Home Posts tagged #mudubidre (Page 2)

ಮೂಡುಬಿದಿರೆ: ವಿವಿಧ ಸಂಸ್ಥೆಗಳಿಂದ ರಕ್ತದಾನ ಶಿಬಿರ

ಮೂಡುಬಿದಿರೆ: ರಕ್ತದಾನ ಮಾಡುವುದರಿಂದ ಓರ್ವ ವ್ಯಕ್ತಿಯ ಜೀವವನ್ನು ಉಳಿಸಲು ಸಾಧ್ಯವಿದೆ. ನಾವು ಅಂಗಾಂಗ ದಾನದ ಬಗ್ಗೆಯೂ ಗಮನಹರಿಸಬೇಕಾಗಿದೆ. ವಿದೇಶಗಳಲ್ಲಿ ಹೆಚ್ಚಿನ ಜನರು ಅಂಗಾಂಗ ದಾನ ಮಾಡುತ್ತಾರೆ.ಅಂಗಾಂಗ ದಾನ ಮಾಡುವುದರಿಂದ ಮೂರ್ನಾಲ್ಕು ಜನರನ್ನು ಬದುಕಿಸಬಹುದು ಆದ್ದರಿಂದ ತಾನೂ ಕೂಡಾ ಅಂಗಾಂಗ ದಾನ ಮಾಡುವ ಇಚ್ಛೆಯನ್ನು ಹೊಂದಿದ್ದೇನೆ ಎಂದು ಮಾಜಿ ಸಚಿವ

ಹಕ್ಕು ಪತ್ರಕ್ಕಾಗಿ ಹಣವನ್ನು ಕಳೆದುಕೊಳ್ಳಬೇಡಿ : ಶಾಸಕ ಉಮಾನಾಥ್ ಕೋಟ್ಯಾನ್

ನಾವು ಹಕ್ಕುಪತ್ರ ನೀಡುತ್ತೇವೆ ಎಂದು ಮೀಟಿಂಗ್ ಗೆ ಕರೆದು ನಿಮ್ಮಿಂದ ಹಣವನ್ನು ಪಡೆದು ಮೋಸ ಮಾಡುವವರಿದ್ದಾರೆ ಆದ್ದರಿಂದ ಮೋಸದ ಮಾತುಗಳಿಗೆ ಬಲಿಯಾಗಿ ಹಣವನ್ನು ಕಳೆದುಕೊಳ್ಳದಿರಿ ಎಂದು ಶಾಸಕ ಉಮಾನಾಥ್ ಕೋಟ್ಯಾನ್ ಜನರನ್ನು ಎಚ್ಚರಿಸಿದ್ದಾರೆ. ಅವರು ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ 94ಸಿ 57, 94ಸಿಸಿ 17ಮಂಜೂರಾತಿ ಆದೇಶ ಪತ್ರ ಹಾಗೂ ಪಿಂಚಣಿ ದಿನದಂಗವಾಗಿ 31ಪಿಂಚಣಿ ಆದೇಶ ಪತ್ರವನ್ನು ತಾಲೂಕು ಆಡಳಿತ ಸೌಧದಲ್ಲಿ ವಿತರಿಸಿ ಮಾತನಾಡಿದರು.

ಮೂಡುಬಿದಿರೆ : ಪ.ಪೂ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ

ವಿದ್ಯಾರ್ಥಿಗಳು ಕಲಿಕೆ ಜತೆಗೆ ಕ್ರೀಡೆಗೂ ಆದ್ಯತೆಯನ್ನು ನೀಡಬೇಕು. ಪಠ್ಯದಲ್ಲಿ ಸಾಧನೆ ಮಾಡಿದಂತೆ ಕ್ರೀಡೆಯಲ್ಲೂ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗವಕಾಶಗಳಿವೆ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ ಹಾಗೂ ನ್ಯೂ ವೈಬ್ರೆಂಟ್ ಪ.ಪೂ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದ ಮೂಡುಬಿದಿರೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಾರಿವಾಳವನ್ನು ಬಾನೆತ್ತರಕ್ಕೆ ಬಿಡುವ ಮೂಲಕ ಉದ್ಘಾಟಿಸಿ

ಮೂಡುಬಿದಿರೆ: ಅಸಹಾಯಕ ಮಹಿಳೆಗೆ ಸರ್ವೋದಯ ಫ್ರೆಂಡ್ಸ್ ನಿಂದ ಮನೆ ಹಸ್ತಾಂತರ

ಮೂಡುಬಿದಿರೆ: ಪಡುಮಾರ್ನಾಡು ಗ್ರಾಪಂ ವ್ಯಾಪ್ತಿಯ ಅಮನಬೆಟ್ಟು ಬಳಿಯ ಬಡ ಮಹಿಳೆ ಸುಮಾ ಕುಟುಂಬಕ್ಕೆ ಸರ್ವೋದಯ ಫ್ರೆಂಡ್ಸ್ ಬೆದ್ರದಿಂದ ರೂ.7 ಲಕ್ಷ ವೆಚ್ಚದಲ್ಲಿ `ಸರ್ವೋದಯ ನಿಲಯ’ ಎಂಬ ಹೆಸರಿನ ಮನೆ ನಿರ್ಮಿಸಿದ್ದು ಅದನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ನಾವು ನಮ್ಮ ಧರ್ಮವನ್ನು ಉಳಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ. ಬಡವರಿಗೆ,

ಮೂಡುಬಿದಿರೆ: ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ನಿಧನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ತಂದೆ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ (106)ರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನದ ವೇಳೆ ನಿಧನರಾಗಿದ್ದಾರೆ.

ಬೈಕ್ ಕಳವು : ಅಂತರ್ ಜಿಲ್ಲೆ ಚೋರರನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು

ಮೂಡುಬಿದಿರೆ : ಉತ್ತರ ಕನ್ನಡ ಜಿಲ್ಲೆ ಮತ್ತು ದ.ಕ.ದ ಮೂಡುಬಿದಿರೆಯಿಂದ ಬೈಕ್ ಕಳವು ಮಾಡಿರುವ ಅಂತರ್ ಜಿಲ್ಲಾ ಚೋರರನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರ ತಂಡವು ಶುಕ್ರವಾರ ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಅಂಜನೇಯ ದೇವಸ್ಥಾನದ ಬಳಿ ಕೊಡವತಿ ಗ್ರಾಮದ ಆಕಾಶ್ ಕಲ್ಕಿ ಹಾಗೂ ಅಂಜನೇಯ ದೇವಸ್ಥಾನದ ಹತ್ತಿರ, ಬೀರ್ಗನಹಳ್ಳಿಯವೀರೇಂದ್ರ ಬಂಧಿತರು. ಮುಂಜಾನೆಯ ಜಾವ ಮೂಡುಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರಾಂತ ಗ್ರಾಮದ

ಮುಂಬೈಯಲ್ಲಿ ನವರಾತ್ರಿ ವಿಶೇಷ ನಾಟ್ಯಾಯನ

ಮೂಡುಬಿದಿರೆ: ಭಗವದ್ಗೀತೆ, ಸಂಗೀತ, ನೃತ್ಯ, ನಾಟಕ, ಸಂಸ್ಕೃತಿ, ಶಿಕ್ಷಣ ಗಳ ವಿಶಿಷ್ಟ ಸಮ್ಮೇಳನದ ನಾಟ್ಯಾಯನ ಕಾರ್ಯಕ್ರಮ ನೀಡುತ್ತಿರುವ ಮೂಡುಬಿದಿರೆಯಅಯನಾ. ವಿ. ರಮಣ್ ಅನನ್ಯ- ಅದ್ಭುತ ಕಲಾವಿದೆ. ಅಸಾಧಾರಣ ಸ್ಮರಣ ಶಕ್ತಿ, ಪರಿಣಾಮಕಾರಿ ಅಭಿನಯದ ಅದ್ಭುತ ಸಾಧನೆ ಮಾಡಿದ ಕಲಾವಿದೆ. ಈಕೆಗೆ ರಾಷ್ಟçಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ಮುಂಬೈ ಶ್ರೀಗಾಂದೇವಿ ಅಂಬಿಕಾ ಶ್ರೀ ಆದಿನಾಥೇಶ್ವರ ಶ್ರೀಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಪೆರಣ0ಕಿಲ ಹರಿದಾಸ್ ಭಟ್

ಮೂಡುಬಿದಿರೆ ಬಸದಿಗಳಲ್ಲಿ ತೆನೆ ಹಬ್ಬ

ಮೂಡುಬಿದಿರೆ:ವಿಜಯದಶಮಿ ಪ್ರಯುಕ್ತ ಮೂಡುಬಿದಿರೆ ಶ್ರೀ ಜೈನಮಠಹಾಗೂ ಬಸದಿಗಳಲ್ಲಿ ತೆನೆಹಬ್ಬ, ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಅವರ ಮಾರ್ಗದರ್ಶನದಲ್ಲಿ ನಡೆಯಿತು. ದೇಶದ ಸಮಸ್ತರಿಗೆ ಒಳಿತಾಗಲಿ. ಕಾಲ ಕಾಲಕ್ಕೆ ಮಳೆ ಬಂದು ಪ್ರಕೃತಿ ವಿಕೋಪ ವಾಗದೆ, ಲೋಕದಲ್ಲಿ ಶಾಂತಿ, ಸುಭಿಕ್ಷೆ ಉಂಟಾಗಲಿ ಎಂದು ಭಟ್ಟಾರಕ ಸ್ವಾಮೀಜಿ ನುಡಿದರು. ಸಾವಿರಕಂಬ ಬಸದಿ ಹಾಗೂ ಗುರು ಬಸದಿಯಿಂದ ಜೈನಪೇಟೆಯ ಮೂಲಕ ಅಮ್ಮನವರ ಬಸದಿ

ಭಾರತೀಯ ಗಡಿ ಭದ್ರತಾ ಸೇನೆಗೆ ಸಂದೀಪ್ ಎಂ ಶೆಟ್ಟಿ ಮಾರೂರು ಆಯ್ಕೆ

ಮೂಡುಬಿದಿರೆ : ತಾಲೂಕಿನ ಮಾರೂರು ಗ್ರಾಮದ ಅರಮನೆ ಬಳಿಯ ರಾಜು ಶೆಟ್ಟಿ -ರತಿ ದಂಪತಿಯ ಪುತ್ರ ಸಂದೀಪ್ ಎಂ ಶೆಟ್ಟಿ ಮಾರೂರು ಇವರು ಭಾರತೀಯ ಗಡಿ ಭದ್ರತಾ ಸೇನೆಗೆ ಆಯ್ಕೆಯಾಗಿದ್ದಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಮಾರೂರು ಹೊಸಂಗಡಿ ಇಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಎಸ್ ಡಿ ಎಂ ಪೆರಿಂಜೆಯಲ್ಲಿ ಮುಗಿಸಿ, ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪಿಯು ಕಾಲೇಜು ವೇಣೂರಲ್ಲಿ ಹಾಗೂ ಪದವಿ ಶಿಕ್ಷಣವನ್ನು ಮೂಡುಬಿದಿರೆ ಧವಲಾ ಕಾಲೇಜಿನಲ್ಲಿ

ರಾಷ್ಟ್ರೀಯ ಮಲ್ಲಕಂಬ ಕ್ರೀಡಾಕೂಟಕ್ಕೆ ಆಳ್ವಾಸ್ 6 ಕ್ರೀಡಾಪಟುಗಳು ಆಯ್ಕೆ

ಮೂಡಬಿದಿರೆ: ಅ.26ರಿಂದ ಗೋವಾದಲ್ಲಿ ನಡೆಯಲಿರುವ 37ನೇ ರಾಷ್ಟ್ರೀಯ ಮಲ್ಲಕಂಬ ಕ್ರೀಡಾಕೂಟಕ್ಕೆ ರಾಜ್ಯ ತಂಡದ 12 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು ಇದರಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆರು ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.ಆಳ್ವಾಸ್ ಮಲ್ಲಕಂಬ ತಂಡದ ಬಾಲಕರಾದ ಹನುಮಂತ್ ಎಂ., ಆಕಾಶ್ ಪಿ., ವಿನಾಯಕ್ ಕೆ. ಹಾಗೂ ಬಾಲಕಿಯರ ವಿಭಾಗದಲ್ಲಿ ಭಾಗ್ಯಶ್ರೀ ಎಸ್, ದೊಡ್ಡಮ್ಮ ಪಿ, ಕಾವೇರಿ ಎಸ್ ಸೇರಿ ಆರು ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.