ವೀರ ರಾಣಿ ಅಬ್ಬಕ್ಕ ಉತ್ಸವಕ್ಕೆ ಸರ್ಕಾರದಿಂದ ಅನುದಾನ ಕಡಿತ : ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ : ಮಮತಾ ಗಟ್ಟಿ

ಪ್ರತೀ ವರ್ಷ 50 ಲಕ್ಷ ರೂ. ಅನುದಾನ ಮೀಸಲಿಟ್ಟು ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಉತ್ಸವ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು ಕರಾವಳಿಯವರೇ ಆಗಿದ್ದರೂ ಕೇವಲ 10 ಲಕ್ಷ ರೂ. ಮಾತ್ರ ಮೀಸಲಿಟ್ಟಿದ್ದಾರೆ. ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಆರೋಪಿಸಿದ್ದಾರೆ. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರಾಣಿ ಅಬ್ಬಕ್ಕ ದೇಶಕ್ಕಾಗಿ ಹೋರಾಡಿದ ಮಹಾನಾಯಕಿ. ಹಲವು ವರ್ಷಗಳಿಂದ ಅಬ್ಬಕ್ಕ ಹೆಸರಿನಲ್ಲಿ ಉತ್ಸವ ಆಚರಿಸಲಾಗುತ್ತಿತ್ತು. ಅನುದಾನ ಕಡಿತ ಮಾಡಿದ್ದಕ್ಕೆ ಸ್ಟಷ್ಟೀಕರಣ ನೀಡಬೇಕು ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಅಬ್ಬಕ್ಕ ಥೀಂ ಪಾರ್ಕ್ ಮಾಡುವುದಾಗಿ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ಅಬ್ಬಕ್ಕ ಭವನಕ್ಕೆ 8 ಕೋಟಿ ರೂ. ಬಿಡುಗಡೆಯಾಗಿತ್ತು. ಆದರೂ 5 ವರ್ಷದಲ್ಲಿ ಭವನ ಯಾಕೆ ನಿರ್ಮಾಣವಾಗಿಲ್ಲ ಎಂದು ಪ್ರಶ್ನಿಸಿದರು ಕೊನೆಯ ಬಜೆಟ್‍ನಲ್ಲಾದರೂ ಅಬ್ಬಕ್ಕ ಭವನ ನಿರ್ಮಾಣದ ಕೆಲಸಕ್ಕೆ ಚಾಲನೆ ಸಿಗುವಂತಾಗಲಿ ಎಂದು ಆಗ್ರಹಿಸಿದರು. ಈ ಸಂದÀರ್ಭದಲ್ಲಿ ಪ್ರಮುಖರಾದ ಅಪ್ಪಿ, ಶಾಂತಲಾ ಗಟ್ಟಿ, ತನ್ವೀರ್ ಶಾಹಿದಾ, ಚಂದ್ರಕಲಾ ಜೋಗಿ, ಸುರೇಖಾ ಚಂದ್ರಹಾಸ ಉಪಸ್ಥಿತರಿದ್ದರು.

Related Posts

Leave a Reply

Your email address will not be published.