Home Archive by category ರಾಷ್ಟ್ರೀಯ (Page 16)

Kantara 50 ದಿನ ಪೂರೈಸಿದ ‘ಕಾಂತಾರ’ : ಶೀಘ್ರದಲ್ಲಿ ಒಟಿಟಿಯಲ್ಲಿ ರಿಲೀಸ್

‘ಕಾಂತಾರ’ ಕನ್ನಡದಲ್ಲಿ ಬಿಡುಗಡೆಯಾಗಿ 50 ದಿನ ಪೂರ್ಣಗೊಂಡಿದೆ​. ‘ಕಾಂತಾರ’ ಚಿತ್ರದ ಒಟ್ಟಾರೆ ಮೇಕಿಂಗ್, ದಕ್ಷಿಣ ಕನ್ನಡ ಸೊಗಡು, ಕಂಬಳ ಮತ್ತು ಪ್ರಮುಖವಾಗಿ ಭೂತ ಕೋಲ ವಿಷಯ ಜನರಿಗೆ ಇಷ್ಟವಾಗಿದೆ. ಜೊತೆಗೆ ನಿರ್ದೇಶಕ ರಿಷಬ್​ ಶೆಟ್ಟಿ, ನಟಿ ಸಪ್ತಮಿ ಗೌಡ ಅಭಿನಯವನ್ನು ಅಭಿಮಾನಿಗಳು ಮೆಚ್ಚಿಕೊಂಡರು. ‘ಕಾಂತಾರ’ ಚಿತ್ರ ಕನ್ನಡದಲ್ಲಿ ರಿಲೀಸ್ ಆದ ಬಳಿಕ ಪರಭಾಷೆಯಲ್ಲಿ

Indira Gandhi Birth Anniversary : ಇಂದುಇಂದಿರಾ ಗಾಂಧಿಯವರ 105ನೇ ಜನ್ಮದಿನ.

ಇಂದು ಭಾರತದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ 105ನೇ ಜನ್ಮದಿನ. ಇಂದಿರಾ ಗಾಂಧಿಯವರು 1917ರಲ್ಲಿ ನವೆಂಬರ್ 19ರಂದು ಅಲಹಾಬಾದ್​​ನಲ್ಲಿ ಜನಿಸಿದರು. ಇಂದಿರಾ ಗಾಂಧಿ (Indira Gandhi) ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮಗಳು. ಅವರ ತಾಯಿ ಕಮಲಾ ನೆಹರು ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕಿಯಾಗಿದ್ದರು. ಇಂದಿರಾ ಗಾಂಧಿಯವರು ತಮ್ಮ ತಂದೆ ಜವಾಹರಲಾಲ್ ನೆಹರು

ತೆಲುಗು ನಟ ಮಹೇಶ್ ಬಾಬು ತಂದೆ ನಿಧನ

ಅನಾರೋಗ್ಯದ ಹಿನ್ನೆಲೆಯಲ್ಲಿ ಕೃಷ್ಣ ಅವರನ್ನು ಭಾನುವಾರ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.ಅವರಿಗೆ 79 ವರ್ಷ ವಯಸ್ಸಾಗಿತ್ತು.ತೆಲುಗು ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಕೃಷ್ಣ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯ ಬಾರಿಗೆ 2016 ರಲ್ಲಿ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡರು. ಕೃಷ್ಣ ಅವರ

ಮಿಸೆಸ್ ವರ್ಲ್ಡ್ ವೈಡ್ ಗ್ಲೋರಿ ಬ್ಯೂಟಿ ಕೀರಿಟ ವಿಜೇತೆ ಶ್ವೇತಾ ಮೌರ್ಯ

ಬೆಂಗಳೂರು ಮೂಲದ ಮೋಡೆಲ್ ಶ್ವೇತಾ ಮೌರ್ಯ ಅವರು ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಮಿಸೆಸ್ ವರ್ಲ್ಡ್ ವೈಡ್ 2022 ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ವರ್ಲ್ಡ್ ವೈಡ್ ಗ್ಲೋರಿ ಬ್ಯೂಟಿ ಕಿರೀಟವನ್ನು ಗೆದ್ದುಕೊಂಡಿದ್ದಾರೆ. ಸುಮಾರು 37ದೇಶಗಳ ಸ್ಪರ್ಧಿಗಳು ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶ್ವೇತಾ ಅವರು ಕರ್ನಾಟಕದ ಹಾಗೂ ಭಾರತದ ಅನೇಕ ಜನಪರ ಕಾಳಜಿ ಹಾಗೂ ಪರಿಸರ ಕಾಳಜಿಯ ಮ್ಯಾರಥಾನ್‌ಗಳ ಬ್ರಾಂಡ್ ಅಂಬಾಸಿಡರ್ ಆಗಿ

ಸೌದಿ ಅರೇಬಿಯಾದಲ್ಲಿ ಟೀಂ ಬಿ ಹ್ಯೂಮನ್ 2ನೇ ಘಟಕ ಆರಂಭ

ಸೌದಿ ಅರೇಬಿಯಾದಲ್ಲಿ ಟೀಂ ಬಿ ಹ್ಯೂಮನ್ ತನ್ನ 2ನೇ ಘಟಕವನ್ನು ರಚಿಸಿತು. ಟೀಂ ಬಿ ಹ್ಯೂಮನ್ ಈ ಹಿಂದೆ ಕೇವಲ ಒಂದೇ ಘಟಕವನ್ನು ಝುಬೈಲ್ ನಲ್ಲಿ ಹೊಂದಿದ್ದು, 2ನೇ ಕೊರೊನಾ ಅಲೆಯ ಮೊದಲು ರಿಯಾದ್, ಬುರೈದಾ, ಜೆಡ್ಡಾ ಮತ್ತು ದಮ್ಮಾಮ್ ನಲ್ಲಿ ತನ್ನ ಹೊಸ ಘಟಕಗಳನ್ನು ರಚಿಸುವ ಯೋಜನೆಯನ್ನು ಹಮ್ಮಿಕೊಂಡಿತ್ತು. ಈಗ ಸೌದಿ ಅರೇಬಿಯಾದಲ್ಲಿ ಜುಬೈಲ್ ಮತ್ತು ಗಾಸಿಮ್ ಘಟಕಗಳನ್ನು ರಚಿಸಲಾಗಿದ್ದು, ಉಳಿದ ಘಟಕಗಳನ್ನು ಸಹ ಆದಷ್ಟು ಬೇಗ ರಚಿಸಲಾಗುವುದು. ಸ್ಥಳೀಯ ಉದ್ಯಮಿಗಳು,

ಅರಬರ ನಾಡಿನಲ್ಲಿ ಅದ್ಧೂರಿಯ ಕರ್ನಾಟಕ ರಾಜ್ಯೋತ್ಸವ

ಅಬುಧಾಬಿ : ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಶ್ರೀಮಂತ ಇತಿಹಾಸ ಇರುವ ಅಬುಧಾಬಿಯ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರ್ನಾಟಕ ಸಂಘವು ಇದೀಗ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ರೂಪುರೇಷೆಗಳನ್ನು ಹಾಕಿಕೊಂಡಿದ್ದು ಕಾರ್ಯಕ್ರಮವು ಇದೆ ನವೆಂಬರ್ ತಿಂಗಳ 6ನೇ ತಾರೀಖಿನಂದು ಅಪರಾಹ್ನ 3:30 ಘಂಟೆಗೆ ಸರಿಯಾಗಿ ಅಬುಧಾಬಿಯ ಇಂಡಿಯನ್ ಸೋಶಿಯಲ್ ಆಂಡ್ ಕಲ್ಚರಲ್ ಸೆಂಟರ್ ನಲ್ಲಿ ಜರುಗಲಿದೆ. ಮೂರು ಬಾರಿ ಯಶಸ್ವಿಯಾಗಿ ವಿಶ್ವ ಕನ್ನಡ

ಪ್ರಿಯತಮೆಯಿಂದ ಪಾನೀಯದಲ್ಲಿ ವಿಷ ಬೆರೆಸಿ ಪ್ರಿಯತಮನ ಹತ್ಯೆ

ತಿರುವನಂತಪುರಂ: ಬ್ರೇಕಪ್ ಮಾಡಿಕೊಳ್ಳುವಂತೆ ಹೇಳಿದರೂ ಆತ ಬ್ರೇಕಪ್ ಮಾಡಿಕೊಳ್ಳಲಿಲ್ಲ. ನನ್ನ ಜಾತಕದಲ್ಲಿ ಮೊದಲ ಗಂಡ ಸಾಯುತ್ತಾನೆ ಎಂದು ಬರೆದಿದೆ ಎಂದು ಸುಳ್ಳು ಹೇಳಿ ಅವನ ಮನಸ್ಸು ಬದಲಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಆಕೆ ತೆಗೆದುಕೊಂಡ ಕೊನೆಯ ದಾರಿ ಮಾತ್ರ ಅತ್ಯಂತ ಕಠೋರವಾಗಿತ್ತು. ಕೇರಳದ ತಿರುವನಂತಪುರಂ ಮೂಲದ ಶರೋನ್ ರಾಜ್ ಎಂಬ ಯುವಕನ ನಿಗೂಢ ಸಾವು ಹೊಸ ತಿರುವು ಪಡೆದುಕೊಂಡಿದ್ದು, ಪ್ರಿಯತಮೆಯೇ ಆತನನ್ನು ಪಾನೀಯದಲ್ಲಿ ವಿಷ ಬೆರೆಸಿ ಹತ್ಯೆ

ವರಾಹ ರೂಪಂ ಹಾಡಿಗೆ ತಡೆಯಾಜ್ಞೆ

ಬೆಂಗಳೂರು: ಕಾಂತಾರ ಸಿನಿಮಾ ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್‌ ಆಫೀಸ್‌ನಲ್ಲಿ ಸೌಂಡ್ ಮಾಡುತ್ತಿದೆ. ಈ ನಡುವೆ ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡು ವಿವಾದ ಆಗಿತ್ತು. ಇದೀಗ ಈ ಹಾಡು ಬಳಸದಂತೆ ಕೋಯಿಕ್ಕೋಡ್ ಕೋರ್ಟ್ ಸೂಚನೆ ನೀಡಿರೋದು ಚಿತ್ರತಂಡಕ್ಕೆ ಬಿಗ್ ಶಾಕ್ ಕೊಟ್ಟಿದೆ. ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ ಇದನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪವನ್ನು

ಕಾಂತಾರ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ ಮುಂದಾದ ಕೇರಳ ಸಂಸ್ಥೆ..!

ಕೊಚ್ಚಿ : ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಬಗ್ಗೆ ಕಾನೂನು ಹೋರಾಟಕ್ಕೆ ಕೇರಳದ ತೈಕುಡಂ ಬ್ರಿಗೇಡ್ ಸಂಸ್ಥೆ ಮುಂದಾಗಿದೆ. ಮಲಯಾಳಂ ‘ನವರಸಂ’ ಹಾಡು ಹೋಲುವಂತೆ ‘ವರಾಹ ರೂಪಂ’ ಹಾಡಿನ ಸಾಮ್ಯತೆ ಇದೆ. 5 ವರ್ಷಗಳ ಹಿಂದೆ ‘ನವರಸಂ’ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಅದರ ಟ್ಯೂನ್ ಕಾಪಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ಕಾಪಿ ರೈಟ್ ಉಲ್ಲಂಘನೆಯಾಗಿದ್ದು, ‘ಕಾಂತಾರ’ ಚಿತ್ರತಂಡದ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ತೈಕುಡಂ ಬ್ರಿಗೇಡ್ ಸಂಸ್ಥೆ

ಇಂಗ್ಲೆಂಡ್: ಬ್ರಿಟನ್’ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್: ಬ್ರಿಟನ್’ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಮಾಜಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಅವರಿಗೆ 193 ಸಂಸದರ ಬೆಂಬಲ ಲಭಿಸಿದ್ದು, ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರಿಗೆ 26 ಸಂಸದರ ಬೆಂಬಲ ದೊರೆತಿದ್ದವು. ಬ್ರಿಟನ್’ನಲ್ಲಿ ತಲೆದೋರಿದ್ದ ರಾಜಕೀಯ ಬಿಕ್ಕಟ್ಟಿನ ಮಧ್ಯೆ 45 ದಿನಗಳ ಹಿಂದೆ ಪ್ರಧಾನಿ ಹುದ್ದೆಗೇರಿದ ಲಿಝ್ ಟ್ರಸ್ ಅವರು ದಿಢೀರ್ ಬೆಳವಣಿಗೆಯಲ್ಲಿ ಪ್ರಧಾನಿ ಹುದ್ದೆಗೆ ಕಳೆದ ವಾರ