ಉಡುಪಿ: ಸೇಲ್ ಎಕ್ಸ್ ಪರ್ಟ್ ಬ್ಯುಸಿನೆಸ್ ಸೊಲ್ಯೂಷನ್ಸ್ ನಿಂದ ರೂಪಿ ಬಾಸ್ ಎಮ್ ಎಸ್‌ಎಮ್ ಇ ಮಿಲನ್ ಕಾರ್ಯಕ್ರಮ
ಸೇಲ್ ಎಕ್ಸ್‌ಪರ್ಟ್ ಬ್ಯುಸಿನೆಸ್ ಸೊ ಲ್ಯೂಷನ್ಸ್ ವತಿಯಿಂದ ಎನ್‌ಎಸ್‌ಇ ಎಮರ್ಜ್, ಮತ್ತು ರೋಟರಿ ಉಡುಪಿ ಮಿಡ್ ಟೌನ್ ಸಹಯೋಗದೊಂದಿಗೆ ಎಮ್‌ಎಸ್‌ಎಮ್‌ಇ ಮಿಲನ್ ಡಿ.19ರಂದು ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದಾರೆ.
ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಎಮ್‌ಎಸ್‌ಎಮ್‌ಇ ಬ್ಯುಸ್‌ನೆಸ್ ಓನರ್ಸ್‌ಗಳಿಗೆ ಖುಷಿಯ ವಿಚಾರ. ರೂಪಿ ಬಾಸ್ಎ ಮ್ಎಸ್ಎಮ್ಇ ಮಿಲನ್ ಎಂಬ ಕಾರ್ಯಾಗಾರವನ್ನು ಆಯೋಜಿಸಿದ್ದು, ಅಮೂಲ್ಯವಾದ ನಾಯಕತ್ವದ ಜ್ಞಾನ, ಮಾರಾಟ ಮತ್ತು ಮಾರ್ಕೆಟಿಂಗ್ ಹಾಗೂ ಬ್ರ್ಯಾಂಡಿಂಗ್ ಮತ್ತು ಎಮ್‌ಎಸ್‌ಎಮ್‌ಇ ಹಣಕಾಸು ಷೇರು ವಿನಿಮಯ ಪಟ್ಟಿಯ ಮತ್ತು ಖಾಸಗಿ ಇಕ್ವಿಟಿ ಹೂಡಿಕೆ ಸಂಹವನ ತಜ್ಞರು ದೇಶದ ಉದ್ಯಮದ ದಿಗ್ಗಜರು ಈ ಕಾರ್ಯಾಕ್ರಮದಲ್ಲಿ ಪಾಲ್ಗೊಂಡು ಹಲವಾರು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಈ ಬಗ್ಗೆ ಆಯೋಜಕರಾದ ಸೇಲ್ ಎಕ್ಸ್‌ಪರ್ಟ್ ಬ್ಯುಸಿನೆಸ್ ಸೊಲ್ಯೂಷನ್ಸ್ ಸ್ಥಾಪಕ ಹಾಗೂ ಲೀಡ್ ಕನ್ಸಲ್ಟ್‌ಟೆಂಟ್ ಆದ ಪ್ರವೀಣ್ ಚಂದ್ರ ಅವರು ಮಾಹಿತಿ ನೀಡಿದರು.
ಈ ಕಾರ್ಯಾಗಾರಕ್ಕೆ ಮಂಗಳೂರಿನ ಕಾನ್ಫಿಡ್ರೇಷನ್ ಇಂಡಿಯಾ ಇಂಡಸ್ಟ್ರಿಯ ವಯ್ಸ್ ಚೇರ್‌ಮೆನ್ ಅಜಿತ್ ಕಾಮತ್, ಉಡುಪಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಯ ಅಧ್ಯಕ್ಷರಾದ ಪ್ರಭಾಕರ್ ನಾಯಕ್, ಉಡುಪಿ ಜಿಲ್ಲಾ ಸ್ಮಾಲ್ ಇಂಡಸ್ಟ್ರಿ ಅಸೋಸಿಯೇಶನ್‌ನ ಸೆಕ್ರೆಟ್ರಿ ಕೃಷ್ಣಪ್ರಸಾದ್, ರೋಟರಿ ಜಿಲ್ಲಾ ೩೧೮೨ ಡಿಜಿಇ ಸಿಎ ದೇವ್ ಆನಂದ್, ಡ್ಯೂರೋಟಾಪ್ ಕನ್ಸ್ಟ್ರಕ್ಷನ್ ಕೆಮಿಕಲ್ಸ್ ಪ್ರೈವೆಟ್ ಲಿಮಿಟೆಡ್‌ನ ಎಂ.ಡಿ. ಅಲ್ವಿನ್ ಕ್ವಾಡ್ರಸ್, ರೋಟರಿ ಕ್ಲಬ್ ಉಡುಪಿ ಮಿಡ್‌ಟೌನ್‌ನ ಅಧ್ಯಕ್ಷರಾದ ಭುಜಂಗ ಶೆಟ್ಟಿ, ತಾರ್ಜಾನಿ ಇನ್ಸೂರೆನ್ಸ್‌ನ ಬ್ರಾಕಿಂಗ್ ಪ್ರೈವೆಟ್ ಲಿಮಿಟೆಡ್‌ಮ ಚೇರ್‌ಮೆನ್, ಪ್ರಿನ್ಸಿಪಲ್ ಅಫೀಸರ್ ಪ್ರಭಾಕರ್ ಶೆಟ್ಟಿ, ಸೇಲ್ಸ್ ಎಕ್ಸಪರ್ಟ್ ಬ್ಯುಸಿನೆಸ್ ಸೊಲ್ಯೂಶನ್‌ನ ಸ್ಥಾಪಕರಾದ ಪ್ರವೀಣ್ ಚಂದ್ರ, ಸೇಲ್ ಎಕ್ಸ್‌ಪರ್ಟ್ ಬ್ಯುಸ್‌ನೆಸ್ ಸೊಲ್ಯೂಷನ್‌ನ ಸಲಹಾಗಾರರು ಮತ್ತು ವಕೀಲರಾದ ಪಿ.ಎನ್. ಪ್ರಸನ್ನ ಕುಮಾರ್ ರಾವ್ ಭಾಗವಹಿಸಲಿದ್ದಾರೆ.
ಈ ಕಾರ್ಯಾಗಾರಕ್ಕೆ ಉಚಿತ ನೋಂದಾಣಿಯಾಗಿದ್ದು, ಸೇಲ್ ಬ್ಯುಸೆನೆಸ್ ಸೊಲ್ಯೂಶನ ಸಂಸ್ಥೆಯ ವೆಬ್‌ಸೈಟ್ ನ್ಯೂಸ್ & ಇವೆಂಟ್ ಪೇಜ್ ಮುಖಾಂತರ ಎಮ್‌ಎಸ್‌ಎಮ್‌ಇ ಮಿಲನ್ ಈವೆಂಟ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.