ಉಡುಪಿ: ವಂಡ್ಸೆ ಗ್ರಾ.ಪಂ.ಗೆ ತ್ಯಾಜ್ಯ ವಿಲೇವಾರಿಯ ತಲೆನೋವು..!
ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ ವಂಡ್ಸೆ ಗ್ರಾಮ ಪಂಚಾಯಿತಿ ಸದ್ಯ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಯಾವುದೇ ಪ್ರಶಸ್ತಿಯಿಂದ ಪಂಚಾಯತ್ ಗುರುತಿಸಿಕೊಳ್ಳುತ್ತಿಲ್ಲ ಬದಲಿಗೆ ತ್ಯಾಜ್ಯ ವಿಲೇವಾರಿ ಘಟಕದ ಅಸಮರ್ಪಕ ನಿರ್ವಹಣೆ ವಿಚಾರವಾಗಿ ಸುದ್ದಿಯಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಉತ್ತಮ ತ್ಯಾಜ್ಯ ವಿಲೇವಾರಿ ಮಾಡಿದ್ದ ವಂಡ್ಸೆ ಗ್ರಾಮ ಪಂಚಾಯತ್ ಎಸ್ ಎಲ್ ಆರ್ ಎಂ ಘಟಕದ ನಿರ್ವಹಣೆಯ ಲೋಪದ ಕುರಿತು ಆರೋಪ ಕೇಳಿ ಬಂದಿದೆ.
ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ವಂಡ್ಸೆ ಗ್ರಾಮ ಪಂಚಾಯತಿ ಇತ್ತೀಚಿಗಷ್ಟೇ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಾತ್ರವಾಗಿದೆ. ಅದರಲ್ಲೂ ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಅಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಸ್‍ಎಲ್‍ಆರ್‍ಎಂ ಘಟಕದ ನಿರ್ವಹಣೆಯ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ತ್ಯಾಜ್ಯ ವಿಲೇವಾರಿಯ ವಿಧಿ ವಿಧಾನಗಳನ್ನು ನೋಡುವುದಕ್ಕೆ ಉಳಿದ ಗ್ರಾಮ ಪಂಚಾಯಿತಿ ಗಳಿಂದಲೂ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೆ ಸದ್ಯ ಗ್ರಾಮ ಪಂಚಾಯತ್ ನ ಎಸ್ ಎಲ್ ಆರ್ ಎಂ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ದೂರು ಕೇಳಿಬಂದಿದೆ.
ವಂಡ್ಸೆ ಗ್ರಾಮ ಪಂಚಾಯತ್ ನ ಎಸ್ ಎಲ್ ಆರ್ ಎಂ ಘಟಕ ಈ ಮೊದಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಪಕ್ಕದಲ್ಲಿತ್ತು. ಸುಮಾರು ಒಂದು ವರ್ಷಗಳಿಗೂ ಅಧಿಕಕಾಲ ಇದೇ ಎಸ್ ಯಾ ಎಲ್ ಆರ್ ಎಂ ಘಟಕದಲ್ಲಿ ಏಳು ಗ್ರಾಮದ ತ್ಯಾಜ್ಯವನ್ನ ಸಂಗ್ರಹಿಸುವ ಮೂಲಕ ಸಾಂಕ್ರಾಮಿಕ ರೋಗ ಸೃಷ್ಟಿಗೆ ಘಟಕ ಪರೋಕ್ಷವಾಗಿ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಗ್ರಾಮ ಸಭೆಯಲ್ಲಿ ಪ್ರತಿ ಬಾರಿಯೂ ಇದೇ ವಿಚಾರವಾಗಿ ವಾದ ವಿವಾದಗಳು ನಡೆಯುತ್ತಿದ್ದರು ಕೂಡ ಹೊಸದಾಗಿ ನಿರ್ಮಿಸಲಾಗಿದ್ದ ಎಸ್ ಎಲ್ ಆರ್ ಎಂ ಘಟಕಕ್ಕೆ ಇಲ್ಲಿನ ತ್ಯಾಜ್ಯ ವರ್ಗಾವಣೆ ಮಾಡಲು ಗ್ರಾಮ ಪಂಚಾಯತ್ ಹಿಂದೆ ಮುಂದೆ ನೋಡುತ್ತಿತ್ತು. ಸದ್ಯ ನಮ್ಮ ವಾಹಿನಿಯ ತಂಡ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಹಳೆಯ ಎಸ್ ಎಲ್ ಆರ್ ಎಂ ಘಟಕದಲ್ಲಿದ್ದ ತ್ಯಾಜ್ಯ ಈಗ ಹೊಸ ಎಸ್ ಎಲ್ ಆರ್ ಎಂ ಘಟಕಕ್ಕೆ ವರ್ಗಾವಣೆಯಾಗಿದೆ. ಆದರೆ ಹೊಸ ಎಸ್ ಎಲ್ ಆರ್ ಎಂ ಘಟಕದಲ್ಲೂ ಕೂಡ ತ್ಯಾಜ್ಯದ ರಾಶಿ ಬಿದ್ದಿರುವುದು ಇಲ್ಲಿನ ಅಸಮರ್ಪಕ ವಿಲೇವಾರಿ ಎತ್ತಿ ತೋರಿಸುತ್ತವಂತೆ ಇತ್ತು.
ಒಟ್ಟಾರೆಯಾಗಿ ವಂಡ್ಸೆ ಗ್ರಾಮ ಪಂಚಾಯತ್ ಎಸ್ ಎಲ್ ಆರ್ ಎಂ ಘಟಕದ ನಿರ್ವಹಣೆ ವಿಚಾರದಲ್ಲಿ ಸಾಕಷ್ಟು ಲೋಪಗಳು ಕಂಡು ಬರುತ್ತಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಸಾಕಷ್ಟು ಆದಾಯ ಬರುತ್ತಿದ್ದರೂ ಕೂಡ ಕಸವನ್ನ ಗುಡ್ಡೆ ಹಾಕಿ ಸೂಕ್ತ ವಿಲೇವಾರಿ ಮಾಡದೆ ಸಮಸ್ಯೆ ನೀಡುತ್ತಿರುವುದು ಯಾಕೆ ಎನ್ನುವುದು ಸ್ಥಳೀಯರ ಪ್ರಶ್ನೆ.