Home Blog Left SidebarPage 713

ಮುಲ್ಕಿ ವಿಜಯ ಕಾಲೇಜ್ ಬಡ ವಿದ್ಯಾರ್ಥಿಗಳ ವಿದ್ಯಾನಿಧಿಗೆ ಹಳೆ ವಿದ್ಯಾರ್ಥಿಗಳಿಂದ ದೇಣಿಗೆ

ಮುಲ್ಕಿ ವಿಜಯ ಕಾಲೇಜಿಗೆ 1994-97ರಲ್ಲಿ ಬಿಕಂ ಪದವಿ ಪಡೆದು ಹೊರ ಬಂದ ಹಳೆ ವಿದ್ಯಾರ್ಥಿಗಳು, ತಾವು ಕಲಿತ ಸಂಸ್ಥೆಯ ಬಡ ವಿದ್ಯಾರ್ಥಿಗಳ ವಿದ್ಯಾನಿಧಿಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ನೂರಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ತಾವು ಪದವಿ ಮುಗಿಸಿ 25ವರ್ಷಗಳ ಸುದೀರ್ಘ ಅವಧಿಯ ಬಳಿಕ ಎಲ್ಲರೂ ಒಂದಾಗಿ ಇಪ್ಪತ್ತೈದರ

ವಿಷ್ಣುಮಂಗಲ ಇಂಗ್ಲಿಷ್ ಕಥಾ ಸಂಕಲನ ಬಿಡುಗಡೆ

ಡಾ. ವಸಂತಕುಮಾರ ಪೆರ್ಲ ಅವರ ಮೂಲ ಕನ್ನಡ ಕಥೆಗಳ ಇಂಗ್ಲಿಷ್ ಅನುವಾದ ವಿಷ್ಣುಮಂಗಲ ಇಂಗ್ಲಿಷ್ ಕಥಾ ಸಂಕಲನದ ಬಿಡುಗಡೆ ಕಾರ್ಯಕ್ರಮವು ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಅವರು ಕೃತಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಈ ಒಂದು ಸಣ್ಣ ಕೃತಿ 16 ಕಥೆಗಳನ್ನೊಳಗೊಂಡಿದೆ. ಈ ಕಥೆಗಳನ್ನು 100ರ ಹರೆಯಲ್ಲಿರುವ ಪ್ರಸಿದ್ಧ ಅನುವಾದಕ ಬಿ.ಆರ್. ಭೀಮಾಚಾರ್

ಫಾದರ್ ಮುಲ್ಲರ್ ಕಾಲೇಜಿನ ವತಿಯಿಂದ ಅಂತರ್ ಕಾಲೇಜು ಬ್ಯಾಡ್ಮಿಂಟನ್ ಪಂದ್ಯಾವಳಿ

ಫಾದರ್ ಮುಲ್ಲರ್ ಕಾಲೇಜಿನ ವಾಕ್ ಮತ್ತು ಶ್ರವಣ ವಿಭಾಗದ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಪುರುಷ ಮತ್ತು ಮಹಿಳಾ ಬ್ಯಾಡ್ಮಿಂಟನ್ ಪಂದ್ಯಾವಳಿ ಶ್ರೀ ಕೆಮ್ಮಾರ್ ಬಾಲಕೃಷ್ಣ ಗೌಡ ಸ್ಮಾರಕ ಟ್ರೋಫಿ ನವೆಂಬರ್ 14 ಮತ್ತು 15ರಂದು ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಎಫ್‍ಎಂಸಿ ಪ್ರಾಂಶುಪಾಲರಾದ ಪ್ರೊ. ಅಖಿಲೇಶ್ ಪಿ.ಎಂ. ಹೇಳಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ

ಸರ್ವ ಧರ್ಮ ಸಮ್ಮೇಳನ : ಧರ್ಮ ಸಾಗರದಲ್ಲಿ ಸೌಹಾರ್ದತೆಯ ಅಲೆಗಳಾಗಿ ಸಾಗೋಣ – ಮುನಿ ಶ್ರೀ ರಶ್ನಿ ಕುಮಾರ್ ಜೀ

ಬೆಂಗಳೂರು: ನ, 6: ವಿಜಯನಗರಜ ಅರ್ಹಂ ಭವನದಲ್ಲಿ ಧರ್ಮ ಧರ್ಮಗಳ ನಡುವೆ ಸಾಮರಸ್ಯ ಬೆಸೆಯುವ ಸರ್ವ ಧರ್ಮ ಸಮ್ಮೇಳನ ಹಾಗೂ ಸರ್ವಧರ್ಮ ಆಧ್ಯಾತ್ಮಿಕ ಸ್ನೇಹ ಮಿಲನ-2022 ಕಾರ್ಯಕ್ರಮ ಸಂತಸ, ಸಡಗರದಿಂದ ನೆರವೇರಿತು. ಧರ್ಮ ಧರ್ಮಗಳ ನಡುವೆ, ಧಾರ್ಮಿಕ ಮುಖಂಡರ ಮಧ್ಯೆ ಪರಸ್ಪರ ಗೌರವ ನೀಡುವ, ಆಲಂಗಿಸಿಕೊಂಡು ಬೆನ್ನು ತಟ್ಟುವ, ಸಾಮರಸ್ಯದಲ್ಲಿ ನಿಮಗಿಂತ ನಾವೇ ಒಂದು ಹೆಜ್ಜೆ ಮುಂದೆ ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಕಂಡು ಬಂತು. ಸಮ್ಮೇಳನದಲ್ಲಿ ವಿಶ್ವ ಮಾನವ ಸಂದೇಶ

ಮಾತು ಉಳಿಸಲಾಗದ ಸಂಸದ ಅಜ್ಞಾತ ವಾಸಕ್ಕೆ : ಮುನೀರ್ ಕಾಟಿಪಳ್ಳ

ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಈವರೆಗೆ ನೀಡಿದ ಭರವಸೆಗಳು ಯಾವುದೂ ಈಡೇರಿಲ್ಲ. ಒಂದು ರೂಪಾಯಿಗೆ 16 ಡಾಲರ್ ಒದಗಿಸುವ , ಎರಡು ಸಾವಿರಕ್ಕೆ ಒಂದು ಲೋಡು ಮರಳು ಒದಗಿಸುವ, ಜಿಲ್ಲೆಯ ಜನರಿಗೆ ಎಮ್ ಆರ್ ಪಿ ಎಲ್, ಎಸ್ಇಝಡ್ ಮುಂತಾದ ಉದ್ಯಮಗಳಲ್ಲಿ ಕಡ್ಡಾಯ ಉದ್ಯೋಗ ಒದಗಿಸುವ ಮಾತುಗಳಲ್ಲಿ ಒಂದನ್ನೂ ಈಡೇರಿಸಲಾಗದಿದ್ದರು ಯಾವುದೇ ಆತಂಕವಿಲ್ಲದೆ ಜಿಲ್ಲೆಯ ಜನರ ಮುಂದೆ ನಿರ್ಭೀತಿಯಿಂದ ಎದೆಗೊಟ್ಟು ತಿರುಗಾಡುತ್ತಿದ್ದರು. ಇದೇ ಪ್ರಥಮ ಬಾರಿಗೆ ಟೋಲ್ ಗೇಟ್ ವಿರುದ್ಧದ

ಕಾಪುವಿನಲ್ಲಿ ಜನಸಂಕಲ್ಪ ಯಾತ್ರೆಗೆ ಸಿಎಂ ಚಾಲನೆ

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷ ಕೊಯಿಲಾಡಿ ಸುರೇಶ್ ನಾಯಕ್ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ, ಸಚಿವರುಗಳಾದ ಎಸ್. ಅಂಗಾರ, ಸುನೀಲ್ ಕುಮಾರ್, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಕಾಪು ಕ್ಷೇತ್ರ ಅಧ್ಯಕ್ಷ ಶ್ರೀಕಾಂತ್ ನಾಯಕ್, ಸುರೇಶ್ ಶೆಟ್ಟಿ ಗುರ್ಮೆ, ರಘಪತಿ ಭಟ್, ಉದಯ ಕುಮಾರ್ ಶೆಟ್ಟಿ ಮುಂತಾದವರಿದ್ದರು.

ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನ : ಧ್ವಜಸ್ತಂಭದ ಭವ್ಯ ಮೆರವಣಿಗೆ ವಾಹನ ಜಾಥಾ

ಮೂಡುಬಿದಿರೆ: ಮಹತೋಭಾರ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನ ದರೆಗುಡ್ಡೆ ಇಲ್ಲಿಗೆ ನೂತನ ಧ್ವಜಸ್ತಂಭ ನಿರ್ಮಾಣಕ್ಕಾಗಿ ಸುಳ್ಯದಿಂದ ತಂದಿರುವ ಕೊಡಿಮರವನ್ನು ಮೂಡುಬಿದಿರೆ ಜೈನ ಪ.ಪೂ.ಕಾಲೇಜು ಮೈದಾನದ ಬಳಿ ಸ್ವಾಗತಿಸಲಾಯಿತು. ನಂತರ ಕೊಂಬು, ಚೆಂಡೆ, ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಮೂಲಕ ಕಲಾ ತಂಡಗಳು,ಭಜನಾ ತಂಡಗಳೊಂದಿಗೆ ದರೆಗುಡ್ಡೆಗೆ ಹೊರಟ “ಧ್ವಜಸ್ತಂಭದ ಭವ್ಯ ಮೆರವಣಿಗೆ ವಾಹನ ಜಾಥಾ”ಕ್ಕೆ ಶಾಸಕ ಉಮಾನಾಥ ಎ.ಕೋಟ್ಯಾನ್ ಚಾಲನೆಯನ್ನು ನೀಡಿದರು.

ಬಂಟ್ಸ್ ಬಹರೈನ್ ಪದಗ್ರಹಣಾ ಕಾರ್ಯಕ್ರಮ : ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿ

ಬಹರೈನ್; “ತಾನು ಕರಗಿ ಇತರರರಿಗೆ ಬೆಳಕು ಕೊಡುವ ಮೇಣದ ಬತ್ತಿಯಂತೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಾಗ ಜೀವನದಲ್ಲಿ ಸಾರ್ಥಕೆಯನ್ನು ಕಾಣಬಹುದು . ಮಕ್ಕಳಿಗೆ ಮಾತೃ ಭಾಷೆಯನ್ನೂ ಕಳಿಸಿದಾಗ ಮಾತ್ರ ನಮ್ಮ ಸಂಸ್ಕ್ರತಿ ಉಳಿದು ಬೆಳೆಯಲು ಸಾಧ್ಯ . ನಾವು ಆರ್ಥಿಕವಾಗಿ ಬೆಳೆದಂತೆಲ್ಲಾ ಸಮಾಜವನ್ನೂ ಬೆಳೆಸಬೇಕು “ಎಂದು ಇಲ್ಲಿ ಇತ್ತೀಚಿಗೆ ಜರುಗಿದ ಬಂಟ್ಸ್ ಬಹರೈನ್ ನ ನೂತನ ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣ ಸಮಾರಂಭದಲ್ಲಿ ಬಂಟ್ಸ್ ಬಹರೈನ್ ನ ನೂತನ

ಅಲೆಮಾರಿ ಜನಾಂಗದ ಶ್ರೇಯಸ್ಸಿಗಾಗಿ ಸೇವೆ ಸಲ್ಲಿಸುತ್ತಿದ್ದ ಭಾಸ್ಕರ್ ದಾಸ್ ಎಕ್ಕಾರು ನಿಧನ

ಧರ್ಮ ಜಾಗರಣ ಸಮನ್ವಯ ಪರಿಯೋಜನಾ ಪ್ರಮುಖ್ ಭಾಸ್ಕರ ದಾಸ್ ಎಕ್ಕಾರು (66) ಹಾಸನದಲ್ಲಿ ಶನಿವಾರ ನಡೆದ ಅಪಘಾತದಲ್ಲಿ ನಿಧನರಾಗಿದ್ದಾರೆ,   ಶನಿವಾರ ಬೆಂಗಳೂರಿನಿಂದ ಮಂಗಳೂರಿಗೆ ತಮ್ಮ ಇನೋವಾ ವಾಹನದಲ್ಲಿ ವಾಪಾಸ್ಸಾಗುವ ಸಂದರ್ಭ ಕುಣಿಗಲ್ ನಲ್ಲಿ ಬಾಸ್ಕರ್ ದಾಸ್ ಅವರು ಸಂಚರಿಸುತ್ತಿದ್ದ ವಾಹನಕ್ಕೆ ಎಮ್ಮೆಯೊಂದು ಅಡ್ದ ಬಂದ್ದಿದೆ. ಕೂಡಲೇ ಚಾಲಕ ಅಪಘಾತ ತಪ್ಪಿಸಲು ಚಾಲ ಕೂಡಲೇ ಬ್ರೇಕ್ ಹಾಕಿದ್ದು ಈ ಸಂದರ್ಭ ತಮ್ಮ ವಾಹನಕ್ಕೆ ಹಿಂಬದಿಯಿಂದ ಬಂದ ಮಿನಿ ಬಸ್ ಡಿಕ್ಕಿ

ಕಾಲಮಿತಿ ಯಕ್ಷಗಾನಕ್ಕೆ ವಿರೋಧ:ಕಟೀಲಮ್ಮನೆಡೆ ಭಕ್ತರ ನಡೆ

ಮಂಗಳೂರು:ಕಟೀಲು ಮೇಳದ  ಈ ಬಾರಿಯ ತಿರುಗಾಟ ಇದೇ ನವೆಂಬರ್ ತಿಂಗಳಲ್ಲಿ ಆರಂಭಗೊಳ್ಳಲಿದೆ ಅದರೆ ಈ ವರ್ಷದಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ ನೀಡಲು ಕಟೀಲು ದೇವಸ್ಥಾನ ಅಡಳಿತ ಮಂಡಳಿ ನಿರ್ಧರಿಸಿದ್ದು ಅದ್ರೆ ಕಾಲಮಿತಿ ಯಕ್ಷಗಾನಕ್ಕೆ ಭಕ್ತರ ಕಡೆಯಿಂದ ಅಸಮಾಧಾನ ಉಂಟಾಗಿದೆ.ಇಂದು ಬಜಪೆ ಪೇಟೆಯಿಂದ ಕಟೀಲಮ್ಮನೆಡೆ ಭಕ್ತರ ನಡೆ  ಪಾದಯಾತ್ರೆ ಜರಗಿತು.ಬಜಪೆಯ ಶಾರದಾ ಮಂಟಪದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆ ಆರಂಭವಾಯಿತು.ಹೆಚ್ಚಿನ ಸಂಖ್ಯೆಯಲ್ಲಿ