ದ.ಕ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟ
ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಆಶ್ರಯ, ಮಂಗಳೂರು ತಾಲೂಕು ವಾಲಿಬಾಲ್ ಸಂಸ್ಥೆ ಇವರ ಸಹಯೋಗದೊಂದಿಗೆ, ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಬಾಲಕಿ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟದ ಜಿಲ್ಲಾ ಚಾಂಪಿಯನ್ ಶಿಪ್ ಅ.29ರಂದು ನಗರದ ಮಂಗಳಾ ಸ್ಟೇಡಿಯಂ ವಾಲಿಬಾಲ್ ಅಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್. ಸತೀಶ್ ಕುಮಾರ್ ಹೇಳಿದರು.
ಈ ಕುರಿತು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಬಾಲಕ ಮತ್ತು ಬಾಲಕಿಯರ 14, 16 ಮತ್ತು 18 ವರ್ಷ ವಯೋಮಾನದ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ದೀಪ ಪ್ರಜ್ವಲನೆಯನ್ನು ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಲಿದ್ದಾರೆ. ಶಾಸಕ ಯು.ಟಿ.ಖಾದರ್ ಅವರು ಅಧ್ಯಕ್ಷತೆ ವಹಿಸಲಿದ್ದು, ಪಂದ್ಯಾಟದ ಉದ್ಘಾಟನೆಯನ್ನು ಶಾಸಕ ಡಾ| ವೈ.ಭರತ್ ಶೆಟ್ಟಿ ಅವರು ನೆರವೇರಸಲಿದ್ದಾರೆ ಎಂದು ಅವರು ಹೇಳಿದರು. ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಶಂಕರ್ ಶೆಟ್ಟಿ ಪರಾರಿಗುತ್ತು, ಸಹಕಾರ್ಯದರ್ಶಿ ಹೈದರ್ ಕೈರಂಗಳ, ಕಾರ್ಯದರ್ಶಿ ಲಿಲ್ಲಿ ಪ್ಯಾಸ್ ಉಪಸ್ಥತರಿದ್ದರು.