Home Posts tagged #u t khader

ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದ ಮಂಗಳೂರಿನ ಶಾಸಕ || U. T. Khader

ವಿಧಾನಸಭೆ ಸಭಾಪತಿ ಸ್ಥಾನಕ್ಕೆ ಮಾಜಿ ಸಚಿವ, ಮಂಗಳೂರಿನ ಶಾಸಕ ಯು.ಟಿ ಖಾದರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ಯು.ಟಿ ಖಾದರ್ ಅವರು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿಗೆ ಅವರಿಗೆ ನಾಮಪತ್ರ ಸಲ್ಲಿಸಿದ್ದರು. ಖಾದರ್ ಅವರನ್ನು ಹೊರತುಪಡಿಸಿ ಮತ್ತ್ಯಾರೂ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರು ಅವಿರೋಧವಾಗಿ

ಮಳೆಗಾಲದಲ್ಲಿ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು-ಶಾಸಕ ಖಾದರ್ ಆದೇಶ

ಉಳ್ಳಾಲ: ಮಳೆಗಾಲದಲ್ಲಿ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಧಿಕಾರಿಗಳು ತಕ್ಷಣದಿಂದ ಕ್ರಮಕೈಗೊಳ್ಳಬೇಕು, ಉಳ್ಳಾಲ ನಗರಸಭೆಯಾದ್ಯಂತ 8 ಟ್ಯಾಂಕರ್ಗಳ ಮೂಲಕ ಸರಬರಾಜು ಆಗುತ್ತಿರುವ ಕುಡಿಯುವ ನೀರು ಸಮರ್ಪಕವಾಗಿ ಎಲ್ಲರ ಉಪಯೋಗಕ್ಕೆ ಬರಬೇಕು. ಕಡಲ್ಕೊರೆತದಿಂದ ಹಾನಿಗೊಳಗಾದ ಮುಕ್ಕಚ್ಚೇರಿ ಸೀಗ್ರೌಂಡ್ ಮತ್ತು ಉಚ್ಚಿಲ ಸೋಮೇಶ್ವರದಲ್ಲಿ ಅನುದಾನ ಮಂಜೂರುಗೊಳಿಸಿದ ತಕ್ಷಣ ಕಾಮಗಾರಿ ಆರಂಭಿಸಿ ಮುಗಿಸಬೇಕು ಎಂದು ಶಾಸಕ ಯು.ಟಿ ಖಾದರ್ ಅಧಿಕಾರಿಗಳಿಗೆ ಆದೇಶ

ಸರ್ವರಿಗೂ ನ್ಯಾಯ ಕೊಟ್ಟು ಗ್ಯಾರಂಟಿ ಕಾರ್ಡ್ ಶೀಘ್ರದಲ್ಲಿ ಅನುಷ್ಠಾನಕ್ಕೆ : ಯು.ಟಿ ಖಾದರ್

ಉಳ್ಳಾಲ: ಸಮಾಜವನ್ನು ಒಗ್ಗಟ್ಟು ಮಾಡುವ ಮೂಲಕ ಬಿಕ್ಕಟ್ಟು ಮಾಡಲು ಬಿಡದೆ ಮುಂದಿನ ಸರಕಾರ ಕಾರ್ಯಾಚರಿಸಲಿದ್ದು, ಸರ್ವ ಧರ್ಮದವರನ್ನು ಪ್ರೀತಿಸಿಕೊಂಡು ಸರ್ವರಿಗೂ ನ್ಯಾಯ ಕೊಟ್ಟು ಗ್ಯಾರಂಟಿ ಕಾರ್ಡ್ ಅತಿಶೀಘ್ರದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ. ತೊಕ್ಕೊಟ್ಟುವಿನಿಂದ ಉಳ್ಳಾಲಕ್ಕೆ ಬೈಕ್ ರ್‍ಯಾಲಿ ಮತ್ತು ರೋಡ್ ಷೋನಲ್ಲಿ ಭಾಗವಹಿಸಿ ತೊಕ್ಕೊಟ್ಟು ಕೊರಗಜ್ಜನ ಕಟ್ಟೆ ಮತ್ತು ಉಳ್ಳಾಲ ಸೈಯದ್ ಮದನಿ ದರ್ಗಾ ಭೇಟಿ ನೀಡಿ

ಮಾ.25ರಂದು ಮೋರ್ಲ ಬೋಳದಲ್ಲಿ ಪ್ರಥಮ ವರ್ಷದ ನರಿಂಗಾನ ಕಂಬಳ

ಉಳ್ಳಾಲ: ಇಲ್ಲಿನ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಕಂಬಳ ಆಯೋಜನೆ ಮಾಡಲಾಗಿದ್ದು ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ಲವಕುಶ ಜೋಡುಕರೆ ಹೆಸರಿನಲ್ಲಿ ನರಿಂಗಾನ ಕಂಬಳ ಮಾ. 25ರಂದು ಹೊನಲು ಬೆಳಕಿನಲ್ಲಿ ನಡೆಯಲಿದ್ದು ಬೆಳಗ್ಗೆ 10.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ತುಳುನಾಡಿನ ಧಾರ್ಮಿಕ ವಿಧಿಗಳೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.ಕಂಬಳ ಕರೆಯ ಬಳಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಮಾ. 25ರಂದು

10 ದಿನದೊಳಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಮೀನುಗಾರರ ಪರವಾಗಿ ಬೃಹತ್ ಹೋರಾಟ : ಯು.ಟಿ. ಖಾದರ್

ಮೀನುಗಾರ ಮುಖಂಡರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರಿಗೆ ತಿಂಗಳಿಗೆ 300 ಲೀಟರ್ ಸೀಮೆಎಣ್ಣೆಯನ್ನು ಉಚಿತವಾಗಿ ವಿತರಿಸಲು ಆರಂಭಿಸಲಾಗಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ಸೀಮೆಎಣ್ಣೆ ಸರಿಯಾಗಿ ವಿತರಣೆ ಆಗುತ್ತಿಲ್ಲ. ಕಳೆದ 10 ತಿಂಗಳಿನಿಂದ ಒಂದೇ ಒಂದು ಲೀಟರ್ ಸೀಮೆಎಣ್ಣೆ ಸಿಕ್ಕಿಲ್ಲ ಎಂದವರು ಹೇಳಿದರು. ಇತ್ತೀಚೆಗೆ ಸೀಮೆಎಣ್ಣೆ ಬಿಡುಗಡೆಗಾಗಿ ಮೀನುಗಾರರು

ಸುರತ್ಕಲ್ ಟೋಲ್ ಗೇಟ್ ಹೆಜಮಾಡಿಗೆ ಶಿಫ್ಟ್ : ಇದು ಹೋರಾಟ ಗಾರರ ಒಂದು ಹಂತದ ಜಯ : ಯು.ಟಿ.ಖಾದರ್

ಸುರತ್ಕಲ್ ಟೋಲ್ ಗೇಟ್ ರದ್ದಾಗಿಲ್ಲ ಅದು ಹೆಜಮಾಡಿಗೆ ಶಿಫ್ಟ್ ಆಗಿದೆ. ಇದು ಹೋರಾಟ ಗಾರರ ಒಂದು ಹಂತದ ಜಯ.ಈ ಹೋರಾಟ ದ ಸಂದರ್ಭದಲ್ಲಿ ಅಲ್ಲಿಗೆ ಹೋಗದೆ ಇರುವವರು ರಾಜಕೀಯ ಲಾಭದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ಮುಂದಿನ ಸಮಸ್ಯೆ ಹೆಜಮಾಡಿ ಟೋಲ್ ಗೇಟ್ ನಲ್ಲಿ ಹೆಚ್ಚು ವರಿ ಹೊರೆ ಕಡಿತಗೊಳಿಸಲು ನಿಯಮ ರೂಪಿಸ ಬೇಕು.2014 ರಿಂದ ಎಂಟು ವರ್ಷ ಯಾರ ಅಧಿಕಾರದಲ್ಲಿದ್ದರು.ಅವರು ಟೋಲ್ ಗೇಟ್

ಹಾಲಿನ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತೆ : ಯು.ಟಿ. ಖಾದರ್

ಹಾಲಿನ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆಯುವ ತೀರ್ಮಾ ನ ಆದುದರಿಂದ ಈ ತೀರ್ಮಾನ ವನ್ನು ಕೆಎಂ ಎಫ್ ಕೈ ಬಿಡಬೇಕು ಮತ್ತು ಸರಕಾರ ಈ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಶಾಸಕ ಹಾಗೂ ವಿಧಾ ನಸಭಾ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಹೇಳಿದ್ರು. ಈ ಕುರಿತು ಮಂಗಳೂರಿನ ಸಕ್ರ್ಯೂಟ್‍ಹೌಸ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹಾಲಿನ ದರ ಹೆಚ್ಚಳ ಕ್ಕೆ ಕಾಂಗ್ರೆಸ್‍ನ ವಿರೋಧ ವಿದೆ.ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ

ತೊಕ್ಕೊಟ್ಟಿನಲ್ಲಿ 100 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಶಾಸಕ ಯು.ಟಿ. ಖಾದರ್ ಅವರಿಂದ ಧ್ವಜಾರೋಹಣ

ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಬಳಿ 100 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಶಾಸಕ ಯು.ಟಿ ಖಾದರ್ ಅವರು ಧ್ವಜಾರೋಹಣ ನೆರವೇರಿಸಿದರು. ವಿಧಾನಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ವಿದ್ಯಾ ಎಂ. ಕಾಳೆ, ತಹಶೀಲ್ದಾರ ಟಿ.ಜಿ. ಗುರುಪ್ರಸಾದ್ಉಳ್ಳಾಲ ನಗರಸಭೆಯ ಅಧ್ಯಕ್ಷರಾದ ಚಿತ್ರಕಲಾ ಕೆ, ಮೈಸೂರು ಇಂಡಸ್ಟ್ರೀಸ್ ಲಿಮಿಟೆಡ್‍ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಬೊಳಿಯಾರ್, ಉಳ್ಳಾಲ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್, ಮಾಜಿ

ಬಂಟ್ವಾಳ ಪುರಸಭೆಗೆ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಬೀಗ ಜಡಿದ ಮಂಗಳೂರು ಶಾಸಕ ಯು.ಟಿ. ಖಾದರ್

ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕದ ಗೇಟಿಗೆ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ಬೀಗ ಜಡಿದಿದ್ದಾರೆ. ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಒಣಕಸ ಮಾತ್ರ ಹಾಕಬೇಕು ಎನ್ನುವ ಸೂಚನೆಯನ್ನು ತಿರಸ್ಕರಿಸಿ ಹಸಿ ತ್ಯಾಜ್ಯಗಳನ್ನು ಹಾಕಿದ್ದ ಪರಿಣಾಮ ತ್ಯಾಜ್ಯಗಳು ಮಳೆ ನೀರಿಗೆ ಕೊಳೆತು ದುರ್ನಾತ ಬೀರಿ ಪರಿಸರವನ್ನು ಕಲುಷಿತಗೊಳಿಸಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ತಪ್ಪಿದ್ದಲ್ಲಿ ಜಿಲ್ಲಾಧಿಕಾರಿ