ಗೆಲುವಿಗೆ ಕಾರಣರಾದ ಕ್ಷೇತ್ರದ ಜನತೆಗೆ ಧನ್ಯವಾದ : ಗುರುರಾಜ್ ಗಂಟಿಹೊಳೆ
ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟೆ ಹೊಳೆಯವರು ಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ನಡೆಸಿದರು ತೆರೆದ ವಾಹನದಲ್ಲಿ ಸಂಚರಿಸಿದ ಅವರು ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಧನ್ಯವಾದ ಸಮರ್ಪಿಸಿದರು ಅಲ್ಲದೆ ಕಾರ್ಯಕರ್ತರು ಅತ್ಯಂತ ಸಂಭ್ರಮದಿಂದ ಅವರ ಗೆಲುವನ್ನು ಸ್ವಾಗತಿಸಿ ಪಟಾಕಿ ಸಿಡಿಸಿದರು.
ಈ ವೇಳೆ ಮಾತನಾಡಿದ ಗುರುರಾಜ ಗಂಟೆ ಹೊಳೆಯವರು ಇದು ಯಾರೋ ಒಬ್ಬರ ಗೆಲುವಲ್ಲ ಸಂಪೂರ್ಣ ಕಾರ್ಯಕರ್ತರ ಗೆಲುವು ನಾವು ಕಾಣದೆ ಇರುವ ಎಷ್ಟೋ ಕಾರ್ಯಕರ್ತರು ಈ ಗೆಲುವಿಗಾಗಿ ಶ್ರಮಿಸಿದ್ದಾರೆ ಇದು ನನ್ನ ಗೆಲುವೆಲ್ಲ ನಮ್ಮೆಲ್ಲರ ಗೆಲುವು ಇದೇ ಭಾವ ಎಲ್ಲರಲ್ಲೂ ಇರಲಿ ಮುಂದಿನ ಐದು ವರ್ಷ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ತಮ್ಮ ಅದ್ಭುತ ಪೂರ್ವ ಗೆಲುವಿಗೆ ಕಾರಣೀಭೂತರಾದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ರೋಡ್ ಶೋ ಕೊನೆಯಲ್ಲಿ ಇತಿಹಾಸ ಪ್ರಸಿದ್ಧ ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ದೀಪಕುಮಾರ್ ಶೆಟ್ಟಿ ಸುರೇಶ್ ಶೆಟ್ಟಿ ಉಪ್ಪುಂದ , ಜಿಲ್ಲಾ ಉಪಾಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಮಹೇಂದ್ರ ಪೂಜಾರಿ, ಕರುಣ್ ಪೂಜಾರಿ, ಶ್ರೀಧರ್ ಬಿಜಾರು ಶರತ್ ಶೆಟ್ಟಿ ಉಪ್ಪಂದ ಅಕಾಶ್ ಪೂಜಾರಿ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.