‘ಹಾಡು ನೀ ಹಾಡು’ ಸಂಗೀತ ರಿಯಾಲಿಟಿ ಶೋ: ಆಯ್ಕೆಯಾದ ಮಕ್ಕಳಿಗೆ ಮೆಂಟರಿಂಗ್ ಸೆಷನ್
ಸಹಾಯ ಹಸ್ತ ಲಯನ್ಸ್ ಕ್ಲಬ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕರಾವಳಿ ಕರ್ನಾಟಕದ ಗಾನಕೋಗಿಲೆಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಹಾಡು ನೀ ಹಾಡು' ಸಂಗೀತ ರಿಯಾಲಿಟಿ ಶೋ ಇದರ ಮೆಘಾ ಆಡಿಷನ್ಸ್ ಸಂಪೂರ್ಣವಾಗಿ ಮುಗಿದಿದ್ದು, ಇದೀಗ ಮುಂದಿನ ಸುತ್ತಿಗೆ ಆಯ್ಕೆಯಾಗಿರುವ ಮಕ್ಕಳಿಗೆ
ಮೆಂಟರಿಂಗ್ ಸೆಷನ್’ ನಡೆಯಿತು.
ವಿ4 ನ್ಯೂಸ್ ಕರ್ನಾಟಕ ಮಾಧ್ಯಮದ ಉಡುಪಿ ಶಾಖೆಯನ್ನು ಹೊಂದಿರುವ ಉಡುಪಿಯ ರಿದ್ಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋದಲ್ಲಿ ನಡೆದಿರುವಂತಹ ಈ ಸೆಷನ್‍ನಲಿ,್ಲ ಪ್ರತಿಭಾನ್ವಿತ ಗಾಯಕರಾದ ಕೃಪಾ ಪ್ರಸೀದ್ ಮತ್ತು ವಿಜಯ ಜೆ ಎಸ್ ಅವರು ಎಲ್ಲಾ ಮಕ್ಕಳನ್ನು ಒಬ್ಬೊಬ್ಬರಾಗಿ ಹಾಡಿಸಿ, ಅವರಿಂದಾಗುತ್ತಿರುವ ಸಂಗೀತ ಲೋಪಗಳನ್ನು ಹುಡುಕಿ, ಅವರನ್ನು ತಿದ್ದಿ, ಮಕ್ಕಳಲ್ಲಿರುವ ಸಾಮಥ್ರ್ಯವನ್ನು ತಿಳಿಸಿ, ಉತ್ತಮವಾಗಿ ಮಾರ್ಗದರ್ಶನವನ್ನು ನೀಡಿದರು.’
ಮಕ್ಕಳೊಂದಿಗೆ ಬಂದಿರುವ ಪೋಷಕರೊಂದಿಗೂ ಮಾತುಕತೆಯನ್ನು ನಡೆಸಿದರು. ಮೆಘಾ ಆಡಿಷನ್ಸ್‍ನಲ್ಲಿ ಆಯ್ಕೆಯಾಗಿರುವ ಮಕ್ಕಳು ಈ ಮೂಲಕ ಮುಂದಿನ ಸುತ್ತಿಗೆ ಅಣಿಯಾದರು. ಕೋವಿಡ್ ಸಮಯದಲ್ಲಿ ನಡೆದ ಉಡುಪಿ ಶೈನಿಂಗ್ ಸ್ಟಾರ್' ಗಾಯನ ಕಾರ್ಯಕ್ರಮವನ್ನು ಆಯೋಜಿಸಿದ ಸಂಘಟಕರಿಂದ ಈ ಬಾರಿ ಹಳ್ಳಿ ಮಕ್ಕಳಿಗೆ ಅವಾಕಾಶ ನೀಡುವ ಉದ್ದೇಶದಿಂದ
ಹಾಡು ನೀ ಹಾಡು’ ಸಂಗೀತ ರಿಯಾಲಿಟಿ ಶೋ ಪ್ರಾರಂಭಗೊಂಡಿದೆ.
ಕರಾವಳಿ ಕರ್ನಾಟಕದ 2,500 ಶಾಲೆಗಳನ್ನು ಸಂಪರ್ಕಿಸಿ, 500 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಮಂಗಳೂರು, ಉಡುಪಿ, ಕುಂದಾಪುರ, ಸುಳ್ಯ, ಪುತ್ತೂರು ಮತ್ತು ಮೂಡುಬಿದ್ರಿಯಲ್ಲಿ ಸುದೀರ್ಘ ನಡೆದ ಆಡಿಷನ್ ರೌಂಡ್ ಹಾಗೂ ನಂತರದಲ್ಲಿ ನಡೆದ ಸೆಲೆಕ್ಷನ್ ರೌಂಡ್ ನಲ್ಲಿ ಒಟ್ಟು 40 ಮಂದಿ ಪುಟಾಣಿ ಗಾಯನ ಪ್ರತಿಭೆಗಳು ಮೆಘಾ ಆಡಿಷನ್ ರೌಂಡ್‍ನಲ್ಲಿ ಆಯ್ಕೆಯಾದರು. ಇದೀಗ ಮೆಘಾ ಆಡಿಷನ್ ರೌಂಡ್ ನಲ್ಲಿ ಆಯ್ಕೆಯಾದವರು ನವೆಂಬರ್ 20 ರಂದು ನಡೆದ ಮೆಂಟರಿಂಗ್ ಸೆಷನ್‍ನಲ್ಲಿ ಭಾಗಿಯಾದರು.
ಈ ಕಾರ್ಯಕ್ರಮಕ್ಕೆ ಸಹಯೋಗವನ್ನು ನೀಡುತ್ತಿರುವ ಸಹಾಯ ಹಸ್ತ ಲಯನ್ಸ್ ಕ್ಲಬ್ ಚಾರಿಟೇಬಲ್ ಫೌಂಡೇಶನ್ ಕಳೆದ ಹಲವು ವರ್ಷಗಳಿಂದ ಉಡುಪಿ-ಮಣಿಪಾಲದಲ್ಲಿ ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಸಂಗೀತ ಕ್ಷೇತ್ರಕ್ಕೆ ಸೇವೆಯನ್ನು ನೀಡುವ ಸಲುವಾಗಿ ನೂತನ ಹೆಜ್ಜೆಯನ್ನು ಇಟ್ಟಿದ್ದಾರೆ.