Home ಕರಾವಳಿ Archive by category ಉಡುಪಿ (Page 13)

ಅಟೋ ರಿಕ್ಷಾಕ್ಕೂ ಹೆಲ್ಮೆಟ್ ಕಡ್ಡಾಯ..!

ಅಟೋ ರಿಕ್ಷಾವೊಂದರ ಮಾಲಿಕರಿಗೆ ಶ್ವಾಕ್…ಅಟೋ ಚಲಾಯಿಸುವ ಸಂದರ್ಭ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಶಿವಮೊಗ್ಗ ದಿಂದ ಎರ್ಮಾಳಿನ ಅಟೋ ಚಾಲಕರೊರ್ವರಿಗೆ 500 ರೂಪಾಯಿ ದಂಡ ಪಾವತಿಸುವಂತೆ ನೋಟಿಸು ಜಾರಿಯಾಗಿದೆ. ಅಟೋ ರಿಕ್ಷಾದ ನೋಂದಾವಣೆ ಸಂಖ್ಯೆ, ಫೋಟೋ ದ್ವಿಚಕ್ರವಾಹನದ್ದಾಗಿದ್ದು, ಹೆಲ್ಮೆಟ್ ಧರಿಸದೆ ಸಂಚಾರ ನಿಯಮ ಉಲ್ಕಘಿಸಿದ ನೀವು ದಂಡ ಕಟ್ಟುವಂತೆ ಮೊಬೈಲ್ ಗೆ

ಕೋಲ ಕಟ್ಟುವ ಸಮುದಾಯವರಿಗೆ ಇನ್ನೂ ಸಿಗದ ಮೀಸಲಿಟ್ಟ ಭೂಮಿ

ಕರಾವಳಿಯ ದೈವಾರಾಧನೆಯ ಭಾಗವಾಗಿರುವ ಕೋಲವನ್ನು ಕಟ್ಟುವ ಸಮುದಾಯದವರಿಗಾಗಿ ಮೀಸಲಿಟ್ಟ ಭೂಮಿ ಇದುವರೆಗೂ ಅವರಿಗೆ ದೊರೆತಿಲ್ಲ. ನಿವೇಶನರಹಿತರ ಹೆಸರಿನಲ್ಲಿ ಸರಕಾರದಿಂದ ಮಂಜೂರಾದ ಜಾಗದ ಅಭಿವೃದ್ಧಿಗಾಗಿ ಸರಕಾರ ಲಕ್ಷಾಂತರ ರೂಪಾಯಿ ವ್ಯಯಿಸಿದ್ದರೂ ಕೂಡ ಇದುವರೆಗೂ ಒಂದು ರೂಪಾಯಿ ಕೂಡ ಸೂಕ್ತ ವಿನಿಯೋಗವಾಗಿಲ್ಲ.. ಹೌದು ನಾವು ಹೇಳುತ್ತಿರುವುದು ಕಾಪು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೊಮ್ಮಾರ ಬೆಟ್ಟು ಗ್ರಾಮ ಪಂಚಾಯಿತಿಯ ಕರ್ಮಕಾಂಡವನ್ನು. 2017ರಲ್ಲಿ

ಕಾರ್ಕಳ: ಡಾ. ಬಿ.ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ದಿನ

ಭಾರತ ರತ್ನ ಸಂವಿಧಾನಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ರವರ 67ನೇ ಮಹಾ ಪರಿ ನಿರ್ವಾಣ ದಿನವಾದ ಇಂದು ಕಾರ್ಕಳ ತಾಲೂಕು ಕಚೇರಿ ಬಳಿ ಇರುವ ಪ್ರತಿಮೆಗೆ ದಂಡಾಧಿಕಾರಿ ನರಸಪ್ಪ ರವರು ಪ್ರತಿಭೆಗೆ ಮಾಲಾರ್ಪಣೆ ಮತ್ತು ಗೌರವ ಸಮರ್ಪಣೆ ಮಾಡಿದರು. ಇದೇ ವೇಳೆ ಮಾತನಾಡಿದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಮಾನತೆಯ ಹರಿಕಾರ. ಇಂದು ಅವರ ಮಹಾ ಪರಿನಿರ್ವಾಣದ ದಿನಾಚರಣೆಯನ್ನು ದೇಶದ ಎಲ್ಲಾ ಕಡೆ ಆಚರಿಸುತ್ತಿದ್ದಾರೆ. ಅಂಬೇಡ್ಕರ್‍ರವರ ವಿಚಾರಧಾರೆಗಳು ದೇಶಕ್ಕೆ

ಬ್ರಹ್ಮಾವರ : ಕರಾವಳಿಗೆ ಮಾದರಿಯಾದ ಎಳ್ಳಂಪಳ್ಳಿ ಕಿಂಡಿ ಅಣೆಕಟ್ಟು ತುಂಬಿತುಳುಕುವಷ್ಟು ನೀರು ಶೇಖರಣೆ

ಬ್ರಹ್ಮಾವರ : ನೀಲಾವರ ಗ್ರಾಮಪಂಚಾಯತಿ ವ್ಯಾಪ್ತಿಯ ಎಳ್ಳಂಪಳ್ಳಿ ಮತ್ತು ಕಾಡೂರು ನಡುವೆ ಹರಿಯುವ ಸೀತಾನದಿಗೆ ಕಳೆದ ವರ್ಷ ಮೆಟಲ್ ಡೋರ್ ಅಳವಡಿಸಿ ಮಾಡಲಾದ ಕಿಂಡಿ ಅಣೆಕಟ್ಟು ಯಶಸ್ಸು ಕಂಡಿದೆ. ಕರಾವಳಿ ಜಿಲ್ಲೆಯಲ್ಲಿ ಸಾಕಷ್ಟು ಜೀವ ನದಿಗಳು ಇದ್ದರೂ ಎಪ್ರಿಲ್, ಮೇ ತಿಂಗಳಲ್ಲಿ ಕುಡಿಯುವ ನೀರಿಗೆ ಬರ ಇದ್ದ ಕಾರಣ ಸಿಹಿ ನೀರಿನ ನದಿಗಳಿಗೆ ಮರದ ಮತ್ತು ಫೈಭರ್‍ನ ಕಿಂಡಿ ಅಣೆಕಟ್ಟಿನಿಂದ ನೀರು ಸೋರುವ ಸಮಸ್ಯೆಗೆ ಎಳ್ಳಂಪಳ್ಳಿ ಡ್ಯಾಂ ರೈತರ ಮತ್ತು ಕುಡಿಯುವ ನೀರಿನ

ಬೈಂದೂರು: ಗ್ರಾಮ ಲೆಕ್ಕಾಧಿಕಾರಿ ದಾಖಲೆ ಪರಿಶೀಲಿಸದೆ ಆದಾಯ ಪತ್ರ ನೀಡಿದ್ದಾರೆ: ಗ್ರಾಮಸ್ಥರ ಆರೋಪ

ಬೈಂದೂರು: ಇಡೂರು ಕುಂಜ್ಞಾಡಿ ಗ್ರಾಮ ಲೆಕ್ಕಾಧಿಕಾರಿ ದಾಖಲೆ ಪರಿಶೀಲಿಸದೆ ಆದಾಯ ಪತ್ರ ನೀಡಿದ್ದಾರೆ: ಗ್ರಾಮಸ್ಥರ ಆರೋಪಬೈಂದೂರು ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿಯ ಇಡೂರು ಕುಂಜ್ಞಾಡಿ ಗ್ರಾಮದ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಅಂದಿನ ಕುಂದಾಪುರ ತಹಸಿಲ್ದಾರ್ ಕಿರಣ್ ಗೋರಯ್ಯ ಮರುಪರಿಶೀಲಿಸಬೇಕು ಹಾಗೂ ನೀಡಿರುವ ದಾಖಲೆ ಪತ್ರಗಳನ್ನು ಹಿಂಪಡೆಯಬೇಕೆಂದು ಆದೇಶಿಸಿರುತ್ತಾರೆ ಆದರೆ ಕಾಣದ ಕೈಗಳು ಕೆಲಸ ಮಾಡಿ ಸರಕಾರದ ದಿಕ್ಕು ತಪ್ಪಿಸುವ ಕೆಲಸ ಆಗಿದೆ ಎಂದು

ಬ್ರಹ್ಮಾವರದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ-2023

ಬ್ರಹ್ಮಾವರ : ಯಕ್ಷ ಶಿಕ್ಷಣ ಟ್ರಸ್ಟ್ , ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರ ವತಿಯಿಂದ 8 ದಿನಗಳ ಕಾಲ ನಡೆಯುವ ಕಿಶೋರ ಯಕ್ಷಗಾನ ಸಂಭ್ರಮ -2023 ಬ್ರಹ್ಮಾವರ ಬಂಟರ ಭವನದ ಬಳಿ ನಡೆಯಿತು. ನಾಡೋಜ ಡಾ.ಜಿ ಶಂಕರ್ ಉದ್ಘಾಟಿಸಿದರು. ಬ್ರಹ್ಮಾವರದಲ್ಲಿ 14 ಶಾಲೆಯಿಂದ ಗುರುಗಳಿಂದ ತರಬೇತಿ ಪಡೆದ 15 ಪ್ರಸಂಗ ಪ್ರದರ್ಶನ ನಡೆಯಲಿದೆ. ನಾನಾ ಪ್ರಸಾಧನ ಕಲೆಗಾರರಿಂದ ದೇವ, ದಾನವರ ವೇಶ ಭೂಷಣ, ಯಕ್ಷಗಾನದ ಸಾಂಪ್ರದಾಯಕ ಹೆಜ್ಜೆ, ಮಾತು, ರಂಗಸ್ಥಳ ಸಂಪ್ರದಾಯದಿಂದ ನಡೆಯುವ

ಸೀತಾನದಿಯಲ್ಲಿ ಕಳೆದುಹೋಗಿದ್ದ ಚಿನ್ನದ ಸರ ಹುಡುಕಿಕೊಟ್ಟ ಈಶ್ವರ್ ಮಲ್ಪೆ

ಉಡುಪಿ ಜಿಲ್ಲೆಯ ಪರ್ಕಳದ ಪೆರ್ಣಂಕಿಲ ಸಮೀಪದಲ್ಲಿರುವ ಸೀತಾನದಿಯಲ್ಲಿ ಎರಡು ದಿನದ ಹಿಂದೆ ಈಜಲು ಹೋಗಿದ್ದ ಮಲ್ಪೆಯ ಕೊಪ್ಪಲತೋಟ ನಿವಾಸಿ ಕಿಶನ್ ಕೋಟ್ಯಾನ್ ಎಂಬ ಯುವಕ ತನ್ನ ಕತ್ತಿನಲ್ಲಿದ್ದ ಮೂರು ಲಕ್ಷ ಮೌಲ್ಯದ ಬೆಲೆಬಾಳುವ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಆ ನಂತರ ನುರಿತ ಈಜುಪಟುಗಳಿಂದ ಹುಡುಕಾಟ ನಡೆಸಿಯೂ ಆ ಚಿನ್ನದ ಸರ ಸಿಕ್ಕಿರಲಿಲ್ಲ. ಈ ಘಟನೆ ನಡೆದು ಎರಡು ದಿನದ ಬಳಿಕ ಮುಳುಗುತಜ್ನ ಈಶ್ವರ್ ಮಲ್ಪೆಯವರಿಗೆ ಈ ವಿಚಾರ ತಿಳಿದಿದೆ. ತಕ್ಷಣ ಕಾರ್ಯ

ಕುಂದಾಪುರ: ಕಾರು-ಬೈಕ್ ನಡುವೆ ಅಪಘಾತ, ಬೈಕ್ ಸವಾರ ಮೃತ್ಯು

ಕುಂದಾಪುರ ತಾಲೂಕಿನ ಹೆಮ್ಮಾಡಿ ಹಾಲು ಡೈರಿ ಬಳಿ ಸಂಭವಿಸಿದ ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಜಯದುರ್ಗಾ ಬಸ್ ಚಾಲಕ ಮಾಬಲ ತೋಪ್ಲು ಅವರು ಸಾವನ್ನಪ್ಪಿದ್ದ ಘಟನೆ ನಡೆದಿದೆ. ಎಂದಿನಂತೆ ಬಸ್ ಡ್ರೈವರ್ ಕೆಲಸವನ್ನು ನಿರ್ವಹಿಸಿ ಬಸ್ ನ್ನು ನೂಜಾಡಿ ಸ್ಟಾಪ್ ನಲ್ಲಿ ನಿಲ್ಲಿಸಿ ಬೈಕ್ ನಿಂದ ಹೆಮ್ಮಾಡಿ ಯಿಂದ ತೋಪ್ಲುಗೆ ತೆರಳುತ್ತಿದ್ದ ಸಂದರ್ಭ ಹೆಮ್ಮಾಡಿ ಹಾಲು ಡೈರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂಟರ್ನ್ ತೆಗೆದು ಕೊಳ್ಳುತ್ತಿದ್ದ ಸಮಯದಲ್ಲಿ ಮುಳ್ಳಿಕಟ್ಟೆ

ಪಡುಬಿದ್ರಿ: ಸೇವೆಯಿಂದ ನಿವೃತ್ತಿಗೊಂಡ ಪಡುಬಿದ್ರಿ ಎಎಸ್ಸೈ ದಿವಾಕರ್ ಸುವರ್ಣ ಅವರಿಗೆ ಬೀಳ್ಕೊಡುಗೆ

ಬಹಳಷ್ಟು ವರ್ಷಗಳಿಂದ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಎಎಸ್ಸೈ ದಿವಾಕರ್ ಸುವರ್ಣ ವಯೋ ಸಹಜ ನಿವೃತ್ತಿ ನಮಗೆ ತುಂಬಲಾರದ ನಷ್ಟ ಎಂಬುದಾಗಿ ಪಡುಬಿದ್ರಿ ಠಾಣಾ ಎಸ್ಸೈ ಪ್ರಸನ್ನ ಎಂ.ಎಸ್. ಬಹಳ ಬೇಸರ ವ್ಯಕ್ತ ಪಡಿಸಿದ್ದಾರೆ. ಅವರು ಪಡುಬಿದ್ರಿಯ ಖಾಸಗಿ ಸಭಾಂಗಣದಲ್ಲಿ ನಡೆದ ಸರಳ ಬೀಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾನೂನಿನ ವಿಚಾರದಲ್ಲಿ ಯಾರೂ ಪರಿಪೂರ್ಣರಲ್ಲ ನಿಮ್ಮೊಂದಿಗೆ ಸೇವೆ

ಕಾರ್ಕಳ: ಜ.18ರಿಂದ 22ರ ವರೆಗೆ ಆನೆಕೆರೆ ಚತುರ್ಮುಖ ಕೆರೆ ಬಸದಿ ಪಂಚ ಕಲ್ಯಾಣ ಮಹೋತ್ಸವ

ಕಾರ್ಕಳ: ಚತುರ್ಮುಖ ಕೆರೆ ಬಸದಿ ಜೀರ್ಣೋದ್ಧಾರ ಸಮಿತಿ ಇವರ ವತಿಯಿಂದ ಜನವರಿ 18ರಿಂದ ಜ.22ವರೆಗೆ ಜರಗುವ ಪಂಚಕಲ್ಯಾಣ ಮಹೋತ್ಸವ ಪೂರ್ವಭಾವಿಯಾಗಿ ಇಂದು ಆನೆಕೆರೆ ಚತುರ್ಮುಖ ಕೆರೆ ಬಸದಿ ಬಳಿ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಆನೆಕೆರೆ ಚತುರ್ಮುಖ ಕೆರೆ ಬಸದಿ ಅತ್ಯಂತ ಪವಿತ್ರವಾದ ಸ್ಥಳ ಈ ಬಸದಿಗಳನ್ನು ನೋಡಲು ದೇಶದ ಹಲವಾರು ಕಡೆಯಿಂದ