Home Archive by category Fresh News (Page 592)

ಕೇರಳಕ್ಕಿಂತ ಕಡಿಮೆ ದರದಲ್ಲಿ ಇಂಧನ ಸಿಗುತ್ತಿದೆ ಎಂಬ ಪ್ಲೆಕ್ಸ್ : ಕೇರಳದಲ್ಲಿ ಭಾರೀ ಪ್ರತಿಭಟನೆ

ಮಂಜೇಶ್ವರ: ಗಡಿಪ್ರದೇಶವಾದ ಕರ್ನಾಟಕ ಪೆಟ್ರೋಲ್ ಪಂಪ್ ಎದುರು ಹಾಕಿರುವ ಪ್ಲೆಕ್ಸ್ ಬೋರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೇರಳಕ್ಕಿಂತ 8 ರೂಪಾಯಿ ಕಡಿಮೆ ದರದಲ್ಲಿ ಇಂಧನ ಸಿಗುತ್ತದೆ ಎಂಬುದಾಗಿ ಫಲಕ ಹಾಕಿರುವುದು ಇದೀಗ ವೈರಲಾಗುತ್ತಿದೆ. ಕೇರಳಕ್ಕೆ ಹೋಲಿಸಿದರೆ ಕರ್ನಾಟಕದ ಡೀಸೆಲ್ ದರ 8 ರೂ. ಹಾಗೂ ಪೆಟ್ರೋಲ್ 5 ರೂಪಾಯಿ ಕಡಿಮೆಯಾಗಿದೆ. ಕೇರಳ

ಫೆ. 11 ಮತ್ತು 12ರಂದು ದ.ಕ. ಮತ್ತು ಉಡುಪಿ ಜಿಲ್ಲಾ ಪುರುಷ, ಮಹಿಳೆಯರ ಪವರ್‍ ಲಿಫ್ಟಿಂಗ್ ಸ್ಪರ್ಧೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪುರುಷರ ಮತ್ತು ಮಹಿಳೆಯರ ಪವರ್ ಲಿಫ್ಟಿಂಗ್ ಸ್ಪರ್ಧೆಯು ಫೆಬ್ರವರಿ 11 ಮತ್ತು 12ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಮಿನಿ ಪುರಭವನದಲ್ಲಿ ಜರುಗಲಿದೆ ಎಂದು ದ.ಕ.ಜಿಲ್ಲಾ ಪವರ್ ಲಿಫ್ಟಿಂಗ್ ಎಸೋಸಿಯೇಶನ್ ಕಾರ್ಯದರ್ಶಿ ಮಧುಚಂದ್ರ ತಿಳಿಸಿದರು. ಅವರು ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಂಗಳೂರು ಮಹಾನಗರಪಾಲಿಕೆ ಸಹಯೋಗದೊಂದಿಗೆ ಮೇಯರ್ ಕಪ್ ಪ್ರಶಸ್ತಿ ಸ್ಪರ್ಧೆ ಮಂಗಳೂರು ಬಾಲಾಂಜನೇಯ

ನವಮಂಗಳೂರು ಬಂದರಿಗೆ ಅಗಮಿಸಿದ 5ನೇ ಹಡಗು ‘ಎಂಎಸ್ ನಾಟಿಕಾ’ : MS NAUTICA

ನವ ಮಂಗಳೂರು ಬಂದರಿಗೆ 5ನೇ ಪ್ರಯಾಣಿಕರ ಹಡಗು `ಎಂಎಸ್ ನಾಟಿಕಾ’ ಮಂಗಳವಾರ ಬೆಳಗ್ಗೆ ಆಗಮಿಸಿತು. 550 ಪ್ರಯಾಣಿಕರು ಹಾಗೂ 400 ಸಿಬ್ಬಂದಿಯನ್ನು ಒಳಗೊಂಡ ಹಡಗು ಬರ್ತ್ ಸಂಖ್ಯೆ 4ರಲ್ಲಿ ನಿಂತಿತು. ಈ ಹಡಗಿನ ಒಟ್ಟು ಉದ್ದ 180.5 ಮೀಟರ್. ಇದು 30,277 ಟನ್ ಭಾರವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಈ ಹಡಗು ಮಸ್ಕತ್‍ನಿಂದ ಮಾಲ್ಡಿವ್ಸ್ ಮೂಲಕ ಭಾರತಕ್ಕೆ ಆಗಮಿಸಿದೆ. ಈ ಹಡಗು ಹಿಂದೆ ಮುಂಬೈ ಹಾಗೂ ಮುರ್ಮುಗೋವಾ ಬಂದರಿನಲ್ಲಿ ನಿಂತಿತ್ತು. ಈ ಹಡಗಿನಲ್ಲಿ

ಸಹ್ಯಾದ್ರಿಯಲ್ಲಿ ಔರಾ 2023 – ಫ್ರೆಶರ್ಸ್ ಡೇ ಆಚರಿಸಲಾಯಿತು

ಔರಾ 2023 – ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಇಂಜಿನಿಯರಿಂಗ್ ಬ್ಯಾಚ್ 2022ರ ಫ್ರೆಶರ್ಸ್ ಡೇ ಅನ್ನು ಫೆಬ್ರವರಿ 7, 2023 ರಂದು ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಗ್ಲೋಬಲ್ ಆರ್‌ಎಂಜಿ ಮುಖ್ಯಸ್ಥರಾದ ಶ್ರೀ ಚಕ್ರವರ್ತಿ ಇ.ಎಸ್. ಹಾಗೂ ಗೌರವ ಅತಿಥಿಗಳಾಗಿ ಶ್ರೀ ಎನ್. ಶಶಿಕುಮಾರ್ IPS, DIGP ಮತ್ತು ಪೊಲೀಸ್ ಆಯುಕ್ತರು, ಮಂಗಳೂರು ಇವರುಗಳು ಭಾಗವಹಿಸಿದರು.

ಶ್ರೀ ಉಮಾಮಹೇಶ್ವರ ದೇವಸ್ಥಾನ : ಸಚಿವ ವಿ. ಸುನೀಲ್ ಕುಮಾರ್ ಅವರಿಂದ “ಅತಿರುದ್ರ ಮಹಾಯಾಗ”ದ ತಯಾರಿಗಳ ಪರಿಶೀಲನೆ

ಮಣಿಪಾಲ ಸರಳೆಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ಲೋಕಕಲ್ಯಾಣಕ್ಕಾಗಿ ನಡೆಯಲಿರುವ “ಅತಿರುದ್ರ ಮಹಾಯಾಗ” ಪ್ರಯುಕ್ತ ದೇವಸ್ಥಾನದಲ್ಲಿ ಹಲವಾರು ಕಾರ್ಯಕ್ರಮಗಳೊಂದಿಗೆ ಅತಿರುದ್ರ ಮಹಾಯಾಗಕ್ಕೆ ಸಾಕಷ್ಟು ತಯಾರಿಗಳು ಬಿಡುವಿಲ್ಲದೆ ನಡೆಯುತ್ತಿವೆ. ಈಗಾಗಲೇ ಉಡುಪಿ ತಾಲೂಕು ಮಟ್ಟದ ಪುಟಾಣಿಗಳ ಚಿತ್ರಕಲಾ ಪ್ರತಿಭೆಯನ್ನು ಗುರುತಿಸಲು “ಶಿವ ಚಿತ್ತಾರ”

ಫೆ. 12, “ಶಿವೋತ್ಸವ ಬಾಲಶಿವ” ಎಂಬ ವೇಷಭೂಷಣ ಸ್ಪರ್ಧೆ

ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್, ಶಿವಪಾಡಿ ಮತ್ತು ಅತಿರುದ್ರ ಮಹಾಯಾಗ ಸಮಿತಿ ವತಿಯಿಂದ ಶಿವಪಾಡಿಯಲ್ಲಿ ಶಿವೋತ್ಸವ. ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪುಟಾಣಿಗಳಿಗಾಗಿ “ಶಿವೋತ್ಸವ ಬಾಲಶಿವ” ಎಂಬ ವೇಷಭೂಷಣ ಸ್ಪರ್ಧೆಯನ್ನು ಫೆಬ್ರವರಿ 12, 2023 ರ ಭಾನುವಾರದಂದು ಮಣಿಪಾಲದ ಸರಳೇಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ

‘ಒಂದೊಳ್ಳೆ ಲವ್‍ಸ್ಟೋರಿ’ ಕನ್ನಡ ಸಿನಿಮಾ ಫೆ.17ರಂದು ಬಿಡುಗಡೆ

ಪಿನಕಿನ್ ಸಿನಿಮಾಸ್ ಬ್ಯಾನರ್‍ನಡಿ ನಿರ್ಮಿಸಿದ ಒಂದೊಳ್ಳೆ ಲವ್‍ಸ್ಟೋರಿ ಕನ್ನಡ ಸಿನಿಮಾ ಫೆ.17ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಾಯಕ ಅಶ್ವಿನ್ ಹೇಳಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಿಗ್‍ಬಾಸ್ ಖ್ಯಾತಿಯ ಧನುಶ್ರೀ ನಾಯಕಿಯಾಗಿದ್ದು, ನಿರಂಜನ್ ಬಾಬು, ಕೈಲಾಸ್‍ಪಾಲ್, ನಿಶಾ ಹೆಗಡೆ, ಬಿಂದೂಜ, ಕೆಎಸ್‍ಜಿ ವೆಂಕಟೇಶ್, ರೂಪಶ್ರೀ ವರ್ಕಾಡಿ, ಈ

ಬೆಂಗ್ರೆ ಫೆ .12ರಂದು ಸರ್ವೇ ನಂಬರ್ ಸಹಿತ ಹಕ್ಕುಪತ್ರ ವಿತರಣೆ

ಸರ್ವೇ ನಂಬರ್ ಹಗೂ ಖಾತಾ ನೀಡಬೇಕು ಎನ್ನುವ ಬೆಂಗ್ರೆ ಗ್ರಾಮದ ಸಾರ್ವಜನಿಕರ ಬಹುಕಲಾದ ಬೇಡಿಕೆಯನ್ನು ಶಾಸಕರಾದ ವೇದವ್ಯಾಸ ಕಾಮತ್ ಅವರು ಈಡೇರಿಸಿದ್ದು, ಫೆ.12ರಂದು ಸಂಜೆ 5 ಗಂಟೆಗೆ ಬೆಂಗ್ರೆ ಫೆರಿ ಪಾಯಿಂಟ್ ಬಳಿಯ ಮಹಾಜನ ಸಂಘದ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ಮನೆಯವರಿಗೆ ಸರ್ವೇ ನಂಬರ್ ಸಹಿತವಾದ ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ಕಾರ್ಪೋರೇಟರ್ ಸುನೀತಾ ತಿಳಿಸಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ

ವೀರ ರಾಣಿ ಅಬ್ಬಕ್ಕ ಉತ್ಸವಕ್ಕೆ ಸರ್ಕಾರದಿಂದ ಅನುದಾನ ಕಡಿತ : ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ : ಮಮತಾ ಗಟ್ಟಿ

ಪ್ರತೀ ವರ್ಷ 50 ಲಕ್ಷ ರೂ. ಅನುದಾನ ಮೀಸಲಿಟ್ಟು ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಉತ್ಸವ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು ಕರಾವಳಿಯವರೇ ಆಗಿದ್ದರೂ ಕೇವಲ 10 ಲಕ್ಷ ರೂ. ಮಾತ್ರ ಮೀಸಲಿಟ್ಟಿದ್ದಾರೆ. ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಆರೋಪಿಸಿದ್ದಾರೆ. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರಾಣಿ ಅಬ್ಬಕ್ಕ ದೇಶಕ್ಕಾಗಿ ಹೋರಾಡಿದ

ಬಹುನಿರೀಕ್ಷಿತ ತುಳು ಚಿತ್ರ ಪಿಲಿ, ದುಬೈನಲ್ಲಿ ಸಿನಿಮಾದ ಪ್ರೀಮಿಯರ್ ಪ್ರದರ್ಶನ

ದುಬೈ : ದುಬೈನಲ್ಲಿ “ಪಿಲಿ” ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನವು ಓವರ್ಸೀಸ್ ಮೂವೀಸ್ ಗಲ್ಫ್ ಸಹಯೋಗದಲ್ಲಿ ಪ್ರದರ್ಶನಗೊಂಡಿತು. ದುಬೈ ದೇರಾದ ಹಯಾತ್‍ನಲ್ಲಿರುವ ಗ್ಯಾಲರಿಯ ಸಿನಿಮಾ ಮಂದಿರದಲ್ಲಿ ಹೌಸ್‍ಫುಲ್ ಪ್ರದರ್ಶನ ಕಂಡಿತು. ಬಿಗ್ ಬಾಸ್ ವಿನ್ನರ್ ನಟ ರೂಪೇಶ್ ಶೆಟ್ಟಿ, ಭಾರತದ ಕಬಡ್ಡಿ ತಂಡದ ಆಟಗಾರ ಪ್ರಶಾಂತ್ ರೈ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಉದ್ಯಮಿಗಳಾದ ಪ್ರವೀಣ್ ಕುಮಾರ್ , ಹರೀಶ್