ಲ್ಯಾಡರ್ ನಿಂದ ರೋವರ್ ಹೊರಬಂದ ದೃಶ್ಯ ಹಂಚಿಕೊಂಡ ಇಸ್ರೋ
ಇಸ್ರೊದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ದ್ರುವ ಸೇರಿದೆ ಲ್ಯಾಡರ್ ನಿಂದ ರೋವರ್ ಹೊರಬಂದ ದೃಶ್ಯ ಹಂಚಿಕೊಂಡ ಇಸ್ರೋ ಹೊರಬಂದ ರೋವರ್ ತನ್ನ ಕಾರ್ಯ ಆರಂಭಿಸಿದೆ. ವಿಕ್ರಮ್ ಲ್ಯಾಡರ್ ನಿಂದ ರೋವರ್ ಹೊರಬಂದ ದೃಶ್ಯ ಹಂಚಿಕೊಂಡ ಇಸ್ರೋ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈ ಮೇಲೆ ಚಲನೆ ಆರಂಭಿಸಿದೆ ಎಂದು ಇಸ್ರೊ ಮಾಹಿತಿ ನೀಡಿದೆ.
ಚಂದಿರನ ಅಂಗಳದ ಮೇಲೆ ಚಂದ್ರಯಾನ-3 ಯೋಜನೆಯ ಪ್ರಗ್ಯಾನ್ ರೋವರ್ ಉರುಳುತ್ತಿರುವ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹಂಚಿಕೊಂಡಿದೆ. ಬುಧವಾರ ಸಂಜೆ ಚಂದ್ರಯಾನ-3 ಯೋಜನೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದಿರನ ಅಂಗಳದ ಮೇಲೆ ಮೃದುವಾಗಿ ಕಾಲೂರುವುದರೊಂದಿಗೆ, ಚಂದಿರನ ಅಂಗಳದ ಮೇಲೆ ಯಶಸ್ವಿಯಾಗಿ ಲ್ಯಾಂಡರ್ ಅನ್ನು ಇಳಿಸಿದ ನಾಲ್ಕು ದೇಶಗಳ ಪೈಕಿ ಭಾರತವೂ ಒಂದಾಯಿತು.ಚಂದಿರನ ಧೂಳು ಹಾಗೂ ತಾಪಮಾನದಿಂದ ಗಗನ ನೌಕೆಯ ಚಲಿಸುವ ಭಾಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಇಸ್ರೊ ಹೇಳಿದೆ.
ಚಂದಿರನ ದಕ್ಷಿಣ ಧ್ರುವದಿಂದ ತೀರಾ ದೂರವಿರುವ ಮಧ್ಯಭಾಗದಲ್ಲೇ ಮಾನವ ಸಹಿತ ಅಪೊಲೊ ಚಂದ್ರಯಾನ ಯೋಜನೆಯ ಗಗನ ನೌಕೆ ಸೇರಿದಂತೆ ಎಲ್ಲ ನೌಕೆಗಳೂ ಚಂದಿರನ ಅಂಗಳದಲ್ಲಿ ಇಳಿದಿದ್ದದ್ದು. ಈ ಭಾಗವು ಕುಳಿಗಳು ಹಾಗೂ ಆಳವಾದ ಕಂದಕಗಳಿಂದ ಕೂಡಿದೆ.
ಚಂದ್ರಯಾನ-3 ಯೋಜನೆಯ ಶೋಧನೆಯು ಚಂದಿರನ ಅಂಗಳದಲ್ಲಿನ ಚಂದ್ರನ ಬಹು ಮುಖ್ಯ ಮೌಲ್ಯಯುತ ಸಂಪನ್ಮೂಲಗಳ ಪೈಕಿ ಅತ್ಯಂತ ಪ್ರಭಾವಶಾಲಿಯಾದ ನೀರಿನ ಕುರುಹು ಕುರಿತು ಈವರೆಗಿನ ಜ್ಞಾನವನ್ನು ಸುಧಾರಿಸಿ, ವಿಸ್ತರಿಸುವ ಸಾಧ್ಯತೆ ಇದೆ.