ಹಾಸನ ; ಅಪಹರಣ ಮಾಡಿದವರಿಂದ ಶಿಕ್ಷಕಿ ಅರ್ಪಿತ ಬಿಡುಗಡೆ
ಹಾಸನದಲ್ಲಿ ನಿನ್ನೆ ಕಾಸಗಿ ಶಾಲೆಯ ಶಿಕ್ಷಕಿಯನ್ನು ಅಪಹರಿಸಿದ್ದ ತಂಡವನ್ನು ಬೆನ್ನಟ್ಟಿ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯಲ್ಲಿ ಅಡ್ಡ ಹಾಕಿದ ಪೋಲೀಸರು ಶಿಕ್ಷಕಿ ಅರ್ಪಿತಳನ್ನು ಗಂಡಾಂತರದಿಂದ ಪಾರು ಮಾಡಿದರು.
ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಅರ್ಪಿತ ಟೀಚರಾಗಿ ದುಡಿಯುತ್ತಿದ್ದಳು. ಸಂಬಂಧಿಕರಾದ ರಾಮು ಮನೆಯವರು ಹದಿನೈದು ದಿನಗಳ ಹಿಂದೆ ಮದುವೆ ಪ್ರಸ್ರಾಪ ಮುಂದಿಟ್ಟಿದ್ದರು. ಆದರೆ ಅರ್ಪಿತ ಒಪ್ಪಿರಲಿಲ್ಲ.
ಆದ್ದರಿಂದ ರಾಮು ಮತ್ತು ತಂಡದವರು ಆಕೆಯನ್ನು ಶಾಲೆಯ ದಾರಿಯಲ್ಲಿ ಅಪಹರಿಸಿದ್ದರು. ಮೊಬಾಯಿಲ್ ಸ್ಥಳ ಮತ್ತು ಕಾರಿನ ಗುರುತು ಹಿಡಿದ ಪೋಲೀಸರು ನೆಲ್ಯಾಡಿಯಲ್ಲಿ ಅಪಹರಣಕಾರರನ್ನು ಅಪಹರಿಸಿದರು. ಪೋಲೀಸರು ಎಳೆದೊಯ್ದು ಕಂಬಿ ಹಿಂದೆ ಕೂರಿಸಿದ್ದಾರೆ.