ಹಿಂದೂ ಸಂಘಟನೆಗಳ ನಿಷೇಧ ವಿರೋಧಿಸಿ ಮೂಡುಬಿದಿರೆಯಲ್ಲಿ ಹನುಮನ್ ಚಾಲೀಸ್ ಪಠಣ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಲ್ಲಿ ರಾಷ್ಟ್ರೀಯ ಹಿಂದೂ ಸಂಘಟನೆಯಾದ ವಿಶ್ವಹಿಂದೂ ಪರಿಷತ್ ಬಜರಂಗದಳ, ಮಾತ್ರಶಕ್ತಿ ದುರ್ಗಾವಾಹಿನಿ ಸಂಘಟನೆಯನ್ನು ನಿಷೇಧಗೊಳಿಸುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಖಂಡಿಸಿ ಇಂದು ರಾಜ್ಯಾದ್ಯಂತ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಮೂಡುಬಿದಿರೆ ವೆಂಕಟರಮಣ ದೇವಸ್ಥಾನದಲ್ಲಿ ಹನುಮಾನ್ ಚಾಲೀಸ್ ಮಂತ್ರ ಪಠಣ ಜಪಿಸುವ ಮೂಲಕ ರಾಷ್ಟ್ರ ಸೇವೆ ಮಾಡುವ ಸಂಘಟನೆಯನ್ನು ನಿಷೇದಿಸಬಾರದು ಹಾಗೂ ಸಮಸ್ತ ಹಿಂದೂ ಬಾಂಧವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಬೇಕೆಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು.

moodabidre

ಈ ಕಾರ್ಯಕ್ರಮದಲ್ಲಿ ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ವಿಶ್ವಹಿಂದೂ ಪರಿಷತ್ ತಾಲೂಕು ಕಾರ್ಯಾಧ್ಯಕ್ಷ ಶ್ಯಾಂ ಹೆಗ್ಡೆ ಉಪಾಧ್ಯಕ್ಷ ಶಾಂತಾರಾಂ ಕುಡ್ವ ಕಾರ್ಯದರ್ಶಿ ಸುಚೇತನ ಸಹಕಾರ್ಯದರ್ಶಿ ರಕ್ಷಿತ್ ಬಜರಂಗದಳ ತಾಲೂಕು ಸಂಯೋಜಕ ಅಭಿಲಾಷ್ ಅಖಾಡ ಪ್ರಮುಖ್ ಸಂಜಯ್ ಸುರಕ್ಷಾ ಪ್ರಮುಖ್ ಧನಂಜಯ್ ನಗರ ಸಕಯೋಜಕ್ ವಿಜೇಶ್ ಅಭಿ ಹಾಗೂ ಹಿಂದೂ ಬಾಂಧವರು ಕಾರ್ಯಕರ್ತರು ಉಪಸ್ಥಿತರಿದ್ದರು

Related Posts

Leave a Reply

Your email address will not be published.