Home Posts tagged #padubidri (Page 6)

ತೆರಿಗೆ ಕಟ್ಟಲು ಒತ್ತಡ ಹೇರಿದ ವಿಚಾರ : ಪಲಿಮಾರು ಗ್ರಾ.ಪಂ. ಅಧ್ಯಕ್ಷರಿಗೆ ಧಮ್ಕಿ ಹಾಕಿದ ಕಂಪೆನಿ ಮುಖ್ಯಸ್ಥರು

ತೆರಿಗೆ ಕಟ್ಟಲು ಒತ್ತಡ ಹೇರಿದ್ದಾರೆ ಎಂಬ ಕಾರಣಕ್ಕೆ ನಂದಿಕೂರು ಕೈಗಾರಿಕಾ ವಲಯದಲ್ಲಿ ಕಾರ್ಯಚರಿಸುತ್ತಿರುವ ಕಂಪನಿಯೊಂದರ ಮುಖ್ಯಸ್ಥರು ಪಲಿಮಾರು ಗ್ರಾ.ಪಂ. ಅಧ್ಯಕ್ಷರ ಛೇಂಬರ್ ಗೆ ಹೋಗಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ ಗ್ರಾ.ಪಂ. ಆಢಳಿತ ಸಮಿತಿ ಸದಸ್ಯರು ಅಧ್ಯಕ್ಷರೊಂದಿಗೆ ತೆರಳಿ ಕಂಪನಿ ಪ್ರಮುಖರಿಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಸೃಷ್ಠಿ ಹೆಸರಿನ

ಯುಪಿಸಿಎಲ್ ದೇಶೀಯ ಕಲ್ಲಿದ್ದಲು ಬಳಸುವ ಹುನ್ನಾರ : ಎಲ್ಲೂರು ಗ್ರಾಮ ಸಭೆಯಲ್ಲಿ ವಿರೋಧ

ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಜನವಿರೋಧಿ ಯುಪಿಸಿಎಲ್ ಕಂಪನಿ ವಿದೇಶಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನೆ ನಡೆಸುವ ಒಡಂಬಡಿಕೆ ಇದ್ದರೂ ಇದೀಗ ಅದು ಜನರಿಗೆ ಸಮಸ್ಯೆಯೊಡ್ಡುವ ದೇಶೀ ಕಲ್ಲಿದ್ದಲು ಬಳಸುವ ಹುನ್ನಾರ ನಡೆಸುತ್ತಿದೆ ಎಂಬುದಾಗಿ ಎಲ್ಲೂರು ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಅದರ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಗ್ರಾಮಸಭೆಯಲ್ಲಿ ವಿಚಾರ ಮಂಡನೆ ಮಾಡಿದ ಗ್ರಾಮಸ್ಥ ನಾಗೇಶ್ ರಾವ್, ರಾಜ್ಯದಲ್ಲಿ ವಿದ್ಯುತ್ ಬರ

ಪಡುಬಿದ್ರಿ : ಡಾಮಾರು ಹುಡಿಯನ್ನು ರಸ್ತೆಯಲ್ಲೇ ಬಿಟ್ಟ ಪರಿಣಾಮ ಅಪಘಾತ ಹೆಚ್ಚಳ

ಹೆದ್ದಾರಿಗೆ ಹಾಕಲಾದ ಡಾಮಾರಿನ ಒಂದು ಪದರವನ್ನು ಯಂತ್ರದ ಮೂಲಕ ತೆಗೆಯುತಿದ್ದು, ತೆಗೆದ ಡಾಮಾರು ಹುಡಿಯನ್ನು ರಸ್ತೆಯಲ್ಲೇ ಬಿಟ್ಟು ಹೋದ ಪರಿಣಾಮ ದ್ವಿಚಕ್ರ ಸವಾರರು ಬಿದ್ದು ಗಾಯಗೊಳ್ಳುತ್ತಿರುವ ಘಟನೆ ಪಡುಬಿದ್ರಿಯ ಬೀಡು ಬಳಿ ರಾತ್ರಿ ನಡೆದಿದೆ.ಮಂಗಳೂರು ಕಡೆಯಿಂದಲೂ ಹೆದ್ದಾರಿ ಡಾಮಾರಿನ ಪದರವನ್ನು ಯಂತ್ರದ ಮೂಲಕ ತೆಗೆಯುವ ಕಾಮಗಾರಿ ನಡೆಸುತ್ತಿದ್ದು, ರಾತ್ರಿ ಹೊತ್ತು ರಸ್ತೆಯ ಸುಸ್ಥಿತಿ ಗಮನಕ್ಕೆ ಬಾರದೆ ನಿಯಂತ್ರಣ ಕಳೆದುಕೊಳ್ಳುತ್ತಿದ್ದ ಬೈಕ್ ಸವಾರರು

ಪಡುಬಿದ್ರಿ :ಉಪ್ಪಿನಕಾಯಿ ಬಾಟಲಿ ಒಳಗಡೆ ಹಲ್ಲಿ ಪತ್ತೆ

ಪಡುಬಿದ್ರಿ ಬೀಡು ಬಳಿಯ ನಿವಾಸಿ ಉಮೇಶ್ ಪೂಜಾರಿ ಎಂಬವರು ಮುಲ್ಕಿ ಕಾರ್ನಾಡಿನ ಅಂಗಡಿಯೊಂದರಲ್ಲಿ ಕರೀದಿ ಮಾಡಿದ ಉಪ್ಪಿನ ಕಾಯಿ ಬಾಟಲ್ ಒಳಗಡೆ ಸತ್ತ ಹಲ್ಲಿ ಪತ್ತೆಯಾಗಿ ಕೆಲ ಕ್ಷಣ ಮನೆಮಂದಿ ಆತಂಕ ಪಟ್ಟಿದ್ದಾರೆ.

ಪಡುಬಿದ್ರಿ: ಬಾಡಿಗೆ ಮನೆಗೆ ಕನ್ನ ಹಾಕಿದ ಕಳ್ಳ: ಸ್ಕೂಟರ್ ಬಿಟ್ಟು ಪಲಾಯಣ

ತೆಂಕ ಎರ್ಮಾಳು ಜಂಕ್ಷನ್ ಬಳಿಯ ಬಾಡಿಗೆ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳರು ನಗ, ನಗದು, ಬಟ್ಟೆ, ಪಾತ್ರೆ ಸಹಿತ ಅಕ್ಕಿಯನ್ನೂ ಕದ್ದೋಯ್ಯದಿದ್ದಾರೆ. ಹೆದ್ದಾರಿ ಪಕ್ಕದ ಬಾಡಿಗೆ ರೂಮ್‌ನಲ್ಲಿ ಹಾವೇರಿ ಮೂಲದ ಮಾಸಪ್ಪ ಎಂಬವರ ಕುಟುಂಬ ವಾಸವಾಗಿದ್ದು, ದಸರಾ ಹಬ್ಬಕ್ಕಾಗಿ ಕಳೆದ ಹದಿನೈದು ದಿನಗಳ ಹಿಂದೆ ರೂಮ್‌ಗೆ ಬೀಗ ಹಾಕಿ ಊರಿಗೆ ಹೋಗಿದ್ದು, ಭಾನುವಾರ ಮುಂಜಾನೆ ೫-೩೦ರ ಸುಮಾರಿಗೆ ರೂಮ್ ಕಡೆಗೆ ಬಂದಾಗ ಮಂದ ಬೆಳಕಿನಲ್ಲಿ ಮನೆಮಂದೆ ವ್ಯಕ್ತಿಯೊಬ್ಬರು ನಿಂತಿದ್ದು

ಪಡುಬಿದ್ರಿ ಎಂಡ್ ಪಾಯಿಂಟ್ ಬೀಚ್‍ಗೆ ಮತ್ತೊಮ್ಮೆ “ಬ್ಲೂ ಫ್ಲ್ಯಾಗ್” ಕಿರೀಟ

ಸದಾ ಬದುಕಿನ ಜಂಜಾಟ ಕೆಲಸದ ಒತ್ತಡದ ನಡುವೆಯೂ ‘ಓ ಮನವೇ ರಿಲಾಕ್ಸ್ ಪ್ಲೀಸ್ ‘ ಎನ್ನುವ ಮನಗಳಿಗೆ ಮುದ ನೀಡುವಂತಹ ಬೀಸುವ ತಂಗಾಳಿಯ ಕಡಲ ಅಲೆಗಳ ನರ್ತನ ಮತ್ತೊಂದೆಡೆ ರಮ್ಯ ರಮಣೀಯ ಕಾಮಿನಿ ಹೊಳೆಯ ನಡುವೆ ಪ್ರವಾಸಿಗರನ್ನು ಕೈ ಬೀಸಿ ಸೆಳೆಯುತ್ತಿರುವ ಪ್ರಕೃತಿ ಸೌದರ್ಯದ ಸೊಬಗೇ ಪಡುಬಿದ್ರಿಯ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಬೀಚ್.ಪ್ರವಾಸ್ಯೋದ್ಯಮ ಇಲಾಖೆ ಉಡುಪಿ ಜಿಲ್ಲೆಯ ಪಡುಬಿದ್ರಿ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಬೀಚ್ ಮನಮೋಹಕವಾಗಿ

ನವ ವಿವಾಹಿತೆ ಶವ ಮನೆ ಪಕ್ಕದ ಪಾಳು ಬಾವಿಯಲ್ಲಿ ಪತ್ತೆ

ಕಳೆದ ಆರು ದಿನಗಳ ಹಿಂದೆ ನಾಪತ್ತೆಯಾದ ನವ ವಿವಾಹಿತೆಯ ಶವ ಮನೆಯ ಪಕ್ಕದ ಪಾಳು ಬಾವಿಯಲ್ಲಿ ಪತ್ತೆಯಾದ ಘಟನೆ ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆಮೃತ ನವವಿವಾಹಿತೆ ಎಲ್ಲೂರು ನಿವಾಸಿ ರಕ್ಷಿತಾ ಪೂಜಾರಿ(24), ಈಕೆ ಕಳೆದ ಒಂದುವರೆ ವರ್ಷಗಳ ಹಿಂದೆ ಪಾಂಗಾಳ ನಿವಾಸಿ ಸಂಜಯ್ ಆಚಾರಿ ಎಂಬುವರನ್ನು ಅಂತರ್ ಜಾತಿ ವಿವಾಹವಾಗಿದ್ದ ಈಕೆ ಗಂಡ ಹಾಗೂ ತನ್ನ ತಂದೆಯೊಂದಿಗೆ ಎಲ್ಲೂರಿನ ಮನೆಯಲ್ಲಿ ವಾಸ ವಿದ್ದಳು, ಕಾಪುವಿನ ಮಹಾಬಲ ಮಾರ್ಲ್ ಕಟ್ಟಡದ ಪ್ಯಾನ್ಸಿ

ಪಡುಬಿದ್ರಿಯಲ್ಲಿ ಪುಟಾಣಿಗಳಿಗೆ ವೇಷ ಹಾಕಿ ಭಿಕ್ಷಾಟನೆ

ನವರಾತ್ರಿ ಬಂತೆಂದರೆ ಸಾಕು ಕರಾವಳಿಯಲ್ಲಿ ವೇಷಗಳದ್ದೇ ಕಾರುಬಾರು. ಆದರೆ ಪಾಲಕರು ಏನೂ ತಿಳಿಯದ ಮುಗ್ಧ ಪುಟಾಣಿಗಳ ಮುಖಕ್ಕೆ ಬಣ್ಣ ಬಳಿದು ಜರಿ ಜರಿ ಬಟ್ಟೆ ತೊಡಿಸಿ, ಭಿಕ್ಷಾಟನೆಗೆ ಬಳಕೆ ಮಾಡುವುದು ಪಡುಬಿದ್ರಿ ಪರಿಸರದಲ್ಲಿ ಕಂಡು ಬಂದಿದೆ. ಗರ್ಭಿಣಿ ಮಹಿಳೆ ತನ್ನ ಪುಟ್ಟ ಎರಡು ಮಕ್ಕಳಿಗೆ ವೇಷ ಹಾಕಿ ಭಿಕ್ಷೆ ಬೇಡಿ ಸುತ್ತಿರುವುದು ಕಂಡು ಬಂದಿದೆ. ಸ್ಥಳೀಯರೋರ್ವರು ಆ ಮಹಿಳೆಯೊಂದಿಗೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೂ ನಡೆದಿದೆ. ಏನೂ ತಿಳಿಯದ ಮಕ್ಕಳಿಗೆ ವೇಷ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲ ಉಚ್ಚಿಲ ದಸರಾ : ಡಾ.ಜಿ.ಶಂಕರ್ ಅವರಿಂದ ಉದ್ಘಾಟನೆ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ಈ ಬಾರಿ ಅದ್ದೂರಿಯಾಗಿ ನಡೆಯಲಿರುವ ಉಚ್ಚಿಲ ದಸರಾ ಉತ್ಸವ-2022ರ ಅಂಗವಾಗಿ ದೇವಳದ ಪರಿಸರ ಮತ್ತು ಹೆಜಮಾಡಿಯಿಂದ ಕಾಪು ದೀಪಸ್ಥಂಭದವರೆಗೆ ನಿರ್ಮಿಸಲಾದ ಭವ್ಯವಾದ ವಿದುದ್ದೀಪಾಲಂಕಾರ ವ್ಯವಸ್ಥೆಯನ್ನು ಶ್ರೀ ಕ್ಷೇತ್ರದ ಸ್ವಾಗತ ಗೋಪುರ ಬಳಿ ದೇವಳದ ಗೌರವ ಅಧ್ಯಕ್ಷ ಡಾ.ಜಿ.ಶಂಕರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ರಾಜ್ಯಕ್ಕೇ ಮಾದರಿಯಾಗಿ ಅತ್ಯಂತ ವೈಭವದಿಂದ ಉಚ್ಚಿಲ ದಸರಾ ನಡೆಯಲಿದ್ದು, ನಾಡಿನೆಲ್ಲೆಡೆಯಿಂದ

ಪಡುಬಿದ್ರಿ ಖಾಸಗಿ ಬಸ್‍ನ ಟಯರ್ ಸ್ಪೋಟ, ಪ್ರಯಾಣಿಕನಿಗೆ ಗಾಯ

ಖಾಸಗಿ ವಿಶಾಲ್ ಬಸ್ಸಿನ ಟಯರ್ ಸ್ಫೋಟಗೊಂಡ ಪರಿಣಾಮ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ಕಾಲಿಗೆ ಗಂಭೀರ ಹೊಡೆತ ಬಿದ್ದ ಘಟನೆ ಇದೀಗ ಸಂಜೆ ಪಡುಬಿದ್ರಿ ಬಸ್ ತಂಗುದಾಣದಲ್ಲಿ ನಡೆದಿದೆ. ಗಾಯಾಗೊಂಡವರು ಪ್ರಯಾಣಿಕ ಧನರಾಜ್, ಕಾರ್ಕಳದಿಂದ ಮಂಗಳೂರು ಕಡೆಗೆ ಹೋಗಲು ಪಡುಬಿದ್ರಿ ಬಸ್ ತಂಗುದಾಣದಲ್ಲಿ ಬಂದು ನಿಲ್ಲುತ್ತಿದಂತೆ, ಬಸ್ಸಿನ ಬಲ ಬದಿಯ ಹಿಂದಿನ ಟಯರ್ ಬಾರೀ ಸದ್ದಿನೊಂದಿಗೆ ಸ್ಫೋಟಗೊಂಡಿದ್ದು, ಬಸ್ಸಿನ ಟಯರ್ ನ ಮೇಲ್ಭಾಗ ಪ್ಲಾಟ್ ಪಾರ್ಮ್ ಛಿಂದಿಯಾಗಿ