ಎರ್ಮಾಳಿನ ಅಕ್ರಮ ಕೋಳಿಯಂಕಕ್ಕೆ ದಾಳಿ : ಒಂಭತ್ತು ಮಂದಿ ವಶಕ್ಕೆ
ಎರ್ಮಾಳಿನ ಬಾರೊಂದರ ಹಿಂಬದಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕೋಳಿಯಂಕಕ್ಕೆ ದಾಳಿ ಮಾಡಿದ ಪೊಲೀಸರು ಒಂಭತ್ತು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ವಶದಲ್ಲಿರುವವರು ಸುರೇಂದ್ರ ಬೆಳಪು, ಮಹೇಶ್ ಕುರ್ಕಾಲು, ಗಣೇಶ್ ಶೆಟ್ಟಿ ಎಲ್ಲೂರು, ಉಮೇಶ್ ಪೂಜಾರಿ ಕಾಪು, ಶ್ರೀಕಾಂತ್ ಉಚ್ಚಿಲ, ಸಂತೋಷ್ ಉಚ್ಚಿಲ, ರಾಜೇಂದ್ರ ಎಲ್ಲೂರು, ರಾಮ ತೆಂಕ ಎರ್ಮಾಳು, ಯೋಗೀಶ್ ಶೆಟ್ಟಿ ಕುಂಜೂರು.
ಎರ್ಮಾಳಿನ ಬಾರ್ ಹಿಂಭಾಗದಲ್ಲಿ ಅಕ್ರಮ ಕೋಳಿಯಂಕ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಏಕಾಏಕಿ ದಾಳಿ ನಡೆಸಿದಾಗ ಸೇರಿದ ಮಂದಿ ಚೆಲ್ಲಾಪಿಲ್ಲಿಯಾಗಿ ಓಡಿದ್ದು, ಒಂಭತ್ತು ಮಂದಿ ಸಹಿತ ಹನ್ನೊಂದು ಬೈಕ್, ಒಂದು ಅಟೋ ರಿಕ್ಷಾ, ಹನ್ನೊಂದು ಕೋಳಿಯನ್ನು ಪಡುಬಿದ್ರಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.