ಮಂಗಳೂರು: ಅಪ್ಸರಾ ಐಸ್‍ಕ್ರೀಂ ಪ್ರಾಂಚೈಸಿ ಶುಭಾರಂಭ
ವಿವಿಧ ಬಗೆಯ ಪ್ಲೇವರ್ ಮತ್ತು ವಿಭಿನ್ನ ಟೇಸ್ಟಿಗಳನ್ನು ಹೊಂದಿರುವ ಅಪ್ಸರಾ ಐಸ್‍ಕ್ರೀಂ ಮಂಗಳೂರಿನ ಕದ್ರಿಯಲ್ಲಿ ಶುಭಾರಂಭಗೊಂಡಿತು. ಐಸ್‍ಕ್ರೀಂಗಳಿಗೆ ಮನಸೋಲದವರೇ ಇಲ್ಲ.…ಪ್ರತಿಯೊಬ್ಬರು ಐಸ್‍ಕ್ರೀಂಗಳನ್ನು ಇಷ್ಟಪಡುತ್ತಾರೆ. ಅಂತಹ ಐಸ್‍ಕ್ರೀಂ ಪ್ರೀಯರಿಗೆ ಅಪ್ಸರಾ ಐಸ್‍ಕ್ರೀಂ ಔಟ್‍ಲೆಟ್ ಉದ್ಘಾಟನೆಗೊಂಡಿದೆ. ಕಾಮಾಕ್ಷಿ ಎಂಟರ್‍ಪ್ರೈಸಸ್ ಅವರ ಅಪ್ಸರಾ ಐಸ್‍ಕ್ರೀಂ ಪ್ರಾಂಚೈಸಿಯು ನಗರದ ಕದ್ರಿಯ ಸಿಟಿಗೇಟ್ ಕಮರ್ಶಿಯಲ್ ಕಾಂಪ್ಲೆಕ್ಸ್‍ನಲ್ಲಿ ಆರಂಭಗೊಂಡಿತು.
ನೂತನ ಪ್ರಾಂಚೈಸಿಯನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಇಂಡಸ್ಟ್ರೀ ಅಧ್ಯಕ್ಷರಾದ ಗಣೇಶ್ ಕಾಮತ್, ಅಪ್ಸಾರ್ ಐಸ್‍ಕ್ರೀಂನ ಶಾಖೆ ಮಂಗಳೂರಿನಲ್ಲಿ ಆರಂಭಗೊಂಡಿದ್ದು, ಎಲ್ಲರೂ ಬಂದು ವಿವಿಧ ಬಗೆಯ ಪ್ಲೇವರ್‍ಗಳ ಐಸ್‍ಕ್ರೀಂಗಳನ್ನು ಸವಿಯಿರಿ ಎಂದು ಹೇಳಿದರು.
ಅಪ್ಸರಾ ಐಸ್‍ಕ್ರೀಂನ ಮಾಲಕರಾದ ಶ್ರೀಕಾಂತ್ ಅವರು ಮಾತನಾಡಿ, 1971ರಿಂದ ಅಪ್ಸರಾ ಐಸ್‍ಕ್ರೀಂ ಆರಂಭವಾಗಿದ್ದು, ಹಲವು ತರಹದ ಪ್ಲೇವರ್ಸ್‍ಗಳಿವೆ. ಎಲ್ಲರೂ ಕದ್ರಿಯಲ್ಲಿ ಆರಂಭಗೊಂಡಿರುವ ಅಪ್ಸರಾ ಐಸ್‍ಕ್ರೀಂಗೆ ಭೇಟಿ ನೀಡಿ ಐಸ್‍ಕ್ರೀಂಗಳ ವಿವಿಧ ಪ್ಲೇವರ್‍ಗಳನ್ನು ಅಸ್ವಾಧಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಮಾಕ್ಷಿ ಗ್ರೂಪ್‍ನ ಪಾಲುದಾರರಾದ ಮಾಧವ ನಾಯಕ್, ನಿವೇದಿತಾ ನಾಯಕ್, ನಿಯತಿ ನಾಯಕ್ ಉಪಸ್ಥಿತರಿದ್ದರು.
1971ರಲ್ಲಿ ಸ್ಥಾಪನೆಯಾದ ಅಪ್ಸರಾ ಐಸ್‍ಕ್ರೀಂ ಈಗಾಗಲೇ 25ಕ್ಕೂ ಹೆಚ್ಚು ಸಿಟಿಗಳಲ್ಲಿ 50ಕ್ಕೂ ಹೆಚ್ಚು ಪ್ಲೇವರ್‍ಗಳಲ್ಲಿ, ನೂರಕ್ಕೂ ಹೆಚ್ಚು ಔಟ್‍ಲೆಟ್‍ಗಳನ್ನು ಹೊಂದಿದೆ. ಪಾನಿಪುರಿ, ಗುವಾ ಗ್ಲೋರಿ ಸೇರಿದಂದರೆ ವಿವಿಧ ಬಗೆಯ ಪ್ಲೇವರ್‍ಗಳನ್ನು ಹೊಂದಿದೆ. ಜಿಮ್ಮೀಸ್ ಸೂಪರ್ ಮಾರ್ಕೆಟ್ ಬಳಿಯ ಕದ್ರಿ ಸಿಟಿ ಗೇಟ್ ಕಮರ್ಷಿಯಲ್ ಕಾಂಪ್ಲೆಕ್ಸ್‍ನ ನೆಲ ಮಹಡಿಯಲ್ಲಿ ಮಳಿಗೆಯಿದ್ದು, ಬೆಳಿಗ್ಗೆ 10ರಿಂದ ಮಧ್ಯರಾತ್ರಿ 1ರ ವರೆಗೆ ತೆರೆದಿರುತ್ತದೆ. ಒಂದು ವಾರದ ವರೆಗೆ ಸ್ಕೂಪ್‍ಗಳ ಮೇಲೆ ಶೇ.50ರಷ್ಟು ರಿಯಾಯಿತಿ ಇದೆ.