ಜನರನ್ನು ಕಂಬಕ್ಕೆ ಕಟ್ಟಿ ಹೊಡೆಯಲು ನಿಮಗೆ ಅಧಿಕಾರ ಇದೆಯೇ? ಹೋಗಿ ಜೈಲು ಸಿಕ್ಷೆ ಅನುಭವಿಸಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗವಾಯಿಯವರು ಕೋಪದಿಂದ ಹೇಳಿದರು. ಅಲ್ಲದೆ ಸರ್ವೋಚ್ಚ ನ್ಯಾಯಾಲಯವು ಶಿಕ್ಷಿತ ಪೋಲೀಸರಿಗೆ ಛೀಮಾರಿ ಹಾಕಿತು. ಇನ್ಸ್‍ಪೆಕ್ಟರ್ ಎ. ವಿ. ಪರ್ಮಾರ್, ಸಬ್ ಇನ್ಸ್‍ಪೆಕ್ಟರ್ ಡಿ. ಬಿ. ಕುಮಾವತ್ ಮತ್ತು ಇಬ್ಬರು
ಮ್ಯಾನ್ಮಾರ್ ಮಿಲಿಟರಿ ವಿಮಾನವೊಂದು ಭಾರತದ ಮಿಜೋರಾಂನ ಲೆಂಗ್‍ಪುಯಿಯಲ್ಲಿ ನೆಲಕ್ಕೆ ವೇಗವಾಗಿ ಒರೆಸಿದ್ದು ಅದರಲ್ಲಿದ್ದ ಗಾಯಗೊಂಡ 14 ಜನರನ್ನು ಲೆಂಗ್‍ಪುಯಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಥಳೀಯ ಡಿಜಿಪಿ ಹೇಳಿದ್ದಾರೆ. ಮಂಗಳವಾರ ಮ್ಯಾನ್ಮಾರ್ ವಿಮಾನವು ಲೆಂಗ್‍ಪುಯಿ ವಿಮಾನ ನಿಲ್ದಾಣಕ್ಕೆ ಬಡಿದು ಕೆಳಗಿಳಿದಿದೆ. ಪೈಲಟ್ ಸಹಿತ ಅದರಲ್ಲಿದ್ದ 14 ಮಂದಿ ಗಾಯಗೊಂಡಿದ್ದಾರೆ. ಕೂಡಲೆ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ, ನಾವು ಕೂಡ ರಾಮ ಮತ್ತು ಆಂಜನೇಯನ ಭಕ್ತರೇ.. ಬಿಜೆಪಿ ರಾಮನನ್ನು ರಾಜಕೀಯಕರಣ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಉಡುಪಿಯಲ್ಲಿ ಬಿಜೆಪಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ ಸಚಿವರು.ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯ, ಬಿಜೆಪಿಗೆ ಅಭಿವೃದ್ಧಿ ಮತ್ತು ಬಡವರ ಚಿಂತನೆ ಬೇಕಾಗಿಲ್ಲ. ಎಷ್ಟು ಜನರಿಗೆ ನೀರಾವರಿ ವ್ಯವಸ್ಥೆ ಮಾಡಿದ್ದೀರಿ ಉದ್ಯೋಗ
ಭ್ರಷ್ಟಾಚಾರದ ಕಾರಣಕ್ಕೆ ಭಾರತದ ಶಾಸಕಾಂಗ, ಕಾರ್ಯಾಂಗಗಳು ಜನರ ವಿಶ್ವಾಸ ಕಳೆದುಕೊಂಡಿದ್ದರೂ ನ್ಯಾಯಾಂಗವು ಜನರ ನಂಬಿಕೆ ಉಳಿಸಿಕೊಂಡಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ. ಜಿ. ಉಮಾ ಹೇಳಿದರು. ಅವರು ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಹಾಲ್‍ನಲ್ಲಿ ನಡೆದ ಮಹಿಳಾ ವಕೀಲರ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಂಗವು ಬಲವಾಗಿದ್ದರೆ ಪ್ರಜಾಪ್ರಭುತ್ವವೂ ಗಟ್ಟಿ. ಭಾರತದ ನ್ಯಾಯಾಂಗ ಅಚಲವಾಗಿದೆ. ಆದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ
ಲೋಕ ಸಭಾ ಚುನಾವಣೆ ಸಂಬಂಧ ಚುನಾವಣಾ ಆಯೋಗದ ಕೋರಿಕೆಯಂತೆ ಉಡುಪಿ ಜಿಲ್ಲೆಯ ಸದ್ಯದ ಅಂತಿಮ ಅರ್ಹ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಪ್ರಕಟಿಸಿದರು. ಜಿಲ್ಲೆಯ ಐದೂ ವಿಧಾನ ಸಭಾ ಕ್ಷೇತ್ರಗಳು ಸೇರಿ 10,45,296 ಅರ್ಹ ಮತದಾರರು ಇದ್ದಾರೆ. ಇವರಲ್ಲಿ 5,40,833 ಮಹಿಳೆಯರು, 5,04,448 ಗಂಡಸರು ಹಾಗೂ 15 ಮಂದಿ ತೃತೀಯ ಲಿಂಗಿಗಳಾಗಿದ್ದಾರೆ. ಹೊಸದಾಗಿ ಮತದಾರ ಪಟ್ಟಿಗೆ ಸೇರಿದ ಯುವ ಸಮುದಾಯದ ಸಂಖ್ಯೆ 10,245 ಆಗಿದೆ. ಯಥಾಪ್ರಕಾರ ಮತದಾರರ
ನನ್ನನ್ನು ಗಡಿಪಾರು ಮಾಡುವುದಕ್ಕೆ ಮೊದಲು ನೀನು ಗಡಿಪಾರು ಆಗುವುದರಿಂದ ರಕ್ಷಿಸಿಕೋ ಎಂದು ಮಾಜೀ ಸಚಿವ ಬಿ. ಕೆ. ಹರಿಪ್ರಸಾದ್ ಅವರು ಮತ್ತೊಬ್ಬ ಮಾಜೀ ಮಂತ್ರಿ ಶ್ರೀರಾಮುಲುಗೆ ಎಚ್ಚರಿಕೆ ನೀಡಿದ್ದಾರೆ. ರಾಮುಲು ಅವರೆ ನೀವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಹಲವು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಬರೆದು ಹೇಳಿದ್ದೀರಿ. ಕಳ್ಳ ಗಣಿಗಾರಿಕೆ ಮಾಡಿ, ತೆರಿಗೆ ವಂಚಿಸಿ ದೇಶದ್ರೋಹ ಮಾಡಿದ್ದೀರಿ. ನಿಮ್ಮ ಗೃಹ ಮಂತ್ರಿ ಅಮಿತ್ ಶಾರನ್ನು ಕೋರ್ಟು
ಮಹಾರಾಷ್ಟ್ರದ ಸಚಿವ ಸಂಪುಟ ಸಭೆ ಸೇರಿ ಹೊಸ ಉದ್ಘಾಟನೆ ಆಗಲಿರುವ ಸಮುದ್ರ ಸೇತುವೆಗೆ 250 ರೂಪಾಯಿ ಸುಂಕ ನಿರ್ಧಾರ ಮಾಡಿತು. ವಾಹನಗಳಿಗೆ 250 ರೂಪಾಯಿ ಸುಂಕವನ್ನು ಹಲವು ಸಮಾಜ ಸೇವಕರು ಖಂಡಿಸಿದರು. ಚುನಾವಣೆ ಬರುವಾಗ ಇಷ್ಟು ಸುಂಕವಾದರೆ ಚುನಾವಣೆ ಮುಗಿದ ಮೇಲೆ ಸುಂಕ ದುಪ್ಪಟ್ಟು ಮಾಡುವ ದುರಾಲೋಚನೆ ನಿಮ್ಮದು ಎಂದು ಕೆಲವರು ಕೀಟಲೆ ಮಾಡಿದ್ದೂ ಆಯಿತು. ಭಾರತದ ಅತಿ ಉದ್ದದ ಸೇತುವೆಯಾದ ಇದನ್ನು ಪ್ರಧಾನಿ ಮೋದಿಯವರು ಮುಂದಿನ ವಾರ ಉದ್ಘಾಟನೆ ಮಾಡಲಿರುವರು. ಮುಂಬಯಿ
ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತರರಾಷ್ಟ್ರ ಚಲನಚಿತ್ರ ಅಕಾಡೆಮಿ ಯೋಜಿತ ಅಂತರರಾಷ್ಟ್ರ ಚಲನಚಿತ್ರೋತ್ಸವದಲ್ಲಿ ಮೂಗಜ್ಜನ ಕೋಳಿ ಚಿತ್ರದ ನಟನೆಗಾಗಿ ಕುಸಲ್ದರಸೆ ನವೀನ್ ಡಿ. ಪಡೀಲ್ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಜೀಟಿಗೆ ಚಿತ್ರದ ಬಳಿಕ ಸಂತೋಷ್ ಮಾಡ ನಿರ್ದೇಶಿಸಿದ ಅರೆ ಭಾಷೆಯ ಚಿತ್ರ ಮೂಗಜ್ಜನ ಕೋಳಿ. ಇದರಲ್ಲಿ ನವೀನ್ ಪಡೀಲ್ ಅವರು ಮೂಗಜ್ಜನ ಪಾತ್ರ ವಹಿಸಿದ್ದಾರೆ. ಕೋಳಿಗಳ ವಿಷಯದಲ್ಲಿ ಜೀವ ಇಟ್ಟಿರುವ ಮಾತೇ ಇಲ್ಲದ ಒರಟು ಮುದುಕನ
ಮಂಗಳೂರು ಬೋಳಾರದ ಮಂಗಳಾದೇವಿ ದೇವಸ್ಥಾನದ ಹೆಸರನ್ನು ಗೂಗಲ್ ಭೂಪಟದಲ್ಲಿ ಯಾರೋ ಕಿಡಿಗೇಡಿಗಳು ಪೀರ್ ದರ್ಗಾ ಕಾಂಪೌಂಡ್ ಎಂದು ತಿದ್ದಿರುವುದಾಗಿ ತಿಳಿದು ಬಂದಿದೆ. ಇದನ್ನು ಸರಿಪಡಿಸುವಂತೆ ದೇವಾಲಯದ ಆಡಳಿತ ಮಂಡಳಿಯವರು ದೂರು ದಾಖಲಿಸಿದ್ದಾರೆ. ಇದು ಕುಕೃತ್ಯ ಎಂದೂ ಖಂಡಿಸಿದ್ದಾರೆ.
ರಾತ್ರಿ ಹೊತ್ತು ಗ್ಯಾಸ್ ಸಾಗಾಟ ವಾಹನವೊಂದನ್ನು ಅಪಾಯಕಾರಿ ಸ್ಥಿತಿಯಲ್ಲಿ ಹೆದ್ದಾರಿಯಲ್ಲೇ ನಿಲ್ಲಿಸಿ ಮದ್ಯ ಸೇವಿಸಲು ಹೋದ ಚಾಲಕ ಪೊಲೀಸರ ಅತಿಥಿಯಾಗಿದ್ದಾನೆ. ಮೂಡಬಿದರೆಯದ್ದು ಎನ್ನಲಾದ ಎಚ್‌ಪಿ ಅನಿಲ ಸಾಗಾಟ ವಾಹನವನ್ನು ಅದರ ಚಾಲಕ ಕಟಪಾಡಿ ಪೇಟೆಬಳಿ ಹೆದ್ದಾರಿಯಲ್ಲೇ ನಿಲ್ಲಿಸಿ ತೆರಳಿದ್ದು, ಸ್ಥಳಕ್ಕೆ ಬಂದ ಕಟಪಾಡಿಯ ಉಪ ಠಾಣಾ ಪೊಲೀಸ್ ಒರ್ವರು ಸುಮಾರು ಅರ್ಧ ಗಂಟೆ ಕಾದು ಆ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಕಂಠಪೂರ್ತಿ ಕುಡಿದು ಬಂದ ಚಾಲಕ ತಾನು