Home Archive by category ಕರಾವಳಿ (Page 81)

ಮೂಡುಬಿದಿರೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಡಿ.19ಕ್ಕೆ ಜಿಲ್ಲಾಧಿಕಾರಿ ಕಚೇರಿ ಚಲೋ ಹೋರಾಟ

ಮೂಡುಬಿದಿರೆ: ಜಿಲ್ಲೆಯ ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲ ಸೌಕರ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಸಿಪಿಐ(ಎಂ)ವತಿಯಿಂದ ಡಿ. 19ರಂದು  ಬೆಳಿಗ್ಗೆ 10 ಗಂಟೆಗೆ  ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಚಲೋ ಹೋರಾಟ ನಡೆಯಲಿದೆ ಎಂದು ಸಿಪಿಐ(ಎಂ)ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಹೇಳಿದರು. ಅವರು ಮೂಡುಬಿದಿರೆಯಲ್ಲಿ ಸುದ್ದಿಗೋಷ್ಟಿ

ಅಳ್ನಾವರ ದಾಂಡೇಲಿ ರೈಲು ಓಡುವುದು ಯಾವಾಗ?

ದಟ್ಟ ಕಾಡಿನ ನಡುವಿನ ಬ್ರಿಟಿಷರ ಕಾಲದ ಉತ್ತರ ಕನ್ನಡ ಜಿಲ್ಲೆಯ ಅಂಬೇವಾಡಿ ರೈಲು ನಿಲ್ದಾಣದ ಹೆಸರನ್ನು ಅಧಿಕೃತವಾಗಿ ದಾಂಡೇಲಿ ಎಂದು ಬದಲಿಸಲಾಗಿದೆ. ಬ್ರಿಟಿಷರು ಮರದ ದಿಮ್ಮಿಗಳನ್ನು ಸಾಗಿಸಲು ಈ ರೈಲು ಹಾದಿ ನಿರ್ಮಿಸಿದ್ದರು. ಮೀಟರ್ ಗೇಜ್, ಬ್ರಾಡ್ ಗೇಜ್ ಕಂಡರೂ ಇದರಲ್ಲಿ ಜನ ರೈಲು ಓಡಾಟ ಇಲ್ಲ. ಕೆಲ ಕಾಲ ಮಾತ್ರ ಅಳ್ನಾವರ ಅಂಬೇವಾಡಿ ನಡುವೆ ಒಂದು ಪ್ಯಾಸೆಂಜರ್ ರೈಲು ಓಡಿದ್ದಿದೆ. ಮಾಜೀ ಮಂತ್ರಿ ಆರ್. ವಿ. ದೇಶಪಾಂಡೆಯವರು ಈ ನಿಲ್ದಾಣದ ಹೆಸರನ್ನು ಅಂಬೇವಾಡಿಯಿಂದ

ಮಂಗಳೂರು : ಡಿ.17ರಂದು ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

ಮಂಗಳೂರಿನ ಉಜ್ಜೋಡಿಯಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಲಾಸಿಕ್- ಸ್ಮೈಲ್ ಮತ್ತು ಪಿಆರ್‌ಕೆ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರವು ಡಿ.17 ರಂದು ನಡೆಯಲಿದೆ. ಈ ಉಚಿತ ಕಣ್ಣಿನ ತಪಾಸಣಾ ಶಿಬಿರವು ಡಿ.17 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.  18 ವರ್ಷ ಪ್ರಾಯದಿಂದ ಸುಮಾರು 50 ವರ್ಷ ಪ್ರಾಯದವರೆಗಿನವರಿಗೆ ಮಾಡಬಹುದಾದ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾಂಟಾಕ್ಟ್

ಇಂದು ಲೋಕ ಟೀ ಡೇ

ಡಿಸೆಂಬರ್ 15ನ್ನು 2005ರಿಂದ ಜಾಗತಿಕ ಟೀಡೇ ಆಗಿ ಭಾರತ ಸಹಿತ ಹಲವು ದೇಶಗಳು ಆಚರಿಸುತ್ತಿವೆ. ಚಾ ಬೆಳೆಗೆ ಪೆÇ್ರೀತ್ಸಾಹ, ಗ್ರಾಹಕರ ಮತ್ತು ಚಾ ಕಾರ್ಮಿಕರ, ಮುಖ್ಯವಾಗಿ ಎಲೆ ಕೊಯ್ವ ಮಹಿಳೆಯರ ಒಳಿತನ್ನು ಹುಡುಕುವುದು ಈ ದಿನಾಚರಣೆಯ ವಿಶೇಷವಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ವಿಯೆಟ್ನಾಂ, ಇಂಡೋನೇಶಿಯಾ, ಕೆನ್ಯಾ, ಮಲಾವಿ, ಮಲೇಶಿಯಾ, ಉಗಾಂಡಾ, ತಾಂಜಾನಿಯಾ, ಭಾರತ ಇವು ಮುಖ್ಯವಾಗಿ ಚಾ ದಿನ ಆಚರಿಸುವ ದೇಶಗಳಾಗಿವೆ.

ಮೂಡುಬಿದರೆ: ಆಳ್ವಾಸ್ ವಿರಾಸತ್ – ಸಪ್ತ ಮೇಳಗಳನ್ನು ಉದ್ಘಾಟಿಸಿದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ

ಮೂಡುಬಿದಿರೆ : ಲಕ್ಷಾಂತರ ಮಕ್ಕಳನ್ನು ಸತ್ಪ್ರಜೆ ಮಾಡುವ ಆಳ್ವಾಸ್, ವಿರಾಸತ್ ಹಾಗೂ ವಿವಿಧ ಮೇಳಗಳ ಮೂಲಕ ಎಲ್ಲರ ಹೃದಯದ ಕಣ್ಣು ತೆರೆಸುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಭಾರತ್ ಸ್ಕೌಟ್ಸ್-ಗೈಡ್ಸ್ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ. ಜಿ. ಆರ್. ಸಿಂಧ್ಯಾ ಶ್ಲಾಘಿಸಿದರು. ವಿದ್ಯಾಗಿರಿಯಲ್ಲಿ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’೨೯ನೇ ಆಳ್ವಾಸ್ ವಿರಾಸತ್’ ಅಂಗವಾಗಿ ಕೃಷಿಸಿರಿ ಆವರಣದಲ್ಲಿ ಅನ್ವೇಷಣಾತ್ಮಕ ಕೃಷಿಕ,

ಮೂಡುಬಿದಿರೆ: ಆಳ್ವಾಸ್ ವಿರಾಸ್-2023ರ ಮಾಧ್ಯಮ ಕೇಂದ್ರ ಉದ್ಘಾಟನೆ

ಮೂಡುಬಿದಿರೆ : ಡಿ.14.ರಿಂದ 17ರ ವರೆಗೆ ನಡೆಯುವ ‘ಆಳ್ವಾಸ್‌ವಿರಾಸತ್-23’ರ ಮಾಧ್ಯಮ ಕೇಂದ್ರವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ವಿರಾಸತ್ ನ ರೂವಾರಿ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ನಂತರ  ಮಾತನಾಡಿದ ಅವರು  ಸಣ್ಣಮಟ್ಟದಿಂದ ಆರಂಭಗೊಂಡ ಆಳ್ವಾಸ್ ವಿರಾಸತ್ ಇಂದು ಲೋಕ ಪ್ರಸಿದ್ಧವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಂದೇಶವನ್ನು  ಹೊಂದಿದೆ. ವಿರಾಸತ್ ಯಶಸ್ಸಿನಲ್ಲಿ ಮಾಧ್ಯಮದ ಪಾತ್ರ ಮಹತ್ತರವಾದುದು ಎಂದರು. ವನ್ಯಜೀವ ಛಾಯಾಗ್ರಾಹಕ,

ಮೂಲ್ಕಿ: ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಡಾ. ಗಣೇಶ ಅಮೀನ್ ಸಂಕಮಾರ್ ಆಯ್ಕೆ

ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತುಳು ಕನ್ನಡ ಸಾಹಿತಿ ಡಾ ಗಣೇಶ ಅಮೀನ್ ಸಂಕಮಾರ್ ಆಯ್ಕೆಯಾಗಿದ್ದಾರೆ ಎಂದು ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ ಎಂ ಪಿ ಶ್ರೀನಾಥ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದೇ ಡಿಸೆಂಬರ್ 27ರಂದು ಮೂಲ್ಕಿ ಕಾರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ.  ಡಾ.ಗಣೇಶ ಅಮೀನ್ ಸಂಕಮಾರ್ ಅವರು ತುಳು ಕನ್ನಡ ಜಾನಪದ ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದಾರೆ. 33 ವರ್ಷಗಳ ಕಾಲ

ವಿಟ್ಲ: ಪಾಳು ಬಾವಿಗೆ ಬಿದ್ದ ನರಿಯ ರಕ್ಷಣೆ

ವಿಟ್ಲ: ಪುಣಚ ಸಮೀಪದ ತೋರಣಕಟ್ಟೆಯಲ್ಲಿ ಪಾಳು ಬಾವಿಯೊಂದಕ್ಕೆ ನರಿ ಬಿದ್ದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಿರುಪಯುಕ್ತವಾದ ಬಾವಿಯ ಒಳಗೆ ಆಹಾರ ಅರಸಿಕೊಂಡು ಬಂದ ನರಿ ಬಿದ್ದಿದ್ದು, ಅದರ ಕೂಗು ಕೇಳಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ. ಸಹಾಯಕ ವಲಯ ಅರಣ್ಯಾಧಿಕಾರಿ ಸೀತಾರಾಮ ನೇತೃತ್ವದಲ್ಲಿ ಸ್ಥಳೀಯ ನಿವಾಸಿ ವಾಮನ್ ನಾಯಕ್ ಎಂಬರು ಬಾವಿಗೆ ಇಳಿದು ನರಿಯನ್ನು ಗೋಣಿಗೆ

ಕಾಪು : ಡಿ.15ರಂದು ತನಿಯಾ ಮೋಟಾರ್ಸ್ ಸೂಪರ್ ಆಟೋ ಶೋರೂಂ ಉದ್ಘಾಟನೆ

ಮೊಂಟ್ರಾ ಇಲೆಕ್ಟ್ರಿಕ್ ಅಧಿಕೃತ ಡೀಲರ್‌ನ ತನಿಯಾ ಮೋಟಾರ್ಸ್ ಸೂಪರ್ ಆಟೋ ಶೋರೂಂ ಕಾಪುವಿನ ಕೊಪ್ಪಲಂಗಡಿಯ ಸ್ವಸ್ತಿಕ್ ಎನ್‌ಕ್ಲೇವ್‌ನಲ್ಲಿ ಡಿಸೆಂಬರ್ 15ರಂದು ಶುಭಾರಂಭಗೊಳ್ಳಲಿದ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹಾಗೂ ಉತ್ಪಾದನೆ ಹೆಚ್ಚಾಗಿದೆ. ಕಾರು, ಸ್ಕೂಟರ್, ಬೈಕ್ ಹಾಗೂ ತ್ರಿಚಕ್ರ ವಾಹನಗಳ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಿದೆ. ಇದೀಗ ಪ್ರತಿ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದೆ. ಈ ರಿಕ್ಷಾವನ್ನು ಒಂದು ಬಾರಿ ಚಾರ್ಜ್ ಮಾಡಿದರೆ 197 ಕಿಲೋ

ನಾಗ್ಪುರ ಪಂಚಾಯತ್ ಸಮಿತಿ ಚುನಾವಣೆ : ಬಿಜೆಪಿಗೆ ಭಾರೀ ಮುಖಭಂಗ

ಆರೆಸ್ಸೆಸ್ ರಾಷ್ಟ್ರೀಯ ಕಚೇರಿ ಇರುವ ನಾಗಪುರ ವಲಯದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಈ ಜಿಲ್ಲೆಯ ಹದಿಮೂರು ಪಂಚಾಯತು ಸಮಿತಿಗಳಲ್ಲಿ ಒಂಬತ್ತರ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.ಮೂರು ಪಂಚಾಯತು ಸಮಿತಿಗಳು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಸಿಕಿದೆ. ಒಂದರಲ್ಲಿ ಶಿವಸೇನೆಯ ಭಿನ್ನಮತೀಯ ಬಣವು ಅಧ್ಯಕ್ಷತೆಯನ್ನು ಗೆದ್ದಿದೆ. ಬಿಜೆಪಿ ಒಂದರಲ್ಲೂ ಅಧ್ಯಕ್ಷ ಸ್ಥಾನ ಗೆಲ್ಲಲು ವಿಫಲವಾಗಿದೆ. ಮೈತ್ರಿ ಕಾರಣಕ್ಕೆ ಎರಡು ಕಡೆ