ತೆಲಂಗಾಣ – ಅಕ್ಬುರುದ್ದೀನ್ ಒವೈಸಿ ಹಂಗಾಮಿ ಸಭಾಪತಿ ; ಪ್ರಮಾಣವಚನ ಬಹಿಷ್ಕರಿಸಿದ ಬಿಜೆಪಿ
ತೆಲಂಗಾಣ ರಾಜ್ಯ ವಿಧಾನ ಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಪ್ರಮಾಣವಚನ ಸ್ವೀಕಾರವನ್ನು ಡಿಸೆಂಬರ್ 9ರ ಶನಿವಾರ ಇಟ್ಟುಕೊಳ್ಳಲಾಗಿದ್ದು, ಅಕ್ಬರುದ್ದಿನ್ ಒವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ. ಇದನ್ನು ವಿರೋಧಿಸಿ ಬಿಜೆಪಿಯ ಶಾಸಕರು ಪ್ರಮಾಣವಚನ ಸಮಾವೇಶವನ್ನೇ ಬಹಿಷ್ಕರಿಸಿದರು. ಘೋಷಾಮಹಲಿನಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ಅವರು ನಾನು ಬದುಕಿರುವವರೆಗೆ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಆವೇಶದಿಂದ ಘೋಷಣೆ ಮಾಡಿದರು.
ಹೊಸ ಸ್ಪೀಕರ್ ಆಯ್ಕೆಯ ಬಳಿಕ ಪ್ರಮಾಣವಚನ ತೆಗೆದುಕೊಳ್ಳುವುದಾಗಿ ಆವೇಶ ತೀರಿದ ಮೇಲೆ ಹೇಳಿದರು. ಎಂಟು ಮಂದಿ ಬಿಜೆಪಿ ಶಾಸಕರಿದ್ದು ಇಂದಿನ ಪ್ರಮಾಣವಚನ ಸ್ವೀಕಾರ ಅಧಿವೇಶನದಿಂದ ಹೊರಗೆ ಉಳಿದರು.2018ರಲ್ಲೂ ಹಂಗಾಮಿ ಸ್ಪೀಕರ್ ಆಗಿ ಎಐಎಂಐಎಂ ಶಾಸಕರೇ ನೇಮಕಗೊಂಡಿದ್ದರು. ಹಿಂದಿನ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‍ರಂತೆ ಈಗಿನ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಸಹ ಎಐಎಂಐಎಂ ಶಾಸಕರನ್ನು ಹಂಗಾಮಿ ಸ್ಪೀಕರ್ ಮಾಡಿರುವುದನ್ನು ರಾಜಾಸಿಂಗ್ ಖಂಡಿಸಿದರು.