ಕಾರ್ಕಳ: ಭರದಿಂದ ಸಾಗುತ್ತಿರುವ ಪರಶುರಾಮನ ಮೂರ್ತಿಯ ಕೆಲಸ
ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದ ಪರಶುರಾಮ ಥೀಂ ಪಾರ್ಕಿನಲ್ಲಿ ಪರಶುರಾಮನ ಅಸಲಿ ಮೂರ್ತಿಯ ಕೆಲಸ ಭರದಿಂದ ನಡೆಯುತ್ತಿದೆ. ಆದರೆ ಪ್ರತಿಮೆಯ ನಕಲಿತನ ಬಹಿರಂಗಪಡಿಸಿದ ನಂತರ ಇದೀಗ ಶಾಸಕರು ಅಸಲಿ ಮೂರ್ತಿಯ ಕೆಲಸ ಪ್ರಾರಂಭಿಸಿದ್ದಾರೆ. ಇದು ಶಾಸಕರಿಗೆ ಶೋಭೆ ತರುವಂತದ್ದಲ್ಲ ಎಂದು ಕಾಂಗ್ರೆಸ್ ವಕ್ತಾರ ಶುಭೋದ್ ರಾವ್ ಹೇಳಿದರು.
ಅವರು ಕಾರ್ಕಳದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಈಗಾಗಲೇ ನಕಲಿ ಪರಶುರಾಮ ಮೂರ್ತಿಗೆ ಟರ್ಪಾಲನ್ನು ಹೊದಿಸಿ, ಯಾರಿಗೂ ಕಾಣದಂತೆ ನಕಲಿ ಮೂರ್ತಿಯನ್ನು ತೆಗೆದು ಅಸಲಿ ಮೂರ್ತಿಯನ್ನು ನಿಲ್ಲಿಸುವ ಕೆಲಸ ಪ್ರಾರಂಭವಾಗಿದೆ.
ಕೆಲವು ತಿಂಗಳ ಹಿಂದೆ ಈ ಜಾಗದ ಬಗ್ಗೆ ಹಾಗೂ ಹಾಗೂ ಮೂರ್ತಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ತರಹದ ಚರ್ಚೆಗಳು ಉಂಟಾಗಿತ್ತು.
ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉಮಿಕಲ್ ಬೆಟ್ಟಕ್ಕೆ ಭೇಟಿ ನೀಡಿ ಪ್ರತಿಮೆಯ ಅಸಲಿತನವನ್ನು ಬಹಿರಂಗ ಪಡಿಸಿದ ನಂತರ ಶಾಸಕರು ಮೂರ್ತಿಯ ಕೆಲಸವನ್ನು ಮಾಡಲು ಪ್ರಾರಂಭ ಮಾಡಿದ್ದಾರೆ. ಇದು ಶಾಸಕರಿಗೆ ಶೋಭೆ ತರುವಂತಹ ಕೆಲಸವಲ್ಲ. ಇದು ಕೇವಲ ಕಳೆದ ಚುನಾವಣೆಯಲ್ಲಿ ಗೆಲ್ಲಲು ಮಾಡಿದ ಕುತಂತ್ರವೆಂದು ಶುಭದರಾವ್ ಆರೋಪಿಸಿದರು.
ಈ ಸಂದರ್ಭದಲ್ಲಿ ಸುಧಾಕರ ಶೆಟ್ಟಿ, ರುಕ್ಮಯ ಶೆಟ್ಟಿಗಾರ, ನಕ್ರೆ ಸೂರಜ್ ಶೆಟ್ಟಿ, ಹಾಗೂ ಸುಬ್ಬಿತ್ ಟಿ.ಡಿ, ಉಪಸ್ಥಿತರಿದ್ದರು.