ಮಹಿಳೆಯ ಸ್ನಾನದ ದೃಶ್ಯ ಮೊಬೈಲ್‍ನಲ್ಲಿ ಸೆರೆ ಹಿಡಿದ ಪ್ರಕರಣ – ಕಮಿಷನರ್ ಕುಲದೀಪ್ ಕುಮಾರ್ ಜೈನ್ ಸ್ಪಷ್ಟನೆ
ಮಂಗಳೂರು ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ , ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ
ನೆರೆ ಮನೆಯ ಬಚ್ಚಲು ಕೋಣೆಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ವೀಡಿಯೊ ಮಾಡಿದ ಪ್ರಕರಣಕ್ಕೆ ಬಗ್ಗೆ ಮಾತನಾಡಿ, ಪಕ್ಕದ ಮನೆಯ ಮಹಿಳೆಯು ರಾತ್ರಿ 11.30-12 ಗಂಟೆಯ ಸಮಯದಲ್ಲಿ ತನ್ನ ಮನೆಯ ಬಚ್ಚಲಿನಲ್ಲಿ ಸ್ನಾನ ಮಾಡುತಿದ್ದ ವೇಳೆ ಮೊಬೈಲ್ ಕ್ಯಾಮರಾ ಗಮನಿಸಿದ ಮಹಿಳೆ ಕಿರುಚಾಡಿದ್ದು, ಈ ವೇಳೆ ಸ್ಥಳೀಯರು ನೆರೆಮನೆಯ ಯುವಕನನ್ನು ಹಿಡಿದು ಮುಲ್ಕಿ ಪೋಲೀಸರಿಗೆ ಒಪ್ಪಸಿದ್ದು, ಮೊಬೈಲ್ ಸಹಿತ ಆರೋಪಿಯನ್ನು ಬಂದಿಸಲಾಗಿದೆ. ಆರೋಪಿಯನ್ನು ಮಹಿಳೆಯ ನೆರೆಮನೆಯ 21 ವರ್ಷದ ಯುವಕ ಸುಮಂತ್ ಪೂಜಾರಿ ಎಂದು ಗುರುತಿಸಲಾಗಿದೆ ಎಂದರು.
ನಂತರ ಗಾಂಜಾ ವಶದ ಪ್ರಕರಣದ ಬಗ್ಗೆ ಮಾತನಾಡಿ, ನಗರದ ಕಂಕನಾಡಿ-ಪಂಪ್‍ವೆಲ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನದಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಸುಳಿವು ಪಡೆದ ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಯ ತನಿಖೆ ನಡೆಯುತ್ತಿದೆ ಎಂದರು.
ಸುರತ್ಕಲ್ ನ ಎಟಿಎಂಗೆ ಜೆಸಿಬಿ ನುಗ್ಗಿಸಿ ಹಣ ಲಪಟಾಯಿಸಲು ವಿಫಲ ಯತ್ನ ನಡೆಸಿದ ಘಟನೆ ಬಗ್ಗೆ ಮಾತನಾಡಿ, ಈ ಘಟನೆ ಸುರತ್ಕಲ್ ಪೆÇಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಸುರತ್ಕಲ್‍ನ ವಿದ್ಯಾದಾಯಿನಿ ಶಾಲೆಯ ಮುಂಭಾಗದ ಜಯಶ್ರೀ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸೌತ್ ಇಂಡಿಯನ್ ಬ್ಯಾಂಕ್ ಬ್ರಾಂಚ್‍ನ ಎಟಿಎಂ ಮೆಶಿನ್ ಗೆ ರಾತ್ರಿ ಕಳ್ಳರು ಕನ್ನ ಹಾಕಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಶೀಘ್ರ ಕಳ್ಳನ್ನು ಬಂದಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.