ಕುಂದಾಪುರ: ತಹಶೀಲ್ದಾರ್  ಶೋಭಾ ಲಕ್ಷ್ಮೀ,  ರಾಜ್ಯಸ್ವ ಅಧಿಕಾರಿ ರಾಘವೇಂದ್ರ, ವಿಎ ಚಂದ್ರಶೇಖರ್ ಮೂರ್ತಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಕುಂದಾಪುರದ ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಲಾಬಿ ಶೆಡ್ತಿ ಮತ್ತು ಅವರ ಪತಿ ಶ್ರೀಧರ್ ಶೆಟ್ಟಿ ಮದ್ರೋಳಿ ಮಂಗನಸಾಲು ಎಂಬವರಿಗೆ ಸಿದ್ದಾಪುರ ಗ್ರಾಮದ ಸರ್ಕಾರಿ ಸ್ಥಳದ ಸರ್ವೇ ನಂಬ್ರ 250/1ರಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿರುವ ಬಗ್ಗೆ ಈಗಾಗಲೇ ಎರಡು ಬಾರಿ ನೋಟಿಸು ನೀಡಿದ್ದರೂ ತಮಗೆ ಸಂಬAಧವೇ ಇಲ್ಲವೆಂದು ಅಕ್ರಮ ಕಟ್ಟಡವನ್ನು ನಿರ್ಮಿಸುತ್ತಿರುತ್ತಾರೆ. ಮೊದಲೇ ನೋಟಿಸ್ ದಿನಾಂಕ 24.08.2020ರಲ್ಲಿ ಶ್ರೀಧರ್ ಶೆಟ್ಟಿಯವರ ಪತ್ನಿ ಗುಲಾಬಿ ಶೆಡ್ತಿಯವರಿಗೆ ನೀಡಿದ್ದು, ಕರ್ನಾಟಕ ಗ್ರಾಮ ಸ್ವರಾಜ್ 1993ರ ಪ್ರಕಾರ ನೋಟಿಸು ನೀಡಿರುತ್ತಾರೆ. ಆದರೂ ಕೂಡ ಆ ಕಟ್ಟಡಕ್ಕೆ ಸ್ಟಾçಬ್ ಹಾಕಿರುತ್ತಾರೆ. ಎರಡನೇ ನೋಟಿಸ್ ದಿನಾಂಕ 31-12-2022ರಂದು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ಕಾಯ್ದೆ 1993ರ ಪ್ರಕರಣ 64(1)ರಂತೆ ಶ್ರೀಧರ ಶೆಟ್ಟಿ ಬಿನ್ ತೇಜಪ್ಪ ಶೆಟ್ಟಿ ಅವರಿಗೆ ನೋಟಿಸ್ ನೀಡಿದ್ದರೂ ಕೂಡ ಸರ್ಕಾರಿ ಸರ್ವೇ ನಂಬ್ರ 250/1ರಲ್ಲಿ ಬೃಹತ್ ಸ್ವಾಬಿನಿಂದ ಕಟ್ಟಡ ನಿರ್ಮಿಸುತ್ತಿದ್ದಾರೆ. ಯಾವುದೇ ನೋಟಿಸಿಗೂ ಬಗ್ಗದೆ ಅಕ್ರಮ ಕಟ್ಟಡ ಕಟ್ಟಲು ಮುಂದಾಗಿದ್ದಾರೆ.

ಅಲ್ಲದೆ ಈಗಾಗಲೇ ಶ್ರೀಧರ ಶೆಟ್ಟಿ ಮತ್ತು ಅವರ ಹೆಂಡತಿ ಗುಲಾಬಿ ಶೆಡ್ತಿಯವರು 2006-2007 ನೇ ಇಸವಿಯಲ್ಲಿ ಪಟ್ಟಾ ಸ್ಥಳದ ಸರ್ವೆ ನಂಬ್ರ 253/8 ರ ದಾಖಲೆಯನ್ನು ಗ್ರಾಮಪಂಚಾಯತ್‌ಗೆ ನೀಡಿ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಿಕೊಂಡಿದ್ದು ಇವರು ಸಿದ್ದಾಪುರ ಗ್ರಾಮದ ಸರ್ವೆ ನಂಬ್ರ 253/8 ರಲ್ಲಿ ಯಾವುದೇ ಮನೆ ನಿರ್ಮಾಣ ಮಾಡದೆ ಸರಕಾರದ ಹಣ ದುರುಪಯೋಗ ಮತ್ತು ಅದಕ್ಕೆ ನೀಡಿರುವ ಮನೆ ನಂಬ್ರ 2 – 2094 ಯನ್ನು ಸರ್ಕಾರಿ ಸ್ಥಳ 250/1 ರಲ್ಲಿ ಸಿಮೆಂಟಿನ ಶೆಡ್ಡಿನಿಂದ ರಚಿಸಿದ ಶೆಡ್ಡಿಗೆ ಮನೆ ನಂಬ್ರ ಹಾಕಿಕೊಂಡಿದ್ದು ಇವರು ಇದೇ ಮನೆ ನಂಬ್ರವನ್ನು ಇಟ್ಟುಕೊಂಡು 94ಸಿ ಅಡಿ ಸುಳ್ಳು ಮಾಹಿತಿ ಅರ್ಜಿ ನೀಡಿರುತ್ತಾರೆ. ಅರ್ಜಿ ಸಂಖ್ಯೆ HST/94C/CR/1386/2014 – 2015 & ಇದೇ ರೀತಿ ಸುಳ್ಳು ಮಾಹಿತಿ ನೀಡುತ್ತಾ ಬಂದಿರುತ್ತಾರೆ. ಅಲ್ಲದೆ ಇವರ ವಿರುದ್ದ ಈಗಾಗಲೇ ಅನೇಕ ಇಲಾಖೆಗಳಲ್ಲಿ ದೂರು ದಾಖಲಾಗಿದ್ದು ತನಿಖೆ ಹಂತದಲ್ಲಿರುತ್ತದೆ. ಈ ಎಲ್ಲಾ ವಿಚಾರಗಳನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.

ಅದರ ಮೇಲೆ ತಹಸಿಲ್ದಾರ್ ಶೋಭಾ ಲಕ್ಷ್ಮೀ ಅವರು ಮತ್ತೆ ಅಕ್ರಮ ಕಟ್ಟಡದ ಕಾಮಗಾರಿ ಮುಂದುವರಿಸಿದ ಬಗ್ಗೆ ಸಾರ್ವಜನಿಕರ ಮತ್ತು ಗ್ರಾಮ ಪಂಚಾಯತ್ ದೂರು ನೀಡಿದ ಕಾರಣದಿಂದ ಅದೇ ಅಕ್ರಮ ಕಟ್ಟಡ ಕಟ್ಟುತ್ತಿರುವ ಬಗ್ಗೆ ಅಂತಿಮ ನೋಟಿಸು ದಿನಾಂಕ 14/4/2023 ಕ್ಕೆ ಜಾರಿ ಮಾಡಿದ್ದು ಅಲ್ಲಿಯೂ ಕೂಡ ಭೂ ಕಂದಾಯ ಕಾಯ್ದೆ 1964ರ ಕಲಾಂ 192ಚಿ ಯಂತೆ ತೆರೆವುಗೊಳಿಸುವ ಬಗ್ಗೆ ಆದೇಶ ಮಾಡಿದ್ದು, ಆದರೂ ಯಾವುದೇ ತೆರವು ಕಾರ್ಯ ಆಗಿರುವುದಿಲ್ಲ. ನಂತರ ದಿನಾಂಕ 31/7/ 2023ರ ನಡವಳಿ ಆದೇಶದಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿರುವವರಿಗೆ ಪೂರಕವಾಗಿ ಆದೇಶವನ್ನು ತಿರುಚಿರುವುದು ಕಂಡುಬAದಿರುತ್ತದೆ. ಈ ಆದೇಶದಲ್ಲಿ ಅಧಿಕ್ರಮಣದಾರರು ನಮೂನೆ 57 ಹಾಗೂ 94 ಸಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ ಆದುದರಿಂದ ಯಥಾ ಸ್ಥಿತಿ ಕಾಪಾಡಲು ಆದೇಶಿಸಿದ್ದಾರೆ.

ಸರಕಾರದ ನಿಯಮಾವಳಿಯಂತೆ ನಮೂನೆ 57ರ ಅರ್ಜಿಯು ಸುಮಾರು 15 ವರ್ಷದ ಹಿಂದಿನಿAದಲೂ ಆ ಸ್ಥಳದಲ್ಲಿ ಕೃಷಿ ಮಾಡಿರಬೇಕು ಎಂದು ಇರುತ್ತದೆ. 94 ಸಿಯಲ್ಲಿ 2015ರ ಹಿಂದಿನ ಮನೆ ಆಗಿರಬೇಕು ಎಂದು ನಿಯಮಾವಳಿ ಹೇಳುತ್ತದೆ. ಆದರೆ ಅತಿಕ್ರಮಣದಾರರು ಕಟ್ಟುತ್ತಿರುವ ಕಟ್ಟಡವು 2020ರ ಕಟ್ಟಡವಾಗಿರುತ್ತದೆ. ಅಲ್ಲದೆ ಈತ ಸರಕಾರದ ಬೆಳಕು ಯೋಜನೆ ಅಡಿ ಇದೇ ಕಟ್ಟಡವನ್ನು ಹಟ್ಟಿ ಎಂದು ತೋರಿಸಿ ಸರಕಾರದ ಬೆಳಕು ಯೋಜನೆ ಫಲಾನುಭವಿಯಾಗಿದ್ದಾನೆ. ಆದರೆ ತಾಹಸಿಲ್ದಾರ್ ಶೋಭಾ ಲಕ್ಷ್ಮೀ ಯವರು ಈ ಎಲ್ಲಾ ಸರಕಾರದ ಆದೇಶವನ್ನು ಗಾಳಿಗೆ ತೂರಿ ಅಕ್ರಮ ಕಟ್ಟಡ ಕಟ್ಟುತ್ತಿರುವವರ ಜೊತೆಗೆ ಶಾಮಿಲ್ ಆಗಿ, ತಮ್ಮ ಅಧಿಕಾರವನ್ನು ದುರ್ಬಳಕೆಪಡಿಸಿ ಕೊಂಡು ಆದೇಶ ಮಾಡಿರುತ್ತಾರೆ. ಹಾಗೆ ಇದರಲ್ಲಿ ಖ. I ರಾಘವೇಂದ್ರ ಹಾಗೂ ಚಂದ್ರಶೇಖರ್ ಮೂರ್ತಿ ಸುಳ್ಳು ವರದಿ ಮಾಡಿ 30,40,60 ವರ್ಷದಿಂದ ವಾಸವಾಗಿದ್ದರೆ ಎಂದು ವರದಿ ಮಾಡಿ ನಮೂನೆ 57 ಹಾಗೂ 940 ಇದೆ ಎಂದು ಸುಳ್ಳು ವರದಿ ಮಾಡಿರುತ್ತಾರೆ. ಆದುದರಿಂದ ಈ ಕೂಡಲೇ ಇವರೆಲ್ಲ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ಅಕ್ರಮ ಕಟ್ಟಡ ತೆರವುಗೊಳಿಸಬೇಕೆಂದು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ

Related Posts

Leave a Reply

Your email address will not be published.