ಆಜಾದಿ ಕಾ ಅಮೃತ ಮಹೋತ್ಸವ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ತುಂಬೆ ಅಣೆಕಟ್ಟು

ದೇಶದ 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ” ಆಜಾದಿ ಕಾ ಅಮೃತ ಮಹೋತ್ಸವ” ವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಮಂಗಳೂರು ಮಹಾ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಮಂಗಳೂರು ಮಹಾನಗರ ಪಾಲಿಕಾ ಅಧೀನದ ತುಂಬೆ ಅಣೆಕಟ್ಟನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಸಾರ್ವಜನಿಕರು ಅಗಸ್ಟ್ 13 ರಿಂದ ಅಗಸ್ಟ್ 15 ರವರೆಗೆ ಬಂಟವಾಳ ಬಂಟರ ಭವನದ ಕೆಳಅಂತಸ್ತಿನಿಂದ ಸಂಜೆ 6.00 ರಿಂದ 9.00 ರವರೆಗೆ ವೀಕ್ಷಣೆ ಮಾಡಬಹುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

manasa

Related Posts

Leave a Reply

Your email address will not be published.