Home Archive by category ರಾಷ್ಟ್ರೀಯ (Page 15)

ಮಧ್ಯಪ್ರದೇಶದ ಆಶಾ ಮಾಲ್ವಿಯ ಯುವತಿಯಿಂದ 4000 ಕಿಲೋಮೀಟರ್ ಸೈಕಲ್ ರ್‍ಯಾಲಿ

ಮಧ್ಯಪ್ರದೇಶದ ಆಶಾ ಮಾಲ್ವಿಯ ಎಂಬ ಯುವತಿ ಸೈಕಲ್‍ನಲ್ಲಿ ದೇಶದ 28 ರಾಜ್ಯಗಳನ್ನು 20 ಸಾವಿರ ಪ್ರಯಾಣ ಮಾಡಲು ಉದ್ದೇಶಿಸಿದ್ದು, ಯುವಕ, ಯುವತಿಯರಿಗೆ ಹಾಗೂ ಮಹಿಳೆಯರಿಗೆ ಭಾರತದಲ್ಲಿಯೂ ಹೆಣ್ಣುಮಕ್ಕಳು ಸುರಕ್ಷಿತವಾಗಿದ್ದಾರೆ ಎಂದೂ ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಸೈಕಲ್ ರ್‍ಯಾಲಿ ಯನ್ನು ಹಮ್ಮಿಕೊಂಡಿದ್ದಾರೆ. ಈಗಾಗಲೇ ಸುಮಾರು 4000 ಕಿಲೋಮೀಟರ್

ಹಾಡು ಹಗಲೆ ಶಾಲಾ ಬಾಲಕಿಯ ಮೇಲೆ ಆ್ಯಸಿಡ್ ದಾಳಿ

ನವದೆಹಲಿ: ಬೈಕ್ ನಲ್ಲಿ ಬಂದ ಇಬ್ಬರು ಯುವಕರು 17 ವರ್ಷದ ಬಾಲಕಿಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ ಆತಂಕಕಾರಿ ಘಟನೆ ನೈಋತ್ಯ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದಿದೆ. ಆ್ಯಸಿಡ್ ದಾಳಿಯ ಪರಿಣಾಮ ಬಾಲಕಿಯ ಮುಖ ಹಾಗೂ ಕಣ್ಣಿಗೆ ಗಂಭೀರವಾದ ಗಾಯಗಳಾಗಿವೆ ಎಂದು ಬಾಲಕಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರಸ್ತೆ ಬದಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿದ್ದು, ಈ

ನಾಳೆ ಮಧ್ಯರಾತ್ರಿ ಉಲ್ಕಾಪಾತ; ಬರಿಗಣ್ಣಿನಲ್ಲಿಯೇ ನೋಡಬಹುದು ಎಂದ ತಜ್ಞರು

ದೇಶದ ಜನರು ಡಿ. 13ರ ಮಧ್ಯರಾತ್ರಿ ಮತ್ತು ಡಿ. 14ರ ಮುಂಜಾನೆ ಆಕಾಶದಲ್ಲಿ ಸ್ಪಷ್ಟವಾಗಿ ಉಲ್ಕಾಪಾತ ನೋಡುಬಹುದಾಗಿದೆ. ಡಿ. 13ರ ಮಧ್ಯರಾತ್ರಿ 2 ಗಂಟೆಯಿಂದ 3 ಗಂಟೆ ಸಮಯಕ್ಕೆ ಉಲ್ಕಾಪಾತ ತನ್ನ ಉತ್ತುಂಗಕ್ಕೆ ತಲುಪಲಿದೆ. ಇದನ್ನು ನೋಡಲು ದೂರದರ್ಶಕದ ಆವಶ್ಯಕತೆ ಇಲ್ಲ. ಬರಿ ಕಣ್ಣಿನಿಂದ ಇದನ್ನು ವೀಕ್ಷಿಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ವರ್ಷ ಡಿ. 13ರ ಮಧ್ಯರಾತ್ರಿ 100 ಕ್ಕೂ ಹೆಚ್ಚು ಉಲ್ಕಾಪಾತಗಳು ಭೂಮಿಯ ಸಮೀಪ ಬರಲಿವೆ. ಮೋಡವಿಲ್ಲದೆ, ವಾತಾವರಣ

ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ : ಡಿ.14 ಎರಡು ರಾಜ್ಯದ ಮುಖ್ಯಮಂತ್ರಿ ಗಳ ಬೇಟಿಯಾಗಲಿರುವ ಗೃಹ ಸಚಿವ ಅಮಿತ್ ಶಾ

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದವನ್ನು ಶಮನಗೊಳಿಸಲು ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್ 14 ರಂದು ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ ಎಂದು ಎನ್‍ಸಿಪಿ ನಾಯಕ ಅಮೋಲ್ ಕೋಲ್ಹೆ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸಂಸದರ ನಿಯೋಗದೊಂದಿಗೆ ಶಾ ಅವರನ್ನು ಭೇಟಿ ಮಾಡಿದ ನಂತರ ಶಿರೂರಿನ ಲೋಕಸಭಾ ಸದಸ್ಯ ಕೋಲ್ಹೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರ

ಡಿಸೆಂಬರ್ 1 ರಿಂದ ಆರಂಭವಾಗಲಿದೆ ಡಿಜಿಟಲ್ ರೂಪಾಯಿ ವಹಿವಾಟು | ಏನಿದು ಡಿಜಿಟಲ್ ರೂಪಾಯಿ?

ಡಿಜಿಟಲ್‌ ರೂಪಾಯಿ ಕುರಿತಂತೆ RBI ಗವರ್ನರ್ ಶಕ್ತಿಕಾಂತ ದಾಸ್, ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನೆರಡು ದಿನಗಳ ನಂತರ ಸಾಮಾನ್ಯ ಗ್ರಾಹಕರಿಗೆ ಇ–ರೂಪಾಯಿಯಲ್ಲಿ ವಹಿವಾಟು ಸೌಲಭ್ಯವನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಿಲ್ಲರೆ ಮಟ್ಟದಲ್ಲಿ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಡಿಸೆಂಬರ್ 1 ರಿಂದ ರಿಟೇಲ್ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಗಾಗಿ ಪ್ರಾಯೋಗಿಕವಾಗಿ

ಕೊಲಂಬೊ : ಭಾರತೀಯ ಮೀನುಗಾರನ್ನುಬಂಧಿಸಿದ ಶ್ರೀಲಂಕಾ ನೌಕಾಪಡೆ

ಶ್ರೀಲಂಕಾದ ನೌಕಾಪಡೆಯು 24 ಮಂದಿ ಭಾರತೀಯ ಮೀನುಗಾರರನ್ನು ಸೋಮವಾರ ಸಂಜೆ ಉತ್ತರ ಜಾಫ್ನಾ ಪರ್ಯಾಯ ದ್ವೀಪದ ಕರೈನಗರದ ಕರಾವಳಿಯಲ್ಲಿ ಮೀನುಗಾರರನ್ನು ಬಂಧಿಸಿದೆ. ಅಲ್ಲದೆ ಐದು ಟ್ರಾಲರ್‌ಗಳನ್ನೂ ಅವರಿಂದ ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ನೌಕಾಪಡೆಯ ಅಧಿಕಾರಿಗಳು, ನೌಕಾಪಡೆ ಮತ್ತು ಶ್ರೀಲಂಕಾ ಕರಾವಳಿ ಕಾವಲು ಪಡೆಯು ಜಂಟಿ ಕಾರ್ಯಾಚರಣೆ ನಡೆಸಿ ಭಾರೀಯ ಮೀನುಗಾರರನ್ನು ಬಂಧಿಸಿದೆ. ಬಂಧಿತರನ್ನು ಕಂಕಸಂತುರೈ ಬಂದರಿಗೆ ಕರೆ

ಕಾಂತಾರ ಸಿನಿಮಾ ತಂಡಕ್ಕೆ ಕೋರ್ಟಿನಲ್ಲಿ ಗೆಲುವು ; ತೈಕ್ಕುಡಂ ತಕರಾರು ಅರ್ಜಿ ವಜಾ

ಕಾಂತಾರ ಸಿನಿಮಾದ ವರಾಹರೂಪಂ ಹಾಡಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಕೇರಳದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ವರಾಹಂ ರೂಪಂ ಹಾಡು ಬಳಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದ ಕೋಜಿಕ್ಕೋಡ್ ನ್ಯಾಯಾಲಯ ವಿವಾದದ ಬಗ್ಗೆ ಅಂತಿಮ ಆದೇಶ ಹೊರಡಿಸಿದ್ದು, ತೈಕ್ಕುಡಂ ಬ್ರಿಡ್ಜ್ ಹಾಕಿದ್ದ ಅರ್ಜಿಯನ್ನೇ ವಜಾ ಮಾಡಿದೆ. ಕಾಂತಾರ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿದ ಬೆನ್ನಲ್ಲೇ ತೈಕ್ಕುಡಂ ಬ್ರಿಡ್ಜ್ ತಂಡದವರು ವರಾಹಂ ರೂಪಂ ಹಾಡಿನ ಬಗ್ಗೆ

500 KG ಗಾಂಜಾ ಇಲಿ ತಿಂದಿದೆ!’ ವಿಚಿತ್ರ ಹೇಳಿಕೆ ನೀಡಿದ ಯುಪಿ ಪೊಲೀಸರು

ಶೇರ್‌ಗಡ್‌ ಮತ್ತು ಹೈವೇ ಪೊಲೀಸ್ ಠಾಣೆಯ ಗೋದಾಮುಗಳಲ್ಲಿ ವಶಕ್ಕೆ ಪಡೆದು ಇರಿಸಿದ್ದ 500 ಕೆಜಿಗೂ ಹೆಚ್ಚು ಗಾಂಜಾವನ್ನು ಇಲಿಗಳು ತಿಂದಿವೆ ಎಂದು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್-1985 (ಎನ್‌ಡಿಪಿಎಸ್) ಅಡಿಯಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಉತ್ತರ ಪ್ರದೇಶದ ಮಥುರಾ ಪೊಲೀಸರು ವರದಿ ಸಲ್ಲಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಿಸಲಾದ ಪ್ರಕರಣದಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಒದಗಿಸುವಂತೆ ಮಥುರಾ

ಶಾಲೆಯಲ್ಲಿ ಇನ್ನು ಮುಂದೆ ಸಂವಿಧಾನ ದಿನಾಚರಣೆ

.ಪ್ರತಿ ವರ್ಷ ನವೆಂಬರ್ 26 ಈ ದಿನವನ್ನು ಭಾರತ ಸಂವಿಧಾನವು ಭಾರತದ ಸಂವಿಧಾನ ಸಭೆಯಲ್ಲಿ ಅಂಗೀಕರಿಸಲ್ಪಟ್ಟ ದಿನವಾದ 26ನೇ ನವೆಂಬರ್ 1949ರ ಸವಿನೆನಪಿಗಾಗಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಭಾರತ ಸರ್ಕಾರದ, ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪತ್ರದಲ್ಲಿ ಸೂಚಿಸಿರುವಂತೆ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು ಮತ್ತು ತತ್ವಗಳ ಅರಿವನ್ನು ಮೂಡಿಸುವಂತಹ Know Your Constitution ಕಾರ್ಯಕ್ರಮವನ್ನು ಶಾಲಾ

ಇಂದಿನ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ರದ್ದು

ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟವು ಕೇಂದ್ರ ಸರ್ಕಾರದ ಸಂಧಾನದ ಬಳಿಕ ನವೆಂಬರ್ 19ರ ಇಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ಹಿಂತೆಗೆದುಕೊಂಡಿದೆ. ಉದ್ಯೋಗ ಕಡಿತ, ಏಕಪಕ್ಷೀಯ ವರ್ಗಾವಣೆ, ಹೊರಗುತ್ತಿಗೆ, ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮತ್ತು ಬ್ಯಾಂಕಿಂಗ್ ಸಂಘಟನೆಗಳ ಪದಾಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಸೆಂಟ್ರಲ್ ಬ್ಯಾಂಕ್ ಮುಂತಾದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಸಿಬ್ಬಂದಿ