ಮಂಗಳೂರು ಸಿಸಿಬಿ ಡಿವೈಎಸ್‌ಪಿ ಪರಮೇಶ್ವರ ಉಡುಪಿಗೆ ಬಡ್ತಿ
ಪರಮೇಶ್ವರ ಅನಂತ ಹೆಗ್ಡೆ ಅವರನ್ನು ಉಡುಪಿಯ ಎರಡನೆಯ ಹೆಚ್ಚುವರಿ ಪೋಲೀಸು ಆಯುಕ್ತರಾಗಿ ನೇಮಕ ಮಾಡಲಾಗಿದೆ.ಮಂಗಳೂರಿನ ಸಿಸಿಬಿ- ಅಪರಾಧ ಪತ್ತೆ ವಿಭಾಗದಲ್ಲಿ ಡಿವೈಎಸ್‌ಪಿ ಆಗಿದ್ದ ಪರಮೇಶ್ವರ ಅವರಿಗೆ ಬಡ್ತಿ ಸಿಕ್ಕಿದೆ.1994ರಲ್ಲಿ ಎಸ್‌ಐ ಆಗಿ ಪರಮೇಶ್ವರ ಅವರು ಪೋಲೀಸು ಇಲಾಖೆಗೆ ಸೇರಿದ್ದರು. ಉಡುಪಿಯಲ್ಲಿ ಈಗಾಗಲೇ ಒಬ್ಬರು ಹೆಚ್ಚುವರಿ ಪೋಲೀಸು ಕಮಿಶನರ್ ಇದ್ದು, ಎರಡನೆಯ ಹೆಚ್ಚುವರಿ ಪೋಲೀಸು ಕಮಿಶನರ್ ಆಗಿ ಪರಮೇಶ್ವರ ಅವರು ಸೇರ್ಪಡೆ ಆಗಿದ್ದಾರೆ.