Home Articles posted by v4team (Page 584)

ಕರಾವಳಿಯಲ್ಲಿ ಮತ್ತೆ ವರುಣನ ಆರ್ಭಟ : ತಾತ್ಕಲಿಕ ನೆರೆಯಿಂದ ಜನರ ಪರದಾಟ

ಕರಾವಳಿಯಲ್ಲಿ ರಾತ್ರಿಯಿಡೀ ಭಾರೀ ಮಳೆಯಾಗಿದ್ದು ನದಿ, ತೊರೆಗಳು ತುಂಬಿ ಹರಿಯತೊಡಗಿದೆ. ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ‌ ಸ್ಥಿತಿ ಎದುರಾಗಿದೆ. ಮುಂಜಾಗ್ರತೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಶಾಲೆ, ಕಾಲೇಜಿಗೆ ರಜೆ ಸಾರಲಾಗಿದೆ. ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ನಿರಂತರ ಮಳೆಯಾಗಿದೆ. ಪಶ್ಚಿಮ

ಮಾಜಿ ಸಚಿವ ಎಂ.ಆರ್. ಸೀತಾರಾಂ ಬಿಜೆಪಿ ಸೇರದಂತೆ ಮನವೊಲಿಸಿ: ಚಿಕ್ಕಬಳ್ಳಾಪುರ ಬಲಿಜ ಮುಖಂಡರಿಂದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಗೆ ಮನವಿ

ಬೆಂಗಳೂರು, ಜು, 4; ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಬಲಿಜ ಜನಾಂಗದ ಹಿರಿಯ ಮುಖಂಡ, ಮಾಜಿ ಸಚಿವ ಎಂ.ಆರ್. ಸೀತಾರಾಂ ನಿರ್ಣಾಯಕ ಪಾತ್ರ ವಹಿಸಲಿದ್ದು, ಅವರು ಪಕ್ಷ ತೊರೆಯದಂತೆ ಮನವೊಲಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಲಿಜ ಜನಾಂಗದ ಮುಖಂಡರು ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರಿದ್ದಾರೆ. ಬೆಂಗಳೂರಿನಲ್ಲಿಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಈ

ಪೌರ ಕಾರ್ಮಿಕರ ಮುಷ್ಕರ : ಬಿ.ಎಸ್.ಪಿ ಬೆಂಬಲ

ದ. ಕ. ಜಿಲ್ಲಾ ಪೌರ ಕಾರ್ಮಿಕರ ಸಂಘದ ವತಿಯಿಂದ ಪೌರ ಕಾರ್ಮಿಕರನ್ನು ಖಾಯಂ ಗೊಳಿಸಲು ನಡೆಯುತ್ತಿರುವ ಅನಿರ್ಧಿಷ್ಟ ಪ್ರತಿಭಟನಾ ಧರಣಿಗೆ ಬಿಎಸ್ ಪಿ ದ. ಕ. ಜಿಲ್ಲಾ ವತಿಯಿಂದ ಬೆಂಬಲ ವ್ಯಕ್ತ ಪಡಿಸಲಾಯಿತು. ಸಭೆಯನ್ನು ಉದ್ದೇಶಿಸಿ ಬಿಎಸ್ ಪಿಯ ರಾಜ್ಯ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ಮತ್ತು ಬಿಎಸ್ ಪಿ ಜಿಲ್ಲಾ ಅಧ್ಯಕ್ಷ ದಾಸಪ್ಪ ಎಡಪದವುಮಾತನಾಡಿದರು. ಪೌರ ಕಾರ್ಮಿಕರನ್ನು ಖಾಯಂ ಗೊಳಿಸಲು ಬಿಎಸ್ ಪಿ ವತಿಯಿಂದಮುಖ್ಯಮಂತ್ರಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ

ಮಿಸೆಸ್ ಯುಎಇ ಅಂತರಾಷ್ಟ್ರೀಯ ಸ್ಪರ್ಧೆ : ಪುತ್ತೂರಿನ ಪವಿತ್ರ ಶೆಟ್ಟಿ 1ನೇ ರನ್ನರ್ ಅಪ್

ಪುತ್ತೂರಿನ ಪವಿತ್ರ ಶೆಟ್ಟಿ ಅವರು 2022 ರ ಜೂನ್ 26 ರಂದು ದುಬೈ ಸಿಲಿಕಾನ್ ಓಯಸಿಸ್‍ನ ರಾಡಿಸನ್ ರೆಡ್‍ನಲ್ಲಿ ನಡೆದ ಪ್ರತಿಷ್ಠಿತ ಮಿಸೆಸ್ ಯುಎಇ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಒಂದನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.ಯುಎಇಯಲ್ಲಿ ವಾಸಿಸುವ ಎಲ್ಲಾ ರಾಷ್ಟ್ರೀಯತೆಗಳಿಗೆ ಮುಕ್ತವಾಗಿರುವ ಈ ಸ್ಪರ್ಧೆಯು ಮಧ್ಯಪ್ರಾಚ್ಯದಲ್ಲಿ ಅತಿದೊಡ್ಡ ಮತ್ತು ಅತ್ಯಂತ ಪಾರದರ್ಶಕ ಸ್ಪರ್ಧೆಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ಪ್ರತಿಷ್ಠಿತ ಮತ್ತು ಗಣ್ಯ

ಮಿಸ್ಟರ್ ಅಂಡ್ ಮಿಸೆಸ್ ಯುಎಇ ಇಂಟರ್ ನ್ಯಾಶನಲ್ ಸ್ಪರ್ಧೆ : ಶೈನಿಂಗ್ ಸ್ಟಾರ್ ಆಗಿ ಬೋಳಾರದ ಪ್ರಾಪ್ತಿ ರಿತೇಶ್ ಶೆಟ್ಟಿ

ಯುಎಇ: ಜನಪ್ರಿಯ ಸೌಂದರ್ಯ ಸ್ಪರ್ಧೆ “ಮಿಸ್ಟರ್ ಅಂಡ್ ಮಿಸೆಸ್ ಯುಎಇ ಇಂಟರ್ ನ್ಯಾಶನಲ್ ಸ್ಪರ್ಧೆಯನ್ನು ಪುರುಷರು ಮತ್ತು ಮಹಿಳೆಯರಿಗಾಗಿ ಆಯೋಜನೆ ಮಾಡಿದ್ದು, ಮಂಗಳೂರಿನ ಬೋಳಾರದ ಪ್ರಾಪ್ತಿ ರಿತೇಶ್ ಶೆಟ್ಟಿ ಅವರು ಶೈನಿಂಗ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ದುಬೈನಲ್ಲಿರುವ ಯುಎಇಯ ಸಿಲಿಕಾನ್ ಓಯಸಿಸ್‍ನ ರಾಡಿಸನ್ ಪಂಚತಾರ ಹೋಟೆಲ್‍ನ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಪ್ರಾಪ್ತಿ ರಿತೇಶ್ ಶೆಟ್ಟಿ ಯವರು ಅಬುಧಾಬಿ ಯ ಶಾಲೆಯಲ್ಲಿ

ಬೇಡಿಕೆ ಈಡೇರಿಸುವಂತೆ ಪೌರ ಕಾರ್ಮಿಕರ ಮುಷ್ಕರ : ಪೌರ ಕಾರ್ಮಿರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ ಎಎಪಿ

ಕಳೆದ ನಾಲ್ಕು ದಿನಗಳಿಂದ ಮಳೆ ಗಾಳಿ ಅನ್ನದೆ ಮುಷ್ಕರ ನಿರತ ಪೌರ ಕಾರ್ಮಿಕರನ್ನು ಭೇಟಿಯಾಗಿ ಸಾಂತ್ವಾನ ಹೇಳುವ ಕೆಲಸವನ್ನು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ಕಾಮತ್ ಅವರ ತಂಡ ಇಂದು ಮಾಡಿತು. “ನಗರವನ್ನು ಸ್ವಚ್ಚವಾಗಿ ಇಡುವಲ್ಲಿ ಪೌರ ಕಾರ್ಮಿಕರ ಪಾಲು ಅತಿ ದೊಡ್ಡದು. ಪೌರ ಕಾರ್ಮಿಕರನ್ನು ಗೌರವಯುತವಾಗಿ ಕಾಣುವುದು ನಮ್ಮೆಲ್ಲರ ಕರ್ತವ್ಯ. ಹಾಗಿರುವಾಗ ಯಾವುದೇ ಚುನಾಯಿತ ಪ್ರತಿನಿಧಿಗಳು ಮುಷ್ಕರ ನಿರತ ಪೌರ ಕಾರ್ಮಿಕರನ್ನು ಭೇಟಿಯಾಗಿ ಸಾಂತ್ವನ ಹೇಳದೆ

ಮಂಗಳೂರು ಸ್ಮಾರ್ಟ್‍ಸಿಟಿ ಕಾಮಗಾರಿ ಅವೈಜ್ಞಾನಿಕ : ಮಂಗಳೂರಿನಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿಕೆ

ಮಂಗಳೂರಿನ ಸ್ಮಾರ್ಟ್ ಸಿಟಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಇದೀಗ ಜನತೆಗೆ ತೊಂದರೆ ಉಂಟಾಗಿದೆ. ಅಧಿಕಾರಿಗಳು ತಪ್ಪು ಮಾಡಿದ್ದಲ್ಲಿ ಜನಪ್ರತಿನಿಧಿಗಳು ಕೇಳಬೇಕು, ಸಾಮಾನ್ಯ ಜನರಿಗೆ ನ್ಯಾಯ ಎಲ್ಲಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಪೂರ್ವ ಆಲೋಚನೆ, ಪೂರ್ವ ಯೋಜನೆ ಬೇಕು.ನಗರದಲ್ಲಿ ಚರಂಡಿ, ರಾಜಕಾಲುವೆಗಳ ಹೂಳೆತ್ತುವ ಕೆಲಸ ನಾಲ್ಕು ತಿಂಗಳ ಹಿಂದೆಯೇ ಆಗಬೇಕಿತ್ತು. ಮೇ ತಿಂಗಳಲ್ಲಿ ರಸ್ತೆ

ಮನಪಾ ಪೌರಕಾರ್ಮಿಕರನ್ನು ಖಾಯಂಗೊಳಿಸಿ, ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸಿ ಮಾಜಿ ಶಾಸಕ ಜೆ.ಆರ್. ಲೋಬೋ ಆಗ್ರಹ

ಮಂಗಳೂರು ಪಾಲಿಕೆಯ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಅವರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ತೆಗೆದುಕೊಳ್ಳುವುದು ಸರಿಯಾದ ಕ್ರಮವಲ್ಲ. ಪೌರಕಾರ್ಮಿಕರು ಸರಿಯಾದ ಕೆಲಸ ಮಾಡಿದ್ದಲ್ಲಿ ಅವರನ್ನು ಖಾಯಂಗೊಳಿಸಿ. ಖಾಸಗಿ ಕಚೇರಿ ಕೆಲಸ ನಡೆಸುದಾದಲ್ಲಿ ಲೇಬರ್ ಡಿಪಾರ್ಟ್‍ಮೆಂಟ್ ಇದೆ. ಹಾಗಿರುವಾಗ

ಕರಾವಳಿಯಲ್ಲಿ ಸುರಿದ ಮಳೆಯಿಂದ ಅವಾಂತರ : ಅಮ್ಮೆಮಾರಿನಲ್ಲಿ ಭೂ ಕುಸಿತ

ಬಂಟ್ವಾಳ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮೆಮಾರಿನಲ್ಲಿ ಭೂ ಕುಸಿತ ಉಂಟಾಗಿ ಅನೇಕ ಮನೆಗಳು ಅಪಾಯಕ್ಕೆ ಸಿಲುಕಿದೆ. ನಿರಂತರ ಮಳೆಯಿಂದಾಗಿ ಈ ಮನೆಗಳು ಇನ್ನಷ್ಟು ಅಪಾಯಕ್ಕೀಡಾಗುವ ಆತಂಕ ಎದುರಾಗಿದೆ. ಮನೆಯಲ್ಲಿ ವಾಸಿಸುವುದೇ ಅಪಯಕಾರಿ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಪರ್ಯಾಯ ವ್ಯವಸ್ಥೆಗೆ ಮನೆಮಂದಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಕುಸಿಯುವ ಭೀತಿಯಲ್ಲಿರುವ ದಲಿತರ

ಮಂಗಳೂರಿನಲ್ಲಿ ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆ : ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿಕೆ

ಮಂಗಳೂರು ನಗರದಲ್ಲಿ ಕಳೆದ ಒಂದು ವಾರದಿಂದ ನಡೆಸಲಾದ ಕಾರ್ಯಾಚರಣೆ ವೇಳೆ ಸೂಕ್ತ ದಾಖಲೆಗಳನ್ನು ಹೊಂದಿರದ ಸುಮಾರು ೩೦೦ ಮಂದಿ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಅವರೆಲ್ಲರೂ ನಿಖರವಾಗಿ ಅಕ್ರಮ ವಲಸಿಗರು ಎಂದು ಹೇಳಲಾಗದಿದ್ದರೂ ಈವರೆಗಿನ ಪರಿಶೀಲನೆ ಸಂದರ್ಭದಲ್ಲಿ ಸೂಕ್ತ ದಾಖಲೆ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಪೈಕಿ ೨೫೦ ಮಂದಿಯನ್ನು ನಗರದ ರೋಸಾರಿಯೊ ಸಭಾಂಗಣಕ್ಕೆ ಕರೆತರಲಾಗಿದ್ದು, ಇಂದು