ಉಳ್ಳಾಲ|| ಸಮುದಾಯ ಆಸ್ಪತ್ರೆಯಲ್ಲಿ ಮೂಲಸೌಕರ್ಯದ ಕೊರತೆ: ಡಿವೈಎಫ್‍ಐ ವತಿಯಿಂದ ಪ್ರತಿಭಟನೆ
ಉಳ್ಳಾಲ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು ಸಹಿತ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಡಿವೈಎಫ್‍ಐ ಉಳ್ಳಾಲ ತಾಲೂಕು ಸಮಿತಿಯಿಂದ ಉಳ್ಳಾಲ ಸಮುದಾಯ ಆಸ್ಪತ್ರೆ ಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಡಿವೈಎಫ್‍ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಖಾಯಂ ವೈದ್ಯರನ್ನು ನಿಯುಕ್ತಿ ಮಾಡಲು ಆರೋಗ್ಯ ಇಲಾಖೆ ವಿಫಲವಾಗಿದೆ. ಬಾಣಂತಿಯರಿಗೆ ಬಿಸಿನೀರಿನ ವ್ಯವಸ್ಥೆಯಿಲ್ಲ, 108 ಆಂಬ್ಯುಲೆನ್ಸ್ ಸೇವೆ ಆರೋಗ್ಯ ಕೇಂದ್ರದ ಎದುರುಗಡೆಯಿಲ್ಲ, ತಾಯಿ ಕಾರ್ಡ್ ಕೊಡಲು ತಿಂಗಳುಗಟ್ಟಲೆ ವಿಳಂಬ ಮಾಡಲಾಗುತ್ತಿದೆ. ವಿಭಾಗಗಳಿದ್ದರೂ ವೈದ್ಯರಿಲ್ಲ. ಒಟ್ಟಿನಲ್ಲಿ ಆಸ್ಪತ್ರೆಯಿದ್ದರೆ ವೈದ್ಯರಿಲ್ಲ, ವೈದ್ಯರಿದ್ದರೆ ಚಿಕಿತ್ಸೆಯಿಲ್ಲ, ಚಿಕಿತ್ಸೆಗಳಿದ್ದರೆ ಔಷಧಿಯಿಲ್ಲ, ಔಷಧಿಗಳಿದ್ದರೆ ಸಿಬ್ಬಂದಿಗಳಿಲ್ಲ ಎಲ್ಲಾ ಅವ್ಯವಸ್ಥೆ ಕುರಿತು ಸ್ಥಳೀಯ ಶಾಸಕರನ್ನು ಜನ ಪ್ರಶ್ನಿಸಬೇಕಿದೆ ಎಂದು ಡಿವೈಎಫ್‍ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಆಗ್ರಹಿಸಿದ್ದಾರೆ.
ತಾಲೂಕು ಅಧ್ಯಕ್ಷ ರಝಾಕ್ ಮೊಂಟೆಪದವು ಹಾಗೂ ಕೋಶಾಧಿಕಾರಿ ನಿತಿನ್ ಕುತ್ತಾರ್ ಆಸ್ಪತ್ರೆಯ ಕುಂದುಕೊರತೆಯ ವಿರುದ್ದ ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್‍ಐ ಉಳ್ಳಾಲ ತಾಲೂಕು ಉಪಾಧ್ಯಕ್ಷರಾದ ರಝಾಕ್ ಮುಡಿಪು, ಜೊತೆ ಕಾರ್ಯದರ್ಶಿ ಅಮೀರ್ ಉಳ್ಳಾಲ ಬೈಲ್, ಜಿಲ್ಲಾ ಉಪಾಧ್ಯಕ್ಷರಾದ ರಫೀಕ್ ಹರೇಕಳ, ಮುಖಂಡರಾದ ಅಸ್ಬಾಕ್ ಅಲೇಕಳ, ಹರೇಕಳ ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಕೆ.ಹೆಚ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಕುಮಾರ್ ತೊಕ್ಕೊಟ್ಟು, ಪದ್ಮಾವತಿ ಶೆಟ್ಟಿ, ಉಳ್ಳಾಲ ತಾಲೂಕು ಕಾರ್ಯದರ್ಶಿ ಜಯಂತ್ ನಾಯ್ಕ್, ಮುಖಂಡರಾದ ಕೆ.ಹೆಚ್ ಹಮೀದ್, ಇಬ್ರಾಹಿಂ ಮದಕ ,ಜನಾರ್ದನ ಮೊದಲಾದವರು ಪಾಲ್ಗೊಂಡಿದ್ದರು.