ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಉಚ್ಚಿಲ ರಾಘವೇಂದ್ರ ಮಠ, ಕಳತ್ತೂರು ರಾಘವೇಂದ್ರ ಮಠ ಸೇರಿದಂತೆ ತಾಲೂಕಿನ ವಿವಿಧೆÉಡೆ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಅರ್ಚಕರಾದ ಜನಾರ್ದನ ತಂತ್ರಿಗಳ ಸಹಕಾರದಲ್ಲಿ ರಾಘವೇಂದ್ರ ಶ್ರೀಗಳ
ಕಾಂತರ ಸಿನಿಮಾ ಮೂಲಕ ಕರಾವಳಿ ದೈವಾರಾಧನೆಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿ ಡಿವೈನ್ ಸ್ಟಾರ್ ಪಟ್ಟ ಪಡೆದುಕೊಂಡ ರಿಶಬ್ ಶೆಟ್ಟಿ ಅವರಿಗೆ ಕರಾವಳಿಯ ಪಾಣರ ಯಾನೆ ದೈವ ನಲಿಕೆ ಸಂಘಟನೆ ವತಿಯಿಂದ ಸೆ.3ರಂದು ಭಾನುವಾರ ಉಡುಪಿಯಲ್ಲಿ ಸನ್ಮಾನ ನಡೆಯಲಿದೆ. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪಾಣರ ಯಾನೆ ನಲಿಕೆ ಸಮಾಜ ಸೇವಾ ಸಂಘದ ವಾರ್ಷಿಕ ಸಮಾವೇಶ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಚಿತ್ರ ನಟ ರಿಶಬ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುತ್ತಿದೆ. ಕಾರ್ಯಕ್ರಮವನ್ನು
ಕಡಬ ಪೇಟೆಯಲ್ಲಿ ವಿದ್ಯುತ್ ತಂತಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳವೊಂದನ್ನು ಕಡಬ ಸಿಟಿ ಫೀಡರ್ ಪವರ್‍ಮ್ಯಾನ್ ಆಗಿರುವ ಪಿ.ಜೆ ಗುರುಮೂರ್ತಿ ಅವರು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಡಬ ಪೇಟೆಯಲ್ಲಿ ಪಾರಿವಾಳವೊಂದರ ಕಾಲಿಗೆ ಪ್ಲಾಸ್ಟಿಕ್ ಹಗ್ಗವೊಂದು ತಗುಲಿ ನಂತರದಲ್ಲಿ ಆ ಪಾರಿವಾಳ ವಿದ್ಯುತ್ ತಂತಿಯಲ್ಲಿ ಸಿಲುಕಿ ಒದ್ದಾಡುತ್ತಿತ್ತು. ತಕ್ಷಣ ಸ್ಥಳೀಯರು ಪವರ್ ಮ್ಯಾನ್ ಗಮನಕ್ಕೆ ತಂದಿದ್ದು ಪವರ್‍ಮ್ಯಾನ್ ಗುರುಮೂರ್ತಿ ತಕ್ಷಣ
ಶಿರ್ವ:ಹೂವಾಗಿ ಅರಳುವ ಮುನ್ನವೇ ವಿಧಿ ಮುಗ್ದ ಹೆಣ್ಣು ಮಗುವಿನ ಬದುಕನ್ನೇ ಕಸಿದು ಬಿಟ್ಟಿದೆ.ನಗು ನಗುತ್ತಾ ಎಲ್ಲರೊಂದಿಗೂ ಬೆರೆತು ಸ್ನೇಹ ಜೀವಿಯಾಗಿದ್ದ ಮುಗ್ದ ಯುವತಿ ವಿಧಿಯಾಟಕ್ಕೆ ಬಲಿಯಾಗಿದ್ದಾಳೆ.ಕ್ಯಾನ್ಸರ್ ಎಂಬ ಮಹಾಮಾರಿ ಅಕೆಯನ್ನ ಬಲಿ ಪಡೆದುಕೊಂಡಿದೆ. ಉಡುಪಿಯ ಶಿರ್ವ ಕಾನ್ವೆಂಟ್ ರಸ್ತೆಯ ಇಪ್ಪತ್ತೊಂದು ವರ್ಷದ ವಿದ್ಯಾರ್ಥಿನಿ ರಿಯಾನಾ ಜೆನ್ ಡಿಸೋಜಾ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದಾಳೆ. ರಿಯಾನಾ ಜೆನ್ ಡಿಸೋಜಾ ಬಿಕಾಂ ಮುಗಿಸಿ ಮಣಿಪಾಲದಲ್ಲಿ ಎಕಾಂ
ವಿಟ್ಲದ ನೀರಕಣಿ ಜೆ.ಎಲ್. ಅಡಿಟೋರಿಯಂನಲ್ಲಿ ಸೆಪ್ಟೆಂಬರ್ 2 ಹಾಗೂ 3ರಂದು ಬೃಹತ್ ಸಸ್ಯಮೇಳ, ಆಹಾರ ಮೇಳ, ವಸ್ತು ಪ್ರದರ್ಶನ, ಮಾರಾಟ ಹಾಗೂ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದು ಮೇಳದ ಅಧ್ಯಕ್ಷ ಜಯರಾಮ್ ಬುಳೇರಿಕಟ್ಟೆ ತಿಳಿಸಿದ್ದಾರೆ. ವಿಟ್ಲದ ಪಂಚಮಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು. ವಿವಿಧ ತಳಿಯ ಸಸ್ಯಗಳು, ನೂರಕ್ಕೂ ಹೆಚ್ಚಿನ ಸ್ಟಾಲ್‍ಗಳು, ಕರಾವಳಿ ಹಲಸಿನ ದೋಸೆ ಸೇರಿದಂತೆ ಸುಮಾರು 60 ಬಗೆಯ ದೋಸೆಗಳು, ಉತ್ತರ
ಬೆಳ್ತಂಗಡಿಯ ಪುದುವೆಟ್ಟುನಲ್ಲಿ ಗುರುವಾರ ಕಬಡ್ಡಿ ಆಟಗಾರ, 24ರ ಹರೆಯದ ಸ್ವರಾಜ್ ಆತ್ಮಹತ್ಯೆ ಮಾಡಿಕೊಳ್ಳಲು ಲೋನ್ ಆ್ಯಪ್ ಕಿರುಕುಳವೇ ಕಾರಣ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ, ಉಜಿರೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಸ್ವರಾಜ್ ನಿನ್ನೆ ಬೆಳ್ತಂಗಡಿಯ ಪುದುವೆಟ್ಟುವಿನಲ್ಲಿರುವ ತನ್ನ ಮನೆಯ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದ. ಇದೀಗ ಆತ ಲೋನ್ ಆ್ಯಪ್ ಮೂಲಕ ಪಡೆದ ಸಾಲವೇ ಸಾವಿಗೆ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆ ಇದರ ಆಶ್ರಯದಲ್ಲಿ ಸೆ.02 ರಿಂದ ಸೆ.06 ರ ವರೆಗೆ ವಿದ್ಯಾಗಿರಿಯ ಕೃಷಿ ಸಿರಿ ವೇದಿಕೆಯಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸುವ, ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ ನಾಯಿಮರಿ ನಾಟಕದ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಶ್ರೀಮತಿ ವೈದೇಹಿ ರಚಿಸಿರುವ ಈ ನಾಟಕವು ಈಗಾಗಲೇ ರಾಜ್ಯದ ಅನೇಕ ಕಡೆಗಳಲ್ಲಿ ಯಶಸ್ವೀ ಪ್ರದರ್ಶನಗೊಂಡ ಅತ್ಯುತ್ತಮ ಮಕ್ಕಳ ನಾಟಕವೆಂಬ ಹೆಗ್ಗಳಿಕೆಗೆ
ಬಿಲ್ಲವ ಸೇವಾ ಸಂಘ(ರಿ ) ಕರಂದಕ್ಕಾಡ್ ಕಾಸರಗೋಡು, ಇದರ ಆಶ್ರಯದಲ್ಲಿ 169ನೇ ಶ್ರೀ ನಾರಾಯಣ ಗುರು ಜಯಂತಿಯನ್ನು ಶ್ರೀ ನಾರಾಯಣ ಗುರು ಸಭಾ ಮಂಟಪದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸಭೆಯಲ್ಲಿ ಶ್ರೀ ಕೇಶವ ಎ ಅಧ್ಯಕ್ಷತೆ ವಹಿಸಿದರು, ಹಿರಿಯ ವ್ಯಕ್ತಿತ್ವ ವಾದ ಸಂತನಡ್ಕ ತರವಾಡಿನ, ಬಾಡೂರ್ ಜಟಾದಾರಿ ದೈವದ ಪೂಜಾರಿಯಾದ ಕರಿಯಪ್ಪ ಪೂಜಾರಿ ಅವರನ್ನು ಫಲ ಪುಷ್ಪಗಳನ್ನು ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅದೇ ರೀತಿ ರಮಾನಂದ ಬಂಗೇರ, ಕೊರಗಪ್ಪ ಪೂಜಾರಿ, ಬಾಬು
ಇನ್ನೂ ಮಳೆಗಾಲ ಮುಗಿದಿಲ್ಲ. ಅದಾಗಲೇ ತುಂಬೆ ವೆಂಟೆಡ್ ಡ್ಯಾಂನಲ್ಲಿ ಗೇಟ್‍ಗಳನ್ನು ಮುಚ್ಚಿ ನೀರು ಸಂಗ್ರಹಣೆ ಆರಂಭಿಸಲಾಗಿದೆ. ಪ್ರತೀ ವರ್ಷ ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಡ್ಯಾಂಲ್ಲಿ ನೀರು ಸಂಗ್ರಹಣ ಆರಂಭವಾಗುತ್ತಿದ್ದರೆ ಈ ಬಾರಿ ಅವಧಿಗಿಂತ ಮೊದಲೇ ನೀರು ಸಂಗ್ರಹಣೆ ಆರಂಭಗೊಂಡಿದೆ. ಈ ಬಾರಿ ಮಳೆಯಿಲ್ಲದೆ ಮಳೆಗಾಲದಲ್ಲಿಯೇ ನದಿ ಬರಡಾಗಿ ಮುಂದಿನ ದಿನಗಳಲ್ಲಿ ಕಾಡಬಹುದಾದ ಬರದ ಛಾಯೆ ಈಗಲೇ ಗೋಚರಿಸಿದೆ. ಜಿಲ್ಲೆಯ ಜೀವನದಿ ನೇತ್ರಾವತಿ ನದಿಯಲ್ಲೂ
ಉಡುಪಿಯ ಜಿಲ್ಲೆಯ ಮುದ್ದೂರು ಎಂಬಲ್ಲಿ ಬಿಜೆಪಿಯವರಿಂದಲೇ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದ್ದು ಗಂಭೀರ ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತ ನೆಂಚಾರು ನಿವಾಸಿ ಪ್ರಭಾಕರ ಪೂಜಾರಿ (51) ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು ಮೊದಲಿನಿಂದಲೂ ಬಿಜೆಪಿಯ ಕಾರ್ಯಕರ್ತರಾಗಿದ್ದ ಪ್ರ್ರಭಾಕರ ಪೂಜಾರಿ ಕಳೆದ ಬಾರಿ ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ




























