Home ಕರಾವಳಿ Archive by category ಮೂಡಬಿದರೆ (Page 12)

ಮೂಡುಬಿದಿರೆ: ಮೈಸೂರು ವಿಭಾಗೀಯ ಮಟ್ಟದ ಜಾನಪದ ಕಲಾ ತಂಡಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

ದ.ಕ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ “ಮೈಸೂರು ವಿಭಾಗೀಯ ಮಟ್ಟದ ಜಾನಪದ ಕಲಾ ತಂಡಗಳ ತರಬೇತಿ ಕಾರ್ಯಗಾರ”ವು ವಿದ್ಯಾಗಿರಿಯ ಶ್ರೀಮತಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ಗುರುವಾರ

ಮೂಡುಬಿದಿರೆ: ವಿಶೇಷ ಚೇತನರ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ದ.ಕ ಜಿಪಂ , ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ ಇವುಗಳ ಸಹಯೋಗದೊಂದಿಗೆ ಸ್ವರಾಜ್ಯ ಮೈದಾನದಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ವಿಶೇಷ ಸಾಮಥ್ರ್ಯದ ಮಕ್ಕಳ ಕ್ರೀಡಾ ಕೂಟಕ್ಕೆ ಮೂಡುಬಿದಿರೆ ರೋಟರಿ ಕ್ಲಬ್‍ನ ಅಧ್ಯಕ್ಷ ನಾಗರಾಜ್ ಬಿ.ಚಾಲನೆಯನ್ನು ನೀಡಿದರು.

ಮೂಡುಬಿದಿರೆ: ಅಸಹಾಯಕ ಮಹಿಳೆಗೆ ಸರ್ವೋದಯ ಫ್ರೆಂಡ್ಸ್ ನಿಂದ ಮನೆ ಹಸ್ತಾಂತರ

ಮೂಡುಬಿದಿರೆ: ಪಡುಮಾರ್ನಾಡು ಗ್ರಾಪಂ ವ್ಯಾಪ್ತಿಯ ಅಮನಬೆಟ್ಟು ಬಳಿಯ ಬಡ ಮಹಿಳೆ ಸುಮಾ ಕುಟುಂಬಕ್ಕೆ ಸರ್ವೋದಯ ಫ್ರೆಂಡ್ಸ್ ಬೆದ್ರದಿಂದ ರೂ.7 ಲಕ್ಷ ವೆಚ್ಚದಲ್ಲಿ `ಸರ್ವೋದಯ ನಿಲಯ’ ಎಂಬ ಹೆಸರಿನ ಮನೆ ನಿರ್ಮಿಸಿದ್ದು ಅದನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಮೂಡುಬಿದಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ನಾವು ನಮ್ಮ ಧರ್ಮವನ್ನು ಉಳಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ. ಬಡವರಿಗೆ,

ಮೂಡುಬಿದಿರೆ: ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ನಿಧನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ತಂದೆ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ (106)ರು ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನದ ವೇಳೆ ನಿಧನರಾಗಿದ್ದಾರೆ.

ಮೂಡುಬಿದಿರೆ: ದ.ಕ. ಜಿಲ್ಲಾಮಟ್ಟದ ಕ್ರೀಡಾಕೂಟ, ಕಡಬದ ಚರಿಷ್ಮಾ ಕೂಟ ದಾಖಲೆ

ಮೂಡುಬಿದಿರೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ಬಾಲಕಿಯರ ವಿಭಾಗದ 1500 ಮತ್ತು 3000 ಕಿ.ಮೀ ಓಟದಲ್ಲಿ ಪುತ್ತೂರು ತಾಲೂಕಿನ ಕಡಬ ಸ.ಪ.ಪೂ.ಕಾಲೇಜಿನ ಚರಿಷ್ಮಾ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ. ಎಡಪದವು ಪ.ಪೂ.ಕಾಲೇಜಿನ ಸೌಮ್ಯ ಕೆ.ಪಿ ಅವರು 2004ರಲ್ಲಿ 5:01.70 ಸೆಕುಂಡು ನಲ್ಲಿ ಕ್ರಮಿಸಿ ಮಾಡಿರುವ ದಾಖಲೆಯನ್ನು ಚರಿಷ್ಮಾ ಅವರು 4:53.9 ಸೆಕುಂಡಿನಲ್ಲಿ ಕ್ರಮಿಸುವ ಮೂಲಕ ಹಾಗೂ 3000 ಓಟದಲ್ಲಿ 10:44.7 ಸೆಕುಂಡಿನಲ್ಲಿ

ಬೈಕ್ ಕಳವು : ಅಂತರ್ ಜಿಲ್ಲೆ ಚೋರರನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು

ಮೂಡುಬಿದಿರೆ : ಉತ್ತರ ಕನ್ನಡ ಜಿಲ್ಲೆ ಮತ್ತು ದ.ಕ.ದ ಮೂಡುಬಿದಿರೆಯಿಂದ ಬೈಕ್ ಕಳವು ಮಾಡಿರುವ ಅಂತರ್ ಜಿಲ್ಲಾ ಚೋರರನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ಪೊಲೀಸರ ತಂಡವು ಶುಕ್ರವಾರ ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಅಂಜನೇಯ ದೇವಸ್ಥಾನದ ಬಳಿ ಕೊಡವತಿ ಗ್ರಾಮದ ಆಕಾಶ್ ಕಲ್ಕಿ ಹಾಗೂ ಅಂಜನೇಯ ದೇವಸ್ಥಾನದ ಹತ್ತಿರ, ಬೀರ್ಗನಹಳ್ಳಿಯವೀರೇಂದ್ರ ಬಂಧಿತರು. ಮುಂಜಾನೆಯ ಜಾವ ಮೂಡುಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರಾಂತ ಗ್ರಾಮದ

ಮುಂಬೈಯಲ್ಲಿ ನವರಾತ್ರಿ ವಿಶೇಷ ನಾಟ್ಯಾಯನ

ಮೂಡುಬಿದಿರೆ: ಭಗವದ್ಗೀತೆ, ಸಂಗೀತ, ನೃತ್ಯ, ನಾಟಕ, ಸಂಸ್ಕೃತಿ, ಶಿಕ್ಷಣ ಗಳ ವಿಶಿಷ್ಟ ಸಮ್ಮೇಳನದ ನಾಟ್ಯಾಯನ ಕಾರ್ಯಕ್ರಮ ನೀಡುತ್ತಿರುವ ಮೂಡುಬಿದಿರೆಯಅಯನಾ. ವಿ. ರಮಣ್ ಅನನ್ಯ- ಅದ್ಭುತ ಕಲಾವಿದೆ. ಅಸಾಧಾರಣ ಸ್ಮರಣ ಶಕ್ತಿ, ಪರಿಣಾಮಕಾರಿ ಅಭಿನಯದ ಅದ್ಭುತ ಸಾಧನೆ ಮಾಡಿದ ಕಲಾವಿದೆ. ಈಕೆಗೆ ರಾಷ್ಟçಮಟ್ಟದ ಪ್ರಶಸ್ತಿಗಳು ಲಭಿಸಲಿ ಎಂದು ಮುಂಬೈ ಶ್ರೀಗಾಂದೇವಿ ಅಂಬಿಕಾ ಶ್ರೀ ಆದಿನಾಥೇಶ್ವರ ಶ್ರೀಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಪೆರಣ0ಕಿಲ ಹರಿದಾಸ್ ಭಟ್

ಮೂಡುಬಿದಿರೆ ಬಸದಿಗಳಲ್ಲಿ ತೆನೆ ಹಬ್ಬ

ಮೂಡುಬಿದಿರೆ:ವಿಜಯದಶಮಿ ಪ್ರಯುಕ್ತ ಮೂಡುಬಿದಿರೆ ಶ್ರೀ ಜೈನಮಠಹಾಗೂ ಬಸದಿಗಳಲ್ಲಿ ತೆನೆಹಬ್ಬ, ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಅವರ ಮಾರ್ಗದರ್ಶನದಲ್ಲಿ ನಡೆಯಿತು. ದೇಶದ ಸಮಸ್ತರಿಗೆ ಒಳಿತಾಗಲಿ. ಕಾಲ ಕಾಲಕ್ಕೆ ಮಳೆ ಬಂದು ಪ್ರಕೃತಿ ವಿಕೋಪ ವಾಗದೆ, ಲೋಕದಲ್ಲಿ ಶಾಂತಿ, ಸುಭಿಕ್ಷೆ ಉಂಟಾಗಲಿ ಎಂದು ಭಟ್ಟಾರಕ ಸ್ವಾಮೀಜಿ ನುಡಿದರು. ಸಾವಿರಕಂಬ ಬಸದಿ ಹಾಗೂ ಗುರು ಬಸದಿಯಿಂದ ಜೈನಪೇಟೆಯ ಮೂಲಕ ಅಮ್ಮನವರ ಬಸದಿ

ಭಾರತೀಯ ಗಡಿ ಭದ್ರತಾ ಸೇನೆಗೆ ಸಂದೀಪ್ ಎಂ ಶೆಟ್ಟಿ ಮಾರೂರು ಆಯ್ಕೆ

ಮೂಡುಬಿದಿರೆ : ತಾಲೂಕಿನ ಮಾರೂರು ಗ್ರಾಮದ ಅರಮನೆ ಬಳಿಯ ರಾಜು ಶೆಟ್ಟಿ -ರತಿ ದಂಪತಿಯ ಪುತ್ರ ಸಂದೀಪ್ ಎಂ ಶೆಟ್ಟಿ ಮಾರೂರು ಇವರು ಭಾರತೀಯ ಗಡಿ ಭದ್ರತಾ ಸೇನೆಗೆ ಆಯ್ಕೆಯಾಗಿದ್ದಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಮಾರೂರು ಹೊಸಂಗಡಿ ಇಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಎಸ್ ಡಿ ಎಂ ಪೆರಿಂಜೆಯಲ್ಲಿ ಮುಗಿಸಿ, ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಪಿಯು ಕಾಲೇಜು ವೇಣೂರಲ್ಲಿ ಹಾಗೂ ಪದವಿ ಶಿಕ್ಷಣವನ್ನು ಮೂಡುಬಿದಿರೆ ಧವಲಾ ಕಾಲೇಜಿನಲ್ಲಿ

ಮೂಡುಬಿದಿರೆ: ಅಗ್ನಿಶಾಮಕ ಠಾಣೆಯಲ್ಲಿ ಆಯುಧ ಪೂಜೆ

ಮೂಡುಬಿದಿರೆ ಒಂಟಿಕಟ್ಟೆ ಕಡಲಕೆರೆ ಬಳಿ ಇರುವ ತಾಲೂಕು ಅಗ್ನಿಶಾಮಕ ಠಾಷೆಯಲ್ಲಿ ಸೋಮವಾರ ಆಯುಧ ಪೂಜೆ ಮತ್ತು ವಾಹನ‌ಪೂಜೆ ನಡೆಯಿತು.ಆಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಪ್ರಸಾದ್ ಭಟ್ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.ಅಗ್ನಿಶಾಮಕ ಠಾಣಾಧಿಕಾರಿ ಮತ್ತು ಸಿಬಂಧಿ ವರ್ಗ ಹಾಗೂ ಊರವರು ಈ ಸಂದರ್ಭದಲ್ಲಿದ್ದರು.