ತೆಲಂಗಾಣದಲ್ಲಿ ಮಂತ್ರಿ ಆದ ಮಾಜೀ ನಕ್ಸಲ್

ತೆಲಂಗಾಣದ ಹೊಸ ಸಂಪುಟದಲ್ಲಿ ಬುಡಕಟ್ಟು ಪ್ರತಿನಿಧಿಯಾಗಿ ಇರುವವರು ದನ್ಸರಿ ಅನಸೂಯ. ಇವರು ಜನರ ನಡುವೆ ಸೀತಕ್ಕ ಎಂದೇ ಪ್ರಸಿದ್ಧರು. ಸಣ್ಣ 14ರ ಪ್ರಾಯದಲ್ಲೇ ಜನಶಕ್ತಿ ನಕ್ಸಲ್ ಗುಂಪು ಸೇರಿ ಹೋರಾಟ ಮಾಡಿದವರು. ಅನಂತರ ಭ್ರಮ ನಿರಸನಗೊಂಡು ಸಾರ್ವಜನಿಕ ಕ್ಷಮಾದಾನದಡಿ ಶರಣಾಗಿದ್ದರು. ಮುಂದೆ ಓದಿ ವಕೀಲೆ ಆದುದಲ್ಲದೆ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಮಾಡಿದರು.

ಈ ನಡುವೆ ಬುಡಕಟ್ಟು ಜನರ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು, ತೆಲುಗು ದೇಶಂ ಸೇರಿ ಒಮ್ಮೆ ಗೆದ್ದರು. ಇನ್ನೊಮ್ಮೆ ಸೋತರು. ತೆಲಂಗಾಣ ರಾಷ್ಟ್ರ ಸಮಿತಿ ಸೇರಿಯೂ ಇದ್ದರು. ಕೊನೆಗೆ ಕಾಂಗ್ರೆಸ್ ಸೇರಿ, ಅದರಿಂದ ಗೆದ್ದು ಬಂದಿದ್ದಾರೆ. ಮಂತ್ರಿಯೂ ಆಗಿದ್ದಾರೆ. (ಹೈದರಾಬಾದ್)
