Home Articles posted by v4team (Page 427)

ಗದ್ದೆಗಿಳಿದು ನಾಟಿ ಮಾಡಿದ ಮಾಜಿ ಶಾಸಕ ರಘುಪತಿ ಭಟ್

ಉಡುಪಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕೆ .ರಘುಪತಿ ಭಟ್ ರವರ ಪರಿಕಲ್ಪನೆಯ ಹಡಿಲು ಭೂಮಿಯ ಕೃಷಿಯ ಯೋಜನೆಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಕೈಜೋಡಿಸಿದೆ. ಆರೂರು ರಂಜೆಬೈಲ್‍ನ ಕುಮಾರ ಶೆಟ್ಟಿಯವರ ಗದ್ದೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣರು ನಾಟಿಗೆ ಅಗೆಯನ್ನು ನೀಡುವ ಮೂಲಕ ಚಾಲನೆ ನೀಡಿದರು. ಹಡಿಲು ಭೂಮಿಯ ಕೃಷಿಯ ಕನಸುಗಾರ ಉಡುಪಿ ಮಾಜಿ

ಉಪ್ಪುಂದ ಮಡಿಕಲ್‍ನಲ್ಲಿ ದೋಣಿ ದುರಂತ : ಅವಘಡದಲ್ಲಿ ಓರ್ವ ಮೃತ್ಯು, ಇನ್ನೋರ್ವರಿಗಾಗಿ ಹುಡುಕಾಟ

ಬೈಂದೂರು ತಾಲ್ಲೂಕಿನ ಉಪ್ಪುಂದ ಮಡಿಕಲ್‍ನ ಕರ್ಕಿಕಳಿ ಎಂಬಲ್ಲಿ ಸಂಜೆ ದೋಣಿ ದುರಂತ ಸಂಭವಿಸಿದ್ದು, ಒಬ್ಬರು ಮೃತಪಟ್ಟು ಒಬ್ಬರು ನಾಪತ್ರೆಯಾಗಿದ್ದಾರೆ. ನಾಗೇಶ್ (30)ಮೃತಪಟ್ಟಿದ್ದು, ಸತೀಶ್ ಖಾರ್ವಿ(34) ನಾಪತ್ತೆಯಾಗಿರುವ ಮೀನುಗಾರ. ಸಚಿನ್ ಖಾರ್ವಿ ಮಾಲೀಕತ್ವದ ಮಾಸ್ತಿ ಮರ್ಲು ಚಿಕ್ಕು ಪ್ರಸಾದ ಹೆಸರಿನ ನಾಡದೋಣಿಯಲ್ಲಿ ಬೆಳಿಗ್ಗೆ ಭಟ್ಕಳ ಬಂದರಿನಿಂದ ಮೀನುಗಾರಿಕೆಗೆ ತೆರಳಿ ಮೀನುಗಾರಿಕೆ ಮುಗಿಸಿಕೊಂಡು ಉಪ್ಪುಂದ ಮಡಿಕಲ್‍ನ ಕರ್ಕಿಕಳಿ ಬಳಿ

ನೈತಿಕ ಪೊಲೀಸ್ ಗಿರಿ ನಡೆಸಿದ್ರೆ ನಿರ್ದಾಕ್ಷಿಣ್ಯ ಕ್ರಮ : ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ

ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಮಳೆ ಹಾನಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಮಳೆ ಹಾನಿ ಬಗ್ಗೆ ಪರಿಶೀಲನೆ ಮಾಡಿ ಸಭೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅವರು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣದ ಬಗ್ಗೆ ಮಾತನಾಡಿದ ಅವರು ಕೇಸ್ ಸಂಬಂಧ ಮಾಹಿತಿ ಪಡೆಯುತ್ತೇನೆ. ಈಗಾಗಲೇ ಎಫ್‍ಐಆರ್ ಆಗಿದೆ, ಡಿಸಿಪಿ

ನರಿಂಗಾನ ಗ್ರಾ.ಪಂ.ನ ದ್ವಿತೀಯ ಹಂತದ ಗ್ರಾಮಸಭೆ

ನರಿಂಗಾನ ಗ್ರಾಮದಲ್ಲಿ ರೈತರು ಹಿಂದಿನಿಂದಲೂ ಹೈನುಗಾರಿಕೆ ಬಗ್ಗೆ ಒಲವು ಹೊಂದಿದ್ದು ಅತಿ ಹೆಚ್ಚು ದನಗಳನ್ನು ಸಾಕುತ್ತಿದ್ದಾರೆ. ಆದರೆ ಗೋವುಗಳಿಗೆ ಆರೋಗ್ಯದಲ್ಲಿ ಏರುಪೇರಾದಾಗ ಸ್ವತಃ ದನದ ಮಾಲೀಕರೇ ಪಶು ವೈದ್ಯರ ಬಳಿಗೆ ಹೋದರೂ ಚಿಕಿತ್ಸೆಗೆ ಬರುತ್ತಿಲ್ಲ. ವೈದ್ಯರು ಈ ರೀತಿ ವರ್ತಿಸಿದರೆ ಹೈನುಗಾರಿಕೆ ಹೇಗೆ ಅಭಿವೃದ್ಧಿ ಸಾಧ್ಯ ಎಂದು ನರಿಂಗಾನ ಗ್ರಾಮಸ್ಥರೊಬ್ಬರು ನರಿಂಗಾನಗ್ರಾಮ ಪಂಚಾಯ್ ಸಭಾಭವನದಲ್ಲಿ ನಡೆದ ದ್ವಿತೀಹ ಹಂತದ ಗ್ರಾಮಸಭೆಯಲ್ಲಿ ವೈದ್ಯರನ್ನು

ತಲಪಾಡಿ, ಅಪ್ರಾಪ್ತೆಗೆ ಕಿರುಕುಳ : ಪೋಕ್ಸೊ ಕಾಯಿದೆಯಡಿ ಆರೋಪಿ ಬಂಧನ

ಉಳ್ಳಾಲ: ಅಪ್ರಾಪ್ತೆ ಮೇಲೆ ಕಿರುಕುಳ ನೀಡಿರುವ ಘಟನೆ ತಲಪಾಡಿ ರಿಕ್ಷಾ ಸ್ಟ್ಯಾಂಡ್ ಬಳಿ ಇಂದು ಸಂಜೆ ವೇಳೆ ನಡೆದಿದ್ದು, ಆರೋಪಿ ಮುಡಿಪು ದರ್ಖಾಸು ಸೈಟ್ ನಿವಾಸಿ ಮುವಾದ್ (35) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.ಆರೋಪಿ ಮುವಾದ್ ವಿರುದ್ಧ ಕೊಣಾಜೆ ಠಾಣೆಯಲ್ಲಿ ಗಾಂಜಾ ಸಹಿತ ಇತರೆ ಎರಡು ಪ್ರಕರಣಗಳಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇಂದು ಸಂಜೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಶಾಲೆಯಿಂದ

ಪಡುಬಿದ್ರಿ ಬೀಚ್‌ಗೆ ಆಗಮಿಸಲಿರುವ ಸಿಎಂ : ಪೊಲೀಸ್ ಕಟ್ಟೆಚರ, ತಾತ್ಕಾಲಿಕ ರಸ್ತೆ ದುರಸ್ಥಿ ಕಾರ್ಯ

ಮುಖ್ಯ ಮಂತ್ರಿ ಸಿದ್ದರಾಮಯ್ಯ ಪಡುಬಿದ್ರಿ ಕಡಲು ಕೊರೆತ ವೀಕ್ಷಣೆಗಾಗಿ ಇಲ್ಲಿನ ಮುಖ್ಯ ಬೀಚ್ ಗೆ ಆಗಮಿಸುವ ಹಿನ್ನಲೆಯಲ್ಲಿ ಪೊಲೀಸ್ ಕಟ್ಟೆಚರ ವಹಿಸಲಾಗಿದೆ. ಪಡುಬಿದ್ರಿಯ ಪ್ರಸಿದ್ಧ ಬ್ಲೂ ಫ್ಲ್ಯಾಗ್ ಬೀಚ್ ಗೆ ಕಡಲು ಕೊರೆತದಿಂದ ಆದ ಹಾನಿಯ ಬಗ್ಗೆ ವೀಕ್ಷಣೆ ಮಾಡಬೇಕಾಗಿದ್ದರೂ ಅಂತಿಮ ಕ್ಷಣದಲ್ಲಿ ಬದಲಾಗಿ ಬಾರೀ ಹಾನಿಯಾದ ಮುಖ್ಯ ಬೀಚ್‌ನ್ನು ಮುಖ್ಯ ಮಂತ್ರಿಗಳು ವೀಕ್ಷಣೆ ನಡೆಸಲಿದ್ದಾರೆ.ಮುಖ್ಯ ಮಂತ್ರಿಗಳು ಬರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಬೀಚ್

ಪಚ್ಚನಾಡಿ ದೇವಿನಗರದಲ್ಲಿ ಬಹಳ ಅದ್ದೂರಿಯಿಂದ ನಡೆದ SRR ವಾಲಿಬಾಲ್ 2K23 ಪಂದ್ಯಾಕೂಟ

ಮಂಗಳೂರು ನಗರದ ಪಚ್ಚನಾಡಿ ದೇವಿನಗರದಲ್ಲಿ ದಿನಾಂಕ 30/07/2023 ರ ಆದಿತ್ಯವಾರ ಶ್ರೀ ರಾಜರಾಜೇಶ್ವರಿ ಈವೆಂಟ್ಸ್ ಹಾಗೂ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್(ರಿ) ಪಚ್ಚನಾಡಿ ಇವರ ನೇತೃತ್ವದಲ್ಲಿ SRR Tropy 2K23 ಸ್ಥಳೀಯ ಮಟ್ಟದ ವಾಲಿಬಾಲ್ ಪಂದ್ಯಾಕೂಟವು ಬಹಳ ವಿಜೃಂಭಣೆಯಿಂದ ಪಚ್ಚನಾಡಿ ದೇವಿನಗರದ ಕೇಂದ್ರ ಮೈದಾನದಲ್ಲಿ ನೆರವೇರಿತು. . ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಸತೀಶ್ ಬಂದಲೆ ( ಧರ್ಮದರ್ಶಿಗಳು ಶ್ರೀಮಂತ ರಾಜ ಗುಳಿಗ ಕ್ಷೇತ್ರ ಹಾಗೂ ತುಳು ರಂಗಭೂಮಿ

ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಆ.26ರಂದು ಉದ್ಯೋಗ ಮೇಳ

ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು, ಬಿಇಡಬ್ಲ್ಯುಎಸ್ ಯುವವಾಹಿನಿ ಕೇಂದ್ರ ಸಮಿತಿ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳವು ಆಗಸ್ಟ್ ೨೬ರಂದು ನಡೆಯಲಿದೆ.ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ಆಗಸ್ಟ್ 26ರಂದು ನಡೆಯಲಿದೆ. ದೇಶದ ವಿವಿಧ ಕಡೆಗಳಿಂದ ಪ್ರತಿಷ್ಠಿತ ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸಲಿದೆ. ಉದ್ಯೋಗ ಮೇಳವನ್ನು ಬಿಎಸ್‌ಡಬ್ಲ್ಯುಎಸ್ ಮಂಗಳೂರಿನ ಅಧ್ಯಕ್ಷರಾದ ಅಶೋಕ್ ಕುಮಾರ್ ಉದ್ಘಾಟಿಸಲಿದ್ದಾರೆ. ಯುವವಾಹಿನಿ

ಕರ್ನಾಟಕದಲ್ಲಿ “ಮದ್ರಾಸ್ ಐ” ರೋಗದ ಆತಂಕ

ಕರ್ನಾಟಕದಲ್ಲಿ ಪಿಂಕ್ ಐ, ಕಾಂಜಂಕ್ಟಿವಿಟಿಸ್ ಅಥವಾ ಮದ್ರಾಸ್ ಐ ರೋಗ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದ್ದು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಮದ್ರಾಸ್ ಐ ರೋಗ ಹೆಚ್ಚಾಗಿ ಇರುವುದರಿಂದ ಪೋಷಕರಲ್ಲಿ ಆತಂಕ ಹೆಚ್ಚಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇನ್ನು ಈ ರೋಗ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾದ ಹಿನ್ನೆಲೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ

ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣ : ದ.ಕ. ಜಿಲ್ಲಾ ಬಿಜೆಪಿಯಿಂದ ಘಟನೆ ಖಂಡಿಸಿ ಪ್ರತಿಭಟನೆ

ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ನಡೆಸಿದ ಘಟನೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರು ಪುರಭವನದ ಎದುರು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಯಾಗಿ, ರಾಷ್ಟ್ರ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಅದರ ಭಾಗವಾಗಿ ಉಡುಪಿಯ ಕಾಲೇಜಿನಲ್ಲಿ ಘಟನೆ ನಡೆದಿದೆ. ಇದು ಕೇರಳ