Home Articles posted by v4team (Page 798)

ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಅರೋಹಣ -2022 ಕ್ರೀಡಾಕೂಟ

ಮಂಗಳೂರಿನ ಆಶೋಕನಗರದ ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಅರೋಹಣ – 2022 ಕ್ರೀಡಾ ಕೂಟವನ್ನು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಗರದ ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಅರೋಹಣ – 2022 ಕ್ರೀಡಾ ಕೂಟಕ್ಕೆ ಚಾಲನೆ ಸಿಕ್ಕಿತ್ತು. ಇನ್ನು

ಉತ್ತಮ ಸಂಸ್ಕಾರವೇ ಬದುಕಿನ ಶ್ರೀಮಂತಿಕೆ: ಗಣೇಶ್ ಅಮೀನ್ ಸಂಕಮಾರ್

ಉತ್ತಮ ಸಂಸ್ಕಾರವೇ ಬದುಕಿನ ಶ್ರೀಮಂತಿಕೆ ಗುರುಪೂರ್ಣಿಮೆಯ ಮೂಲತತ್ವ ಬೌದ್ಧಿಕ ವಿಕಾಸ ಎಂದು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಕೇಂದ್ರ ಮಂಗಳೂರು ಯೂನಿವರ್ಸಿಟಿಯ ನಿರ್ದೇಶಕ ತುಳು ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ನುಡಿದರು.ಮಂಗಳೂರಿನ ಕೊಟ್ಟಾರದ ಭರತಾಂಜಲಿ ರಿಜಿಸ್ಟರ್ ಇದ್ರ ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರ ಕಾಟಿಪಳ್ಳ ಇವರ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಗುರು ಪೂರ್ಣಿಮಾ ಉತ್ಸವ

ಯುವವಾಹಿನಿ-ಬಿರುವೆರ್ ಕಾಪು ವತಿಯಿಂದ ಆಟಿಕೂಟ

ಕಾಪು ಯುವವಾಹಿನಿ ಹಾಗೂ ಬಿರುವೆರ್ ಕಾಪು ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ ಆಟಿಕೂಟ ಬಹಳ ವಿಭಿನ್ನವಾಗಿ ಕಾಪುವಿನ ಖಾಸಗಿ ರೆಸಾರ್ಟ್‍ವೊಂದರಲ್ಲಿ ನಡೆಯಿತು.ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್ ಉದ್ಯಾವರ, ಇದೀಗ ನಾವು ಆಟಿ ತಿಂಗಳ ದಿನಗಳಲ್ಲಿ ಹಬ್ಬವಾಗಿ ಆಚರಿಸಿ ಸೇವಿಸುವ ಸೊಪ್ಪು ತರಕಾರಿಗಳು ಅಂದು ಬಡತನದ ಅನಿವಾರ್ಯ ಆಹಾರಗಳಾಗಿತ್ತು, ಈ ಆಟಿ ಕೂಟಗಳಲ್ಲಿ ಯುವ ಪೀಳಿಗೆಗೆ ಅಂದಿನ ಕಷ್ಟದ

ಪಡುಬಿದ್ರಿಯಲ್ಲಿ ರೈತ ಮಿತ್ರ ನೇಜಿ ನೆಡುವ ಪ್ರಾತ್ಯಕ್ಷಿಕೆ

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ನಡೆದ ರೈತ ಮಿತ್ರ ಮಿತ್ರ ನೇಜಿ ನೇಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಮಾಜಿ ತಾ.ಪಂ.ಸದಸ್ಯ ನವೀನ್‍ಚಂದ್ರ ಜೆ. ಶೆಟ್ಟಿ ಚಾಲನೆ ನೀಡಿದರು.ಅವರು ಈ ಸಂದರ್ಭ ಮಾತನಾಡಿ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕೃಷಿ ಬದುಕಿನಲ್ಲಿ ಅರೋಗ್ಯ ವಂತರಾಗಿ ದೀರ್ಘ ಆಯುಷ್ಯರಾಗಿ ಬದುಕಿದವರು. ಅದರೆ, ನಾವು ಇಂದಿನ ಅಧುನಿಕ ಜೀವನ ಶ್ಯೆಲಿಯಲ್ಲಿ ಬದುಕುತ್ತಿರುವುದರಿಂದ ಮದುಮೇಹ ಮತ್ತು ಹೃದಯಾಘಾತ ದಂತಹಾ ಕಾಯಿಲೆಗಳು ಇಳಿ ವಯಸ್ಸಿನಲ್ಲಿ

ಕೂಳೂರಿನ ಫಲ್ಗುಣಿ ನದಿಯಲ್ಲಿ ತ್ಯಾಜ್ಯಗಳ ರಾಶಿ

ಕರಾವಳಿಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಉಕ್ಕೇರಿದ ಮಂಗಳೂರು ನಗರದ ಫಲ್ಗುಣಿ ನದಿಯಲ್ಲಿ ರಾಶಿ ರಾಶಿ ತ್ಯಾಜ್ಯ ಜಮಾವಣೆಗೊಂಡಿದೆ. ಕೂಳೂರಿನ ನದಿಯ ಬದಿಯಲ್ಲಿ ಲೋಡುಗಟ್ಟಲೆ ಕಸದ ರಾಶಿ ಬಿದ್ದಿದ್ದು, ಫಲ್ಗುಣಿ ನದಿಯ ದುಸ್ಥಿತಿಯನ್ನು ಹೇಳತೀರದಂತಿದೆ. ಕರಾವಳಿಯ ಜೀವನದಿ ಫಲ್ಗುಣಿ ನದಿಯಲ್ಲಿ ತ್ಯಾಜ್ಯಗಳ ರಾಶಿ ಬಿದ್ದಿದೆ. ಇತ್ತಿಚೆಗೆ ಸುರಿದ ವಿಪರೀತ ಮಳೆಯ ಬಳಿಕ ಕೂಳೂರಿನ ಫಲ್ಗುಣಿ ನದಿಯ ಬದಿಯಲ್ಲಿ ಟನ್ ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳು ಸಂಗ್ರಹಗೊಂಡಿವೆ.

ಅದಮಾರಿನಲ್ಲಿ ಕೆಸರ್ಡ್ ಗೊಬ್ಬು ಪಂಥ

ಅದಮಾರು ಆದರ್ಶ ಸಂಘಗಳ ಒಕ್ಕೂಟ ರಾಷ್ಟ್ರೀಯ ಸೇವಾ ಯೋಜನೆ, ಪಿಪಿಸಿ ಅದಮಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಎರ್ಮಾಳು ಮೂಡಬೆಟ್ಟು ದಿವಂಗತ ಜಗನ್ನಾಥ ಶೆಟ್ಟಿ ಅವರ ಗದ್ದೆಯಲ್ಲಿ ಕೆಸರ್ಡ್ ಗೊಬ್ಬು ಪಂಥ ನೆರವೇರಿತು. ಕಾರ್ಯಕ್ರಮವನ್ನು ಉದ್ಯಮಿ ಉದಯ ಕೆ. ಶೆಟ್ಟಿ ಎರ್ಮಾಳು ಉದ್ಘಾಟಿಸಿದರು. ಈ ಸಂದರ್ಭ ಅವರ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ನಾವು ನಮ್ಮ ಮಕ್ಕಳಿಗೆ ಕೃಷಿಯ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಆದರ್ಶ ಯುವಕಮಂಡಲ ಮಾಡುತ್ತಿರುವ ಕೆಲಸ

ಪ್ರಣವಾನಂದ ಸ್ವಾಮೀಜಿಯವರನ್ನು ಭೇಟಿಯಾದ
ಸಚಿವ ಸುನೀಲ್

ಬೆಂಗಳೂರಿನ ಖಾಸಗಿ ಹೋಟೆಲಲ್ಲಿ ಪರಮಪೂಜ್ಯ ಡಾಕ್ಟರ್ ಪ್ರಣವಾನಂದ ಸ್ವಾಮೀಜಿಯವರನ್ನು ಕುಲಬಾಂಧವರು ಹಾಗೂ ರಾಜ್ಯದ ಇಂಧನ ಸಚಿವರು ಆಗಿರುವ ಶ್ರೀ ಸುನಿಲ್ ಕುಮಾರ್ ಅವರು ಭೇಟಿ ಮಾಡಿ ಕೇಂದ್ರ ಆರ್ಯ ಈಡಿಗ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುವ ಹೋರಾಟಗಳ ಬಗ್ಗೆ ಮತ್ತು ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚಿಸಿದರು. ಕೂಡಲೇ ಒಂದು ವಾರದ ಒಳಗೆ ಕೇಂದ್ರ ಹೋರಾಟ ಸಮಿತಿಯನ್ನು ಕರೆಸಿ ಮತ್ತು ರಾಜ್ಯದ ಅಬಕಾರಿ ಸಚಿವರಾದ ಶ್ರೀ ಗೋಪಾಲಯ್ಯ ಅವರನ್ನು ಕೂಡ

ಬಿಲ್ಲವ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಕೂಡಲೇ ಅಂತಿಮ ಹಾಡಬೇಕು : ಪ್ರಣವಾನಂದ ಸ್ವಾಮೀಜಿ

ಬೆಂಗಳೂರಿನ ವಿಧಾನಸೌಧದಲ್ಲಿ ಕುಲಬಾಂಧವರು ಹಾಗೂ ರಾಜ್ಯದ ಹಿರಿಯ ಸಚಿವರಾಗಿರುವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ಜೊತೆ ಹಾಗೂ ರಾಜ್ಯದ ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ ಆರ್ಯ ಈಡಿಗ ಕೇಂದ್ರ ಹೋರಾಟ ಸಮಿತಿ ಹಾಗೂ ಬಿಲ್ಲವ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಕೂಡಲೇ ಅಂತಿಮ ಹಾಡಬೇಕು ಎಂದು ಶ್ರೀಗಳು ಚರ್ಚಿಸಿದರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಮುದಾಯದ ಸಚಿವರಾದ ಶ್ರೀ ಕೊಟ ಶ್ರೀನಿವಾಸ್

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಲೀಜನ್ ಆಶ್ರಯದಲ್ಲಿ ಗಿಡ ನೆಡುವ ಕಾರ್ಯಕ್ರಮ

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಲೀಜನ್ ಆಶ್ರಯದಲ್ಲಿ ಬೋಂದೆಲ್ ನ ಗ್ರೌಂಡ್ ನ ಪರಿಸರದಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಡುವ ಕಾರ್ಯಕ್ರಮ ವು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಲೀಜನ್ ನಿಕಟಪೂರ್ವ ಅಧ್ಯಕ್ಷ, ಕರ್ನಾಟಕ ರಾಜ್ಯದ ಸಂಯೋಜಕ Snr PPF ಜಿ ಕೆ ಹರಿಪ್ರಸಾದ ರೈ ಕಾರಮೊಗರು ಗುತ್ತು, ಮಂಗಳೂರು ಲೀಜನ್ ಕಾರ್ಯದರ್ಶಿ Snr PPF ಪ್ಲೇವಿ ಡಿಮೆಲ್ಲೋ , ಸದಸ್ಯರಾದ ಲೋಲಾಕ್ಷಿ ಫರ್ನಾಂಡಿಸ್, ಗಿರಿಜಾ ಚಾರಿಟೇಬಲ್ ಟ್ರಸ್ಟ್

ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮತ್ತು ಬಹುಜನ ಪ್ರಗತಿಪರ ಸಂಘಟನೆ ಒಕ್ಕೂಟದಿಂದ ಪಿ .ಡೀಕಯ್ಯ ಅವರಿಗೆ ನುಡಿ ನಮನ

ಬೆಳ್ತಂಗಡಿ : ‘ಸ್ವಂತಕ್ಕಾಗಿ ಬದುಕದೆ ಸಮಾಜ ಹಿತಕ್ಕಾಗಿ ಬದುಕಿದವರು ಪಿ.ಡೀಕಯ್ಯರವರು. ಅವರು ಮನುಷ್ಯ ಮನುಷ್ಯರ ಮಧ್ಯೆ ಸಾಮರಸ್ಯದಿಂದ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟವರು. ನಿಜವಾದ ಅರ್ಥದಲ್ಲಿ ಪರಿವರ್ತನೆಯ ಹರಿಕಾರರಾಗಿದ್ದು, ಎಲ್ಲಾ ವರ್ಗದ ಜನ ಗೌರವಿಸುವ ವ್ಯಕ್ತಿತ್ವ ಅವರದಾಗಿತ್ತು’ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು. ಅವರು ಭಾನುವಾರ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಈಚೆಗೆ ನಿಧನರಾದ ಪಿ.