Home ಕರಾವಳಿ Archive by category ಮಂಗಳೂರು (Page 23)

ಮಂಗಳೂರು: ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಪ್ರಾಯೋಜಕತ್ವದಲ್ಲಿ ನ.10 ರಂದು ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ

ಮಂಗಳೂರು ಎ.ಬಿ.ಶೆಟ್ಟಿ ಸರ್ಕಲ್‌ನ ಪಾರಡಿಗಂ ಪ್ಲಾಜಾದಲ್ಲಿರುವ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮವು ನ.10 ರಂದು ನಗರದ ಪುರಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿದ್ದು, ಶಾಸಕ ಡಿ.ವೇದವ್ಯಾಸ್ ಕಾಮತ್ ವಿದ್ಯಾರ್ಥಿ ವೇತನ ವಿತರಿಸಲಿದ್ದಾರೆ.

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ – ನವೆಂಬರ್ 7

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ – ಪ್ರತಿ ವರ್ಷ ಭಾರತದಾದ್ಯಂತ ನವಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ ಎಂದು ಆಚರಿಸಿ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ, ಆರಂಭಿಕ ಹಂತದಲ್ಲಿ ಗುರುತಿಸುವುದರ ಮಹತ್ವ ಮತ್ತು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ಮಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ. ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮ ಭಾರತದಲ್ಲಿ 1975 ರಲ್ಲಿ ಆರಂಭವಾಯಿತು. ಆದರೆ

ಮತ್ತೆ ಮರುಕಳಿಸುತ್ತಿರುವ ಝಿಕಾ ಜ್ವರ

ಆಧುನಿಕ ಸಂಶೋಧನೆಗಳು, ಆವಿಷ್ಕಾರಗಳು ಹೆಚ್ಚಿದಂತೆ, ವೈದ್ಯರಿಗೆ ಹೊಸ ರೋಗಗಳನ್ನು ಗುರುತಿಸುವಲ್ಲಿ ಮತ್ತು ಚಿಕಿತ್ಸೆಯನ್ನು ನೀಡುವಲ್ಲಿ ಹೆಚ್ಚಿನ ಅನುಕೂಲ ಉಂಟಾಗಿದೆ ಎನ್ನುವುದು ಸತ್ಯವಾದ ವಿಚಾರ. ಅದರ ಜೊತೆಗೆ ಕೆಲವೊಂದು ರೋಗಾಣುಗಳು ತಮ್ಮ ದೇಹದ ರಚನೆಯನ್ನು ಪರಿಸ್ಥಿತಿಗೆ ಪೂರಕವಾಗಿ ಮಾರ್ಪಾಡುಗೊಳಿಸಿಕೊಂಡು, ಹೊಸ ಹೊಸ ರೋಗಗಳಿಗೆ ಕಾರಣವಾಗಿ ವೈದ್ಯಲೋಕಕ್ಕೆ ಸವಾಲಾಗಿ ನಿಲ್ಲತೊಡಗಿರುವುದು ವಿಪರ್ಯಾಸವಾದರೂ ಸತ್ಯ. ಅಂತಹ ರೋಗಾಣು ಮತ್ತು ರೋಗಗಳ ಸಾಲಿಗೆ ಸೇರುವ

ಮುಲ್ಕಿ : ಪೇಜಾವರ ಸ್ವಾಮಿಗಳಿಗೆ ಪಿತೃ ವಿಯೋಗ

ಪೇಜಾವರ ಸ್ವಾಮೀಜಿಗಳ ಪೂರ್ವಶ್ರಮದ ತೀರ್ಥ ರೂಪರಾದ ಶತಾಯುಷಿ ಪಕ್ಷಿಕೆರೆ ಸಮೀಪದ ಅಂಗಡಿಮಾರು ಕೃಷ್ಣ ಭಟ್ಟರು ಭಾನುವಾರ ತಡರಾತ್ರಿ ನಿಧನ ರಾದರು.ಅವರಿಗೆ 103 ವರ್ಷ ವಯಸ್ಸಾಗಿತ್ತು. ಕೃಷ್ಣ ಭಟ್ಟರು ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ ಸಹಿತ 5 ಪುತ್ರರು ಹಾಗೂ 6 ಪುತ್ರಿಯರನ್ನು ಅಗಲಿದ್ದಾರೆ. ಪಕ್ಷಿಕೆರೆ ಸಮೀಪದ ಅಂಗಡಿಮಾರು ಬಳಿ ಹಿರಿಯ ಕೃಷಿಕರಾಗಿದ್ದ ಅವರು ಕಳೆದ ಹಲವಾರು ವರುಷಗಳಿಂದ ಪುರೋಹಿತ ವೃತ್ತಿ ಜತೆಗೆ ತುಳುನಾಡ ಪಂಚಾಗ ರಚಿಸಿದ್ದರು.ತಮ್ಮ ಮನೆಯಲ್ಲಿ

ತೊಕ್ಕೊಟ್ಟು: ಕೊಚ್ಚಿನ್ ಬೇಕರಿಯ ಮಳಿಗೆ ಶುಭಾರಂಭ

ತನ್ನದೇ ಆದ ರುಚಿ, ಗುಣಮಟ್ಟಕ್ಕೆ ಪ್ರಸಿದ್ಧಿಯನ್ನು ಪಡೆದ ಕೇಕ್ ಮತ್ತು ಸ್ವೀಟ್‍ನ ಕೊಚ್ಚಿನ್ ಬೇಕರಿಯ ಮತ್ತೊಂದು ಮಳಿಗೆ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಶುಭಾರಂಭಗೊಂಡಿತು. ಉತ್ತಮ ಆಹಾರಕ್ಕಿಂತ ಹೆಚ್ಚಿನ ಸಂತೋಷವನ್ನು ಬೇರೆ ಯಾವುದೂ ಜನರಿಗೆ ತರುವುದಿಲ್ಲ.ಕೇಕ್‍ಗಳು, ಸಿಹಿತಿಂಡಿಗಳು ಮತ್ತು ಬೇಕರಿ ವಸ್ತುಗಳ ಎಲ್ಲಾ ಆಹಾರ ಉತ್ಪನ್ನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದ ಅತ್ಯುತ್ತಮ ಬೇಕರಿ ಉತ್ಪನ್ನಗಳ

ಮಂಗಳೂರು: ವಿದ್ಯುತ್ ಖಾಸಗೀಕರಣದ ಮೂಲಕ ದೇಶವನ್ನೇ ಕತ್ತಲು ಮಾಡುವ ಹುನ್ನಾರ – ಸುನಿಲ್ ಕುಮಾರ್ ಬಜಾಲ್

ವಿದ್ಯುತ್ ಕ್ಷೇತ್ರದಲ್ಲಿನ ಉತ್ಪಾದನೆ,ವಿತರಣೆ ಹಾಗೂ ಕಂದಾಯ ಆಕರಣೆ ಇದ್ಯಾವುದನ್ನೂ ಸರಕಾರ ಮಾಡಬಾರದು. ಅವೆಲ್ಲವನ್ನೂ ಖಾಸಗೀಯವರಿಗೆ ವಹಿಸಿ ಸರಕಾರ ತನ್ನ ಜವಾಬ್ದಾರಿಯಿಂದ ಮುಕ್ತವಾಗಬೇಕು ಎಂದು ಕೇಂದ್ರ ಸರಕಾರದ ಅಡಿಯಲ್ಲಿರುವ ನೀತಿ ಆಯೋಗ ಅತ್ಯಂತ ಸ್ಪಷ್ಟವಾಗಿ ಹೇಳಿರುವುದು, ದೇಶದ ಸಂಪತ್ತನ್ನು ಮಾರಲು ಹೊರಟ ಕೇಂದ್ರ ಸರಕಾರದ ಧೋರಣೆ ಏನೆಂಬುದು ಜಗಜ್ಜಾಹೀರಾಗಿದೆ.ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣಗೊಳಿಸುವ ಮೂಲಕ ಇಡೀ ದೇಶವನ್ನೇ ಕತ್ತಲು ಮಾಡಲು

ಮಂಗಳೂರು: ಲಾರಿ ಮಾಲಕರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಬೇಕಿದೆ : ಶಾಸಕ ಡಾ| ವೈ. ಭರತ್ ಶೆಟ್ಟಿ

‘ಉದ್ಯಮ ವಲಯ ಚೇತರಿಸುತ್ತಿದ್ದರೂ ಲಾರಿ ಮಾಲಕರು ಇನ್ನೂ ಸಂಕಷ್ಟದಲ್ಲಿಯೇ ಇರುವುದು ವಿಪರ್ಯಾಸ. ಲಾರಿ ವ್ಯವಹಾರ ನಷ್ಟದಲ್ಲಿಯೇ ಮುಂದುವರಿಯಬಾರದು. ಸರಕಾರ ಲಾರಿ ಮಾಲಕರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ’ ಎಂದು ಶಾಸಕ ಡಾ| ವೈ. ಭರತ್ ಶೆಟ್ಟಿ ಹೇಳಿದರು. ಅವರು ಕುಳಾಯಿಯಲ್ಲಿ ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ (ರಿ.) ಇದರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು. ಜಿಂದಾಲ್ ಮಂಗಳೂರು ಕಲ್ಲಿದ್ದಲು ಘಟಕ ಮುಖ್ಯಸ್ಥ ಎಲ್. ರಾಮನಾಥನ್ ಮಾತನಾಡಿ

ಮಂಗಳೂರು: ಡಾ. ಪ್ರಭಾಕರ ನೀರ್‌ಮಾರ್ಗ ಅವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು ವಿಶ್ವ ವಿದ್ಯಾನಿಲಯದ ಮಾಜಿ ಉಪ ನೋಂದಣಾಧಿಕಾರಿ ಹಾಗೂ ಮ್ಯಾಪ್ಸ್ ಇವ್‌ನಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾಕರ ನೀರ್‌ಮಾರ್ಗ ಅವರು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಈ ಬಾರಿಯ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.ನಗರದ ನೆಹರೂ ಮೈದಾನದಲ್ಲಿ ಇಂದು ಬೆಳಗ್ಗೆ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಮಂಗಳೂರು: ಪ್ರೆಸ್‍ಕ್ಲಬ್ ಅತಿಥಿಯಾಗಿ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಗೌರವ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನ. 25 ಮತ್ತು 26ರಂದು ನಡೆಯಲಿರುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ಒಂದು ಹಂತದ ಕಂಬಳ ಕರೆಗಳ ನಿರ್ಮಾಣವಾಗಿದ್ದು, ಅದನ್ನು ನೋಡಲೆಂದೇ ದಿನವೊಂದಕ್ಕೆ ಸಾವಿರಾರು ಜನ ಸೇರುತ್ತಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಮಂಗಳೂರು ಪ್ರೆಸ್‍ಕ್ಲಬ್ ನ ಗೌರವ ಅತಿಥಿಯಾಗಿ ಭಾಗವಹಿಸಿ ಗೌರವ ಸ್ವೀಕರಿಸಿದ ಅವರು ಬೆಂಗಳೂರು

ಮಂಗಳೂರು: ‘ಕರ್ನಾಟಕಕ್ಕೆ 50ರ ಸಂಭ್ರಮ’: ಶೃಂಗಾರಗೊಂಡ ಮಂಗಳೂರು ಪಾಲಿಕೆ ಆವರಣ

ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಟ್ಟು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವೈವಿಧ್ಯಮಯವಾಗಿ ನಾಡಹಬ್ಬ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಇದರಂತೆ ಮಂಗಳೂರು ಮಹಾನಗರ ಪಾಲಿಕೆ ಆವರಣ ಕನ್ನಡ ಬಾವುಟದ ಮುಖಾಂತರ ಶೃಂಗಾರಗೊಂಡಿದೆ. ಮಂಗಳೂರು ಪಾಲಿಕೆ ಕಚೇರಿಯ ಮುಖ್ಯ ಪ್ರವೇಶ ದ್ವಾರವನ್ನು ಕನ್ನಡ ಬಾವುಟದಿಂದಲೇ ವಿಶೇಷವಾಗಿ ಅಲಂಕರಿಸಲಾಗಿದೆ. ಪಾಲಿಕೆ ಕಚೇರಿ ಮುಂಭಾಗ ಕನ್ನಡ ಬಾವುಟದ ಸ್ವಾಗತ ಕಮಾನುಗಳು, ಶುಭಾಯ ಕೋರಿ ಹಾಕಿದ ನಾಮಫಲಕ, ನಾಡು ನುಡಿ