನ ಮುಂಬಾಗದ ಚಕ್ರದಡಿ ಸಿಲುಕಿ ಈ ದುರ್ಘಟನೆ ಸಂಭವಿಸಿದೆ.
: ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ (MLA AKM Ashraf) ಸಹಿತ ನಾಲ್ವರಿಗೆ ಕಾಸರಗೋಡು ಜ್ಯುಡೀಶಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಒಂದು ವರ್ಷ ಸಜೆ ವಿಧಿಸಿದೆ.2015ರಲ್ಲಿ ನವೆಂಬರ್ 25 ರಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಕಾನ್ಪರೆನ್ಸ್ ಹಾಲ್‌ನಲ್ಲಿ ಚುನಾವಣೆ ಕುರಿತು ಹಿಯರಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಮತದಾರನೋರ್ವನ ಅರ್ಜಿಯಲ್ಲಿ ಲೋಪ ಇರುವ ಕಾರಣ ಬದಿಗಿರಿಸಿದ್ದರು. ಇದರಿಂದ ಕೋಪಗೊಂಡ ಕೆಎಂ ಅಶ್ರಫ್ ಮತ್ತಿತರರು ಅಂದಿನ
ಮಂಜೇಶ್ವರ ಸಮೀಪದ ಕುಂಜತ್ತೂರಿನ ದಾರುಸ್ಸಲಾಂ ಸಲಫಿ ಮಸೀದಿ ತಿರುವಿನಲ್ಲಿರುವ ಖಾಸಗಿ ಅಪಾರ್ಟ್ಮೆಂಟ್‍ನಿಂದ ಶೌಚಾಲಯದ ನೀರು ಸಾರ್ವಜನಿಕ ಸ್ಥಳಕ್ಕೆ ಹಾಗೂ ಸಮೀಪದ ರಸ್ತೆಗೆ ಹರಿದು ಬರುತಿದ್ದು, ಪರಿಸರವೆಲ್ಲ ದುರ್ವಾಸನೆ ಆವರಿಸಿದೆ. ಪರಿಸರವಾಸಿಗಳು ಹಾಗೂ ಈ ದಾರಿಯಿಂದ ಸಾಗುವವರು ಮೂಗು ಮುಚ್ಚಿಕೊಂಡು ಸಾಗುವ ಪರಿಸ್ಥಿತಿ ಎದುರಾಗಿದೆ. ಈ ದಾರಿಯಾಗಿ ದಿನನಿತ್ಯ ಶಾಲೆಗೂ ಮದ್ರಸಕ್ಕೂ ನೂರಾರು ವಿದ್ಯಾರ್ಥಿಗಳು ಈ ಶೌಚಾಲಯದ ನೀರನ್ನು ದಾಟಿಕೊಂಡೇ ಸಾಗಬೇಕಾದ
ಮಂಜೇಶ್ವರದ ಉಪಜಿಲ್ಲಾ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳಲ್ಲಿ ಹಾಗೂ ಖಾಸಗಿ ಶಾಲೆಗಳ ಶೌಚಾಲಯಗಳಲ್ಲಿ ಶುಚಿತ್ವ ಇಲ್ಲದೇ ಇರುವುದು ಪೋಷಕರಲ್ಲಿ ಸಾಂಕ್ರಾಮಿಕ ರೋಗದ ಭೀತಿಯನ್ನು ಹೆಚ್ಚಿಸಿದೆ. ಮಂಜೇಶ್ವರ ಉಪಜಿಲ್ಲೆಯ ವ್ಯಾಪ್ತಿಯಲ್ಲಿರುವ ಶಾಲೆಯೊಂದರಲ್ಲಿ ಶೌಚಾಲಯದಲ್ಲಿ ಮಾಲಿನ್ಯ ಕಟ್ಟಿ ನಿಂತು ದುರ್ವಾಸನೆಯಿಂದ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಆದರೂ ಶಾಲೆಯ ಉಸ್ತುವಾರಿ ವಹಿಸಿಕೊಂಡಿರುವವರು ಈ ಬಗ್ಗೆ ಗಮನ ಹರಿಸುತ್ತಿಲ್ಲ
ಮಂಜೇಶ್ವರದ ನೆತ್ತಿಲ ಪದವು ಗೋವಿಂದ ಪೈ ರಸ್ತೆಯ ಮರುಡಾಮರೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಐದು ಕೋಟಿ ರೂಪಾಯಿ ಮಂಜೂರುಗೊಂಡು ಕಾಮಗಾರಿ ನಡೆಸಲಾಗಿದೆ. ಆದರೆ, ಇದೀಗ ಕಾಮಗಾರಿಯಲ್ಲಿ ಲೋಪದೋಷಗಳು ಕಂಡುಬಂದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಈ ಮೊದಲು ರಸ್ತೆಯು 3 ಮೀಟರ್ 80 ಸೆಂಟಿ ಮೀಟರ್ ಅಗಲವಾಗಿತು. ಆದರೆ ನೂತನವಾಗಿ ನಿರ್ಮಾಣವಾಗುವ ರಸ್ತೆ 5 ಮೀಟರ್ 80 ಸೆಂಟಿ ಮೀಟರ್ ಇರಬೇಕೆಂಬುವುದು ಸ್ಥಳೀಯರ ಬೇಡಿಕೆಯಾಗಿತ್ತು. ಆದರೆ ಈಗಾಗಲೇ ಕಾಮಗಾರಿ
ಮಂಜೇಶ್ವರದ ಕುನ್ನಿಲ್ ನೋಬಲ್ ಫೌಂಡೇಶನ್‍ನ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಡ್ರಗ್ಸ್ ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಉದ್ಯಾವರ ಗುಡ್ಡೆ ಸರಕಾರಿ ಶಾಲೆಯಲ್ಲಿ ಸಂಘಟನೆಯ ಅಧ್ಯಕ್ಷ ಝಕರಿಯ್ಯ ಶಾಲಿಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ರಾಜೇಶ್ ತೆರುವತ್ತ್ ಪೀಡಿಗಯಿಲ್ ಉದ್ಘಾಟಿಸಿದರು. ಮಂಜೇಶ್ವರ ಠಾಣೆಯ ಜನ ಮೈತ್ರಿ ಪೊಲೀಸ್ ಅಧಿಕಾರಿಗಳಾದ ಮಧು ಕರಕಡವತ್ ಹಾಗೂ ಅನೂಪ್