Home ಕರಾವಳಿ Archive by category ಉಡುಪಿ (Page 14)

ಪಡುಬಿದ್ರಿ: ಸೇವೆಯಿಂದ ನಿವೃತ್ತಿಗೊಂಡ ಪಡುಬಿದ್ರಿ ಎಎಸ್ಸೈ ದಿವಾಕರ್ ಸುವರ್ಣ ಅವರಿಗೆ ಬೀಳ್ಕೊಡುಗೆ

ಬಹಳಷ್ಟು ವರ್ಷಗಳಿಂದ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಎಎಸ್ಸೈ ದಿವಾಕರ್ ಸುವರ್ಣ ವಯೋ ಸಹಜ ನಿವೃತ್ತಿ ನಮಗೆ ತುಂಬಲಾರದ ನಷ್ಟ ಎಂಬುದಾಗಿ ಪಡುಬಿದ್ರಿ ಠಾಣಾ ಎಸ್ಸೈ ಪ್ರಸನ್ನ ಎಂ.ಎಸ್. ಬಹಳ ಬೇಸರ ವ್ಯಕ್ತ ಪಡಿಸಿದ್ದಾರೆ. ಅವರು ಪಡುಬಿದ್ರಿಯ ಖಾಸಗಿ ಸಭಾಂಗಣದಲ್ಲಿ ನಡೆದ ಸರಳ ಬೀಳ್ಕೋಡುಗೆ ಸಮಾರಂಭದ

ಕಾರ್ಕಳ: ಜ.18ರಿಂದ 22ರ ವರೆಗೆ ಆನೆಕೆರೆ ಚತುರ್ಮುಖ ಕೆರೆ ಬಸದಿ ಪಂಚ ಕಲ್ಯಾಣ ಮಹೋತ್ಸವ

ಕಾರ್ಕಳ: ಚತುರ್ಮುಖ ಕೆರೆ ಬಸದಿ ಜೀರ್ಣೋದ್ಧಾರ ಸಮಿತಿ ಇವರ ವತಿಯಿಂದ ಜನವರಿ 18ರಿಂದ ಜ.22ವರೆಗೆ ಜರಗುವ ಪಂಚಕಲ್ಯಾಣ ಮಹೋತ್ಸವ ಪೂರ್ವಭಾವಿಯಾಗಿ ಇಂದು ಆನೆಕೆರೆ ಚತುರ್ಮುಖ ಕೆರೆ ಬಸದಿ ಬಳಿ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಆನೆಕೆರೆ ಚತುರ್ಮುಖ ಕೆರೆ ಬಸದಿ ಅತ್ಯಂತ ಪವಿತ್ರವಾದ ಸ್ಥಳ ಈ ಬಸದಿಗಳನ್ನು ನೋಡಲು ದೇಶದ ಹಲವಾರು ಕಡೆಯಿಂದ

ಕುಂದಾಪುರ : ತಹಸಿಲ್ದಾರ್ ಶೋಭಾ ಲಕ್ಷ್ಮಿಯವರ ಮೇಲೆ ಕ್ರಮಕ್ಕೆ ಕಂದಾಯ ಸಚಿವರಿಗೆ ದೂರು ನೀಡಿದ ಅಂತರಾಷ್ಟ್ರೀಯ ಪವರ್ ಲಿಪ್ಟರ್ ಸತೀಶ್ ಖಾರ್ವಿ

ಜಾತಿ ಪ್ರಮಾಣ ಪತ್ರ ನೀಡುವ ಬಗ್ಗೆ ಪಡೆಯಬೇಕಾದ ದಾಖಲೆಗಳನ್ನು ಪಡೆಯದೇ ಜಾತಿ ಪ್ರಮಾಣ ಪತ್ರ ನೀಡಿದ ತಹಶೀಲ್ದಾರರು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಸತೀಶ್ ಖಾರ್ವಿ ಕುಂದಾಪುರ, ಕಂದಾಯ ಸಚಿವರಾದ ಕೃಷ್ಣೆ ಬೈರೇಗೌಡರಿಗೆ ದೂರು ನೀಡಿದ್ದಾರೆ. ಕುಂದಾಪುರ ಕಸ್ಟಾ ಗ್ರಾಮದ ಜಯಾನಂದ ಎಂಬುವರು RD 0038651212745 ರಂತೆ ದಿನಾಂಕ 15-09-2020 ರಂದು ಸುಳ್ಳು ಜಾತಿ ಪ್ರಮಾಣ ಪಡಕೊಂಡ ಬಾಬ್ತು ಎಲ್ಲಾ

ಶಂಕರನಾರಾಯಣ ಹೊಕ್ಕ ಮೂರು ಜಿಲ್ಲೆಯ ಕಳ್ಳರು

ಮೂರು ಜಿಲ್ಲೆಗಳ ಮೂವರು ಕಳ್ಳರು ಸೇರಿ ಕುಂದಾಪುರ ತಾಲೂಕಿನ ಶಂಕರನಾರಾಯಣದ ಗೋಳಿಕಟ್ಟೆಯಲ್ಲಿನ ಬಿಎಸ್ಎನ್ಎಲ್ ಟವರ್ ಹೊಕ್ಕು ಬ್ಯಾಟರಿ ಬಾಕ್ಸ್ ಕದ್ದಿದ್ದರು. ಮೂವರನ್ನೂ ಬಂಧಿಸಿದ ಪೋಲೀಸರು ಕುಂದಾಪುರ ನ್ಯಾಯಾಲಯದಲ್ಲಿ ನಿಲ್ಲಿಸಿ, ಜೈಲಿಗೆ ಕಳುಹಿಸಿದ್ದಾರೆ. ಉಡುಪಿ ಉದ್ಯಾವರ ಪಿತ್ರೋಡಿಯ 45ರ ಬಾಲಕೃಷ್ಣ, ಬಂಟ್ವಾಳ ಫರಂಗಿಪೇಟೆಯ 38ರ ಬದ್ರುದ್ದೀನ್, ಹೊನ್ನಾವರ ಕರ್ಕಿ ಮೂಲದ ಉಡುಪಿ ಲಕ್ಷ್ಮಿನಗರ ನಿವಾಸಿ 36ರ ಉಸ್ಮಾನ್ ಬಂಧಿತರು. ಅವರಿಂದ ಬ್ಯಾಟರಿ ಸಾಗಿಸಲು ಬಳಸಿದ

ಕುಂದಾಪುರ: ತಹಶೀಲ್ದಾರ್  ಶೋಭಾ ಲಕ್ಷ್ಮೀ,  ರಾಜ್ಯಸ್ವ ಅಧಿಕಾರಿ ರಾಘವೇಂದ್ರ, ವಿಎ ಚಂದ್ರಶೇಖರ್ ಮೂರ್ತಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಕುಂದಾಪುರದ ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಲಾಬಿ ಶೆಡ್ತಿ ಮತ್ತು ಅವರ ಪತಿ ಶ್ರೀಧರ್ ಶೆಟ್ಟಿ ಮದ್ರೋಳಿ ಮಂಗನಸಾಲು ಎಂಬವರಿಗೆ ಸಿದ್ದಾಪುರ ಗ್ರಾಮದ ಸರ್ಕಾರಿ ಸ್ಥಳದ ಸರ್ವೇ ನಂಬ್ರ 250/1ರಲ್ಲಿ ಅಕ್ರಮ ಕಟ್ಟಡ ಕಟ್ಟುತ್ತಿರುವ ಬಗ್ಗೆ ಈಗಾಗಲೇ ಎರಡು ಬಾರಿ ನೋಟಿಸು ನೀಡಿದ್ದರೂ ತಮಗೆ ಸಂಬAಧವೇ ಇಲ್ಲವೆಂದು ಅಕ್ರಮ ಕಟ್ಟಡವನ್ನು ನಿರ್ಮಿಸುತ್ತಿರುತ್ತಾರೆ. ಮೊದಲೇ ನೋಟಿಸ್ ದಿನಾಂಕ 24.08.2020ರಲ್ಲಿ ಶ್ರೀಧರ್ ಶೆಟ್ಟಿಯವರ ಪತ್ನಿ ಗುಲಾಬಿ ಶೆಡ್ತಿಯವರಿಗೆ

ಪಡುಬಿದ್ರಿ: ಮದ್ಯ ಸೇವಿಸಿ ಪೊಲೀಸರ ಅತಿಥಿಯಾದ ವಾಹನ ಚಾಲಕ

ರಾತ್ರಿ ಹೊತ್ತು ಗ್ಯಾಸ್ ಸಾಗಾಟ ವಾಹನವೊಂದನ್ನು ಅಪಾಯಕಾರಿ ಸ್ಥಿತಿಯಲ್ಲಿ ಹೆದ್ದಾರಿಯಲ್ಲೇ ನಿಲ್ಲಿಸಿ ಮದ್ಯ ಸೇವಿಸಲು ಹೋದ ಚಾಲಕ ಪೊಲೀಸರ ಅತಿಥಿಯಾಗಿದ್ದಾನೆ. ಮೂಡಬಿದರೆಯದ್ದು ಎನ್ನಲಾದ ಎಚ್‌ಪಿ ಅನಿಲ ಸಾಗಾಟ ವಾಹನವನ್ನು ಅದರ ಚಾಲಕ ಕಟಪಾಡಿ ಪೇಟೆಬಳಿ ಹೆದ್ದಾರಿಯಲ್ಲೇ ನಿಲ್ಲಿಸಿ ತೆರಳಿದ್ದು, ಸ್ಥಳಕ್ಕೆ ಬಂದ ಕಟಪಾಡಿಯ ಉಪ ಠಾಣಾ ಪೊಲೀಸ್ ಒರ್ವರು ಸುಮಾರು ಅರ್ಧ ಗಂಟೆ ಕಾದು ಆ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಕಂಠಪೂರ್ತಿ ಕುಡಿದು ಬಂದ ಚಾಲಕ ತಾನು

ಕಾರ್ಕಳ: ಕೌಡೂರು ವ್ಯಾಪ್ತಿಯಲ್ಲಿ 4 ಜನರ ಮೇಲೆ ಚಿರತೆ ದಾಳಿ

ಹೊಂಚು ಹಾಕಿ ಸಂಚು ಮಾಡಿ ಸಾಕು ಪ್ರಾಣಿಗಳನ್ನ ಬೇಟೆಯಾಡುತ್ತಿದ್ದ ಬೇಟೆಗಾರ ಪ್ರಾಣಿ ಇದು. ಇತ್ತೀಚಿನ ದಿನಗಳಲ್ಲಿ ಬೇಟೆಯ ಬದಲಿಗೆ ಸ್ಥಳೀಯರ ಮೇಲೆ ದಾಳಿ ಮಾಡುವ ಮೂಲಕ ಭಯ ಹುಟ್ಟಿಸಿದೆ. ಎರಡು ಮೂರು ದಿನಗಳ ಅಂತರದಲ್ಲಿ ನಾಲ್ಕು ಜನರಿಗೆ ದಾಳಿ ಮಾಡಿ ಪರಾರಿಯಾಗಿರುವ ಈ ಚಿರತೆ, ಸೆರೆ ಹಿಡಿಯಲು ಅರಣ್ಯ ಇಲಾಖೆ ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದೆ… ಹೌದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕೌಡೂರು ಗ್ರಾಮ ಪಂಚಾಯಿತಿ ಬಹುತೇಕ ಕಿರು ಅರಣ್ಯ ವೇ ತುಂಬಿರುವ ಪ್ರದೇಶ. ಈ

ಪಡುಬಿದ್ರಿ: ಆದ್ಯಾ ಫೌಂಡೇಷನ್ ವತಿಯಿಂದ ಉದ್ಯೋಗ ಮೇಳ

ನಿರಂತರ ಸಮಜೋಮುಖಿ ಕಾರ್ಯಗಳನ್ನೇ ತನ್ನ ಉಸಿರಾಗಿಸಿಕೊಂಡ ಪಡುಬಿದ್ರಿಯ ಆದ್ಯಾ ಫೌಂಡೇಷನ್ ವತಿಯಿಂದ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಪಡುಬಿದ್ರಿ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಉದ್ಯೋಗ ಮೇಳದ ಉದ್ಘಾಟನೆಯನ್ನು ಸರಳ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ ಮುಕ್ತೇಸರರಾದ ಜೀತೇಂದ್ರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಿವಿಧ ಉದ್ಯೋಗ ಆಕಾಂಕ್ಷೀ ಗಳಿಗಾಗಿ ರಾಕೇಶ್ ಅಜಿಲ ಸಾರಥ್ಯದ ಆದ್ಯಾ

ಕುಂದಾಪುರ: ಬಿಲ್ಲವ ಸಮುದಾಯದಲ್ಲಿ ಒಗ್ಗಟ್ಟಿಲ್ಲ: ರವಿಕುಮಾರ್ ಎಚ್. ಆರ್ ಕಳವಳ

ಕುಂದಾಪುರ: ಸಾಕಷ್ಟು ಬಲಿಷ್ಠವಾಗಿದ್ದ ಬಿಲ್ಲವ ಸಮಾಜ 26 ಉಪಪಂಗಡಗಳಾಗಿ ಹರಿದು ಹಂಚಿ ಹೋಗಿದೆ. ಎಲ್ಲರೂ ಒಗ್ಗೂಡಿದರೆ ನಾವು ಇಡೀ ರಾಜ್ಯವನ್ನೇ ಆಳಬಹುದು. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಶ್ರೀ ಕ್ಷೇತ್ರ ಸಿಗಂಧೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್. ಆರ್ ಕಳವಳ ವ್ಯಕ್ತಪಡಿಸಿದರು. ನಗರದ ನಾರಾಯಣ ಗುರು ಸಭಾಭವನದಲ್ಲಿ ಜರುಗಿದ ಬಿಲ್ಲವ ಸಮಾಜ ಸೇವಾ ಸಂಘ (ರಿ) ಕುಂದಾಪುರ ಇದರ 31 ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ ಮತ್ತು

ಕಾರ್ಕಳ: ಡಿ.9ರಂದು ಲೋಕ ಅದಾಲತ್: ಹಳೆಯ ಪ್ರಕರಣ ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ

ಡಿಸೆಂಬರ್ 9ರಂದು ದೇಶದಾದ್ಯಂತ ನಡೆಯಲಿರುವ ರಾಷ್ಟೀಯ ಲೋಕ ಅದಾಲತ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ವಿಚಾರಣೆಗೆ ಬಾಕಿಯಿರುವ ಹಳೆಯ ಪ್ರಕರಣಗಳನ್ನು ಎರಡೂ ಕಕ್ಷಿದಾರರ ಒಪ್ಪಿಗೆ ಮೇರೆಗೆ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಸದವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕಾರ್ಕಳ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶರ್ಮಿಳಾ ಸಿ ಎಸ್ ಹೇಳಿದರು. ಅವರು ಈ ಕುರಿತು