ಬೈಂದೂರು: ವಿಹೆಚ್‍ಪಿ ಬಜರಂಗದಳದಿಂದ ಸರಣಿ ಗೋವುಗಳ ಹತ್ಯೆ ಖಂಡಿಸಿ ಪ್ರತಿಭಟನೆ
ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದಲ್ಲಿ ಗುಂಡೇಟಿನಿಂದ ಬಲಿಯಾದ ಸರಣಿ ಗೋ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಯಾದ ನರಸಿಂಹ ಕುಲಾಲ್‍ನನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದ ವತಿಯಿಂದ ಪ್ರತಿಭಟನೆ ಕೊಲ್ಲೂರಿನಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿಯಾದ ಶರಣ್ ಪಂಪ್ವೆಲ್ ಅವರು ಸಂತ್ರಸ್ತ ಕುಟುಂಬದ ಮನೆಗೆ ತೆರಳಿ ಸದಾಕಾಲ ವಿಶ್ವ ಹಿಂದು ಪರಿಷತ್ ನಿಮ್ಮೊಂದಿಗೆ ಜೊತೆಯಾಗಲಿದೆ ಅನ್ನುವ ಸಂದೇಶದ ಮೂಲಕ ಧೈರ್ಯ ತುಂಬುವ ಕೆಲಸವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಸುರೇಂದ್ರ ಕೋಟೇಶ್ವರ, ಜಿಲ್ಲಾ ಸಹಸಂಯೋಜಕ ಗುರುರಾಜ್ ಪುತ್ರನ್, ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಖಂಡ ಅಧ್ಯಕ್ಷ ಜಗದೀಶ್ ಕೊಲ್ಲೂರು, ತಾಲೂಕು ಕಾರ್ಯದರ್ಶಿ ಶ್ರೀನಿವಾಸ್ ಮುದುರು, ಬಜರಂಗದಳ ಸಂಯೋಜಕರಾದ ಸುಧಾಕರ್ ಉಪ್ಪುಂದ,ವಸಂತ್ ಸಂಗಮ್ ಕುಂದಾಪುರ ತಾಲೂಕು ಬಜರಂಗದಳ ಸಂಯೋಜಕರು ಹಾಗೂ ಎಲ್ಲಾ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.