Home ಕರಾವಳಿ Archive by category ಸುರತ್ಕಲ್ (Page 8)

ಸುರತ್ಕಲ್ : ಟೋಲ್ ಗು ಟೋಲ್ ಗು ಮದುವೆಯಂತೆ …!

ಮಂಗಳೂರು: ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ ಗೇಟ್ ಗೆ ಬಿಜೆಪಿ ಸರ್ಕಾರದ ಕೃಪೆಯಿಂದ ಶುಭ ವಿವಾಹ. ಇಂತಹದ್ದೊಂದು ವಿವಾಹ ಆಮಂತ್ರಣದ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಸುರತ್ಕಲ್ ನ ಎನ್ ಐಟಿಕೆ ಬಳಿಯಿದ್ದ ಅಕ್ರಮ ಟೋಲ್ ಗೇಟ್ ಇತ್ತೀಚೆಗೆ ಸಾರ್ವಜನಿಕರ ಭಾರೀ ಆಕ್ರೋಶದ ಹಿನ್ನೆಲೆಯಲ್ಲಿ ರದ್ದಾಗಿತ್ತು. ಆದರೆ, ಇದಾದ ಬಳಿಕ ಹೆಜಮಾಡಿ

ಅಕ್ರಮ ಟೋಲ್ : ಅಭಿನಂದನೆಯ ಫ್ಲೆಕ್ಸ್ ಸ್ಮಶಾನ ಪಾಲು ..

ಸುರತ್ಕಲ್‌, ನ.28: ಸುರತ್ಕಲ್‌ ಟೋಲ್‌ಗೇಟ್‌ ನ.30ರಿಂದ ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನವಾಗು ತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಸದರು ಹಾಗೂ ಶಾಸಕರಿಗೆ ಅಭಿನಂದನೆ ತಿಳಿಸುವ ಬೃಹತ್‌ ಬ್ಯಾನರ್‌ಗಳು ಸುರತ್ಕಲ್ ನ ಸ್ಮಶಾನ ಸೇರಿವೆ. ಸುರತ್ಕಲ್‌ ಹೃದಯಭಾಗದಲ್ಲಿರುವ ಸ್ಮಶಾನದ ಒಳಭಾಗದಲ್ಲಿ ಹಲವು ಬ್ಯಾನರ್‌ಗಳು ಪತ್ತೆಯಾಗಿದ್ದು, “ಸುರತ್ಕಲ್‌ ಟೋಲ್‌ಗೇಟ್‌ ರದ್ದು ಮಾಡುವ ಭರವಸೆಯನ್ನು ಈಡೇರಿಸಿದ ಮಾನ್ಯ ಮಂಗಳೂರು ಲೋಕಸಭಾ ಸದಸ್ಯರಾದ ಶ್ರೀ ನಳಿನ್‌

ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ; ಮಾ.5 ರಿಂದ 13 ರವರೆಗೆ ಬ್ರಹ್ಮಕಲಶ ಮತ್ತು ಜಾತ್ರಾ ಮಹೋತ್ಸವ

ಚಿತ್ರಾಪುರ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಿತ್ರಾಪುರ ಇಲ್ಲಿನ ಜೀರ್ಣೋದ್ಧಾರಕ್ಕೆ ಸರ್ವ ಭಕ್ತರು ಕೈ ಜೋಡಿಸಿ ದೇವಸ್ಥಾನವನ್ನು ಐತಿಹಾಸಿಕವಾಗಿ ಬೆಳಗಿಸಿ ಶ್ರೀ ದೇವಿಯ ಆಶೀರ್ವಾದ ಪಡೆಯುವಂತಾಗಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಬ್ರಹ್ಮಕಲಶಾಧಿ ದಾರ್ಮಿಕ ಸೇವಾ ಕಾರ್ಯಗಳು ಮಾ.5 ರಿಂದ 13 ರವರೆಗೆ ಜರಗಲಿದ್ದು ,13 ರಂದು ಬ್ರಹ್ಮಕಲಶ ಮತ್ತು 14 ರಿಂದ ಜಾತ್ರಾ ಮಹೋತ್ಸವ

ನಾಲ್ಕು ವಾರ ಪೂರ್ತಿಗೊಳಿಸಿದ ಹಗಲು ರಾತ್ರಿ ಧರಣಿ

ಟೋಲ್ ಗೇಟ್ ತೆರವಿಗೆ ಆಗ್ರಹಿಸಿ‌ ನಡೆಯುತ್ತಿರುವ ಹಗಲು ರಾತ್ರಿ ಧರಣಿ ಇಂದು 28 ದಿನಗಳನ್ನು ಪೂರ್ಣಗೊಳಿಸಿತು. ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆಗಳ ಕಾರ್ಯಕರ್ತರು ಇಂದಿನ ಧರಣಿಯಲ್ಲಿ ಪಾಲ್ಗೊಂಡರು. ಅಧಿಸೂಚನೆ ಹೊರಟು ಹನ್ನೆರಡು ದಿನ ದಾಟಿದರೂ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ವಿಫಲವಾಗಿರುವ ಜಿಲ್ಲಾಡಳಿತದ ವಿರುದ್ದ ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಮೊಯ್ದಿನ್ ಬಾವಾ ಸಹಿತ ಭಾಷಣ ಮಾಡಿದ ನಾಯಕರುಗಳು ಸ್ಥಳೀಯ ಶಾಸಕ ಭರತ್ ಶೆಟ್ಟಿಯವರ

3 ದಿನಗಳಲ್ಲಿ ಟೋಲ್‍ಗೇಟ್ ತೆರವು ಅಂತಿಮ ಆದೇಶ : ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಭರವಸೆ

ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ನಡೆಯುತ್ತಿರುವ ಹಗಲು ರಾತ್ರಿ ಧರಣಿ ಒಂದು ತಿಂಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಹಾಗೂ ಟೋಲ್ ಗೇಟ್ ತೆರವು ಆದ್ಯಾದೇಶ ಹೊರಟು ಹತ್ತು ದಿನಗಳು ದಾಟಿದರೂ ಟೋಲ್ ಸಂಗ್ರಹ ಸ್ಥಗಿತಗೊಳಿಸದಿರುವ ಕುರಿತು ಚರ್ಚಿಸಲು ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ನಿಯೋಗ ದ.ಕ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿತು. ನಿಯೋಗದ ಆಕ್ಷೇಪ, ಬೇಡಿಕೆಗಳನ್ನು ಆಲಿಸಿದ

ತೋಕೂರು ಗುತ್ತು ವಾರಿಜಾಕ್ಷಿ ಶೆಟ್ಟಿ ನಿಧನ

ಸುರತ್ಕಲ್ : ತೋಕೂರು ಗುತ್ತು ಮನೆತನದ ಹಿರಿಯ ಚೇತನ ವಾರಿಜಾಕ್ಷಿ ಶೆಟ್ಟಿ. (ದಿ. ಬಂಬ್ರಾಣ ಕೆಳಗಿನಬೈಲು ಶಂಕರ ಶೆಟ್ರ ಧರ್ಮಪತ್ನಿ ) ಯವರು ತಮ್ಮ 90 ನೇ ವಯಸ್ಸಿನಲ್ಲಿ ನವಂಬರ್ 20 ರಂದು ಮುಂಜಾನೆ ಸ್ವಗೃಹದಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ. ಮೃತರು ಪುತ್ರರಾದ ಉದ್ಯಮಿ ತೋಕೂರುಗುತ್ತು ಶರತ್ಚಂದ್ರ ಶೆಟ್ಟಿ ಮತ್ತು ರತ್ನಶೇಖರ ಶೆಟ್ಟಿ ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಹೆಜಮಾಡಿ ಟೋಲ್‍ನೊಂದಿಗೆ ವಿಲೀನಗೊಳಿಸಿದ್ರೆ ಉಗ್ರಹೋರಾಟ : ಶೇಖರ್ ಹೆಜಮಾಡಿ ಎಚ್ಚರಿಕೆ

ಪಡುಬಿದ್ರಿ: ಸುರತ್ಕಲ್ ಟೋಲ್ ಪ್ಲಾಜಾದಲ್ಲಿ ಪಡೆಯುತ್ತಿದ್ದ ಟೋಲನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ವಿಲಿನ ಗೊಳಿಸಿದ್ದಲ್ಲಿ ವಿವಿಧ ಸಂಘ ಸಂಸ್ಥೆಗಳ ಮೂಲಕ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂಬುದಾಗಿ ಟೋಲ್ ಹೋರಾಟ ಸಮಿತಿಯ ಪ್ರಮುಖರೂ, ದಲಿತ ಮುಖಂಡರು ಆದ ಶೇಖರ್ ಹೆಜಮಾಡಿ ಎಚ್ಚರಿಸಿದ್ದಾರೆ. ಹೆಜಮಾಡಿ ಟೋಲ್ ಪ್ಲಾಜಾ ನಿರ್ಮಾಣದವರಗೆ ಮಾತ್ರ ಸುರತ್ಕಲ್ ಟೋಲ್ ಎಂಬುದಾಗಿ ತಾತ್ಕಾಲಿಕ ನೆಲೆಯಲ್ಲಿ ನಿರ್ಮಾಣಗೊಂಡಿದ್ದ ಸುರತ್ಕಲ್ ಟೋಲನ್ನು ಇದೀಗ ಸಂಸದರು ಸಹಿತ ಕೆಲ

ಟೋಲ್ ಅಳವಡಿಸಿದವರೇ ಪ್ರತಿಭಟನೆಯಲ್ಲಿ ಭಾಗಿ: ಮಂಗಳೂರಲ್ಲಿ ಶಾಸಕ ಡಾ| ವೈ.ಭರತ್ ಶೆಟ್ಟಿ ವ್ಯಂಗ್ಯ

ಸುರತ್ಕಲ್ ಟೋಲ್ ತೆರವಿಗೆ ಕೇಂದ್ರದಿಂದ ತಾಂತ್ರಿಕ ಅಂಶಗಳು ಪೂರ್ಣಗೊಂಡಿದ್ದು, 15 ದಿನದೊಳಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಅಧಿಕೃತ ನೋಟಿಫೀಕೇಶನ್ ಆಗಲಿದೆ. ಈ ಮೂಲಕ ಶೀಘ್ರದಲ್ಲೇ ಟೋಲ್ ಸಂಗ್ರಹ ಸ್ಥಗಿತಗೊಳ್ಳಲಿದೆ ಎಂದು ಶಾಸಕ ಡಾ| ವೈ.ಭರತ್ ಶೆಟ್ಟಿ ಹೇಳಿದ್ದಾರೆ.ವಾಓ01: ಮಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 60ಕಿ.ಮೀ ವ್ಯಾಪ್ತಿಯೊಳಗೆ ಎರಡು ಟೋಲ್‍ಗಳು ಅಳವಡಿಕೆಗೆ

ಸುರತ್ಕಲ್ ಟೋಲ್ ಗೇಟ್ ಪಾಸ್ಟ್ ಟ್ಯಾಗ್‍ನಲ್ಲಿ ನಗದು ಕಟ್ಟ್ : ಕಾರು ಮಾಲಿಕರಿಂದ ದೂರು

ಸುರತ್ಕಲ್ ಟೋಲ್ ಗೇಟಲ್ಲಿ ವಾಹನ ಪಾಸ್ ಆಗದಿದ್ದರೂ, ಪಾಸ್ಟ್ ಟ್ಯಾಗ್ ಮೂಲಕ ಹಣ ವಸೂಲಿ ನಡೆದ ಬಗ್ಗೆ ಕಾರು ಮಾಲಿಕರು ಪೊಲೀಸ್ ದೂರು ನೀಡಿದ್ದಾರೆ. ಕಾಪು ತಾಲೂಕಿನ ಎಲ್ಲೂರು ನಿವಾಸಿ ಲಕ್ಷ್ಮಣ್ ಎಂಬವರೇ ಟೋಲ್ ಗೇಟ್ ನ ವಂಚನೆಗೆ ಒಳಗಾದವರು, ಇವರು ಎಲ್ಲೂರಿನ ಐಟಿಐ ಉದ್ಯೋಗಿ, ಸೋಮವಾರ ಉಚ್ಚಿಲ ಹೊರತು ಪಡಿಸಿ ಕಾರಿನಲ್ಲಿ ಎಲ್ಲೂ ಪ್ರಯಾಣಿಸಿಲ್ಲ, ಆದರೆ ರಾತ್ರಿ ಏಳರ ಸುಮಾರಿಗೆ ಮೊಬೈಲ್ ಗೆ ಮ್ಯಾಸೇಜ್ ವೊಂದು ಬಂದಿದ್ದು, ಸುರತ್ಕಲ್ ಟೋಲ್ ಗೇಟ್ ನಲ್ಲಿ ಪಾಸ್ಟ್ ಟ್ಯಾಗ್

ಸುರತ್ಕಲ್ ಟೋಲ್ ಗೇಟ್ ರದ್ದು ಬದಲು ವಿಲೀನ! ಹೆದ್ದಾರಿ ಪ್ರಾಧಿಕಾರದ ನಾಟಕೀಯ ಆದೇಶ, ಹೆಜಮಾಡಿಯಲ್ಲಿ ಕಟ್ಟಬೇಕು ಡಬಲ್ ಶುಲ್ಕ

ಮಂಗಳೂರು, : ಸುರತ್ಕಲ್ ಟೋಲ್ ಗೇಟ್ ರದ್ದಾಗಬೇಕು ಎಂದು ಹೋರಾಟ ನಡೆಸಿದ್ದ ಜನಸಾಮಾನ್ಯರಿಗೆ ಮತ್ತೆ ಕುತ್ತಿಗೆ ಹಿಡಿಯುವ ರೀತಿಯ ಆದೇಶವನ್ನು ಹೆದ್ದಾರಿ ಪ್ರಾಧಿಕಾರ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನ.11ರಂದು ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು ನಂತೂರಿನಿಂದ ಸುರತ್ಕಲ್ ವರೆಗಿನ ರಸ್ತೆಯ ಟೋಲ್ ಶುಲ್ಕವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ಹೆಚ್ಚುವರಿಯಾಗಿ ಸಂಗ್ರಹಿಸಲು ಆದೇಶ ನೀಡಿದೆ. ತಲಪಾಡಿಯಿಂದ ಕುಂದಾಪುರದ ವರೆಗಿನ ರಸ್ತೆಯನ್ನು ನವಯುಗ