ಮೂಡುಬಿದಿರೆ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆ

ಡಿಸಿ ಮನ್ನಾ ಜಾಗಗಳು ಇತರರ ಪಾಲಾಗುತ್ತಿದೆ. ಆದರೆ ಎಸ್. ಸಿ, ಎಸ್. ಟಿ ಸಮುದಾಯದ ಜನರು ಡಿಸಿ ಮನ್ನಾ ಜಾಗದಲ್ಲಿ ಬಿಡಾರ ಹೂಡಿದರೆ ಕೂಡಲೇ ಅಲ್ಲಿಂದ ಎತ್ತಂಗಡಿ ಮಾಡಲು ಇಲಾಖೆಯಿಂದ ಅಧಿಕಾರಿಗಳು ಬರುತ್ತಾರೆ. ಇನ್ನು ಮುಂದೆ ಡಿಸಿ ಮನ್ನಾ ಜಮೀನಿನಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಜನರು ಸಣ್ಣ ಗುಡಿಸಲು ಮಾಡಿ ಮನೆ ಮಾಡಿಕೊಂಡಿದ್ದಾರೆ. ಅವರನ್ನು ಅಲ್ಲಿಂದ ಓಡಿಸದೇ ಅಸಹಾಯಕ ಜನರಿಗೆ ವಾಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ರಾಮಚಂದ್ರ ಕೆಂಬಾರೆ ಆಗ್ರಹಿಸಿದರು

ಅವರು ಎಸ್ ಸಿ ಎಸ್ .ಟಿ ಸಭೆಯಲ್ಲಿ ಮಾತನಾಡಿ ದಕ್ಷಿಣ ಕನ್ನಡದಲ್ಲಿ ಪ.ಜಾತಿ/ಪ.ಪಂಗಡದ ಜನರು ನಡೆಸುವಂತಹ ಯಾವುದೇ ಶಿಕ್ಷಣ ಸಂಸ್ಥೆ, ಬ್ಯಾಂಕ್, ಸೊಸೈಟಿಗಳಿಲ್ಲ, ಉತ್ತಮರೆಲ್ಲರೂ ಉದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ ಆ ಸಾಮರ್ಥ್ಯ ಎಸ್.ಸಿ, ಎಸ್.ಟಿ ಸಮುದಾಯಕ್ಕಿಲ್ಲವೇ? ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ಸರ್ಕಾರಿ ಜಾಗಗಳಿದ್ದು ತಹಶಿಲ್ದಾರರು ಜಮೀನನ್ನು ಒದಗಿಸಿ ಕೊಟ್ಟಲ್ಲಿ ನಮ್ಮವರು ಉದ್ಯಮವನ್ನು ನಡೆಸಲು ಶಕ್ತರಾಗಿದ್ದೇವೆ. ಪ.ಜಾತಿ & ಪ.ಪಂಗಡದವರಿಗೂ ಅವಕಾಶ ಮಾಡಿ ಕೊಡುವಂತೆ ತಹಶಿಲ್ದಾರರ ಬಳಿ ಬೇಡಿಕೆ ಇಟ್ಟರು.

ಸ್ಕೌಟ್ಸ್ ಗೈಡ್ಸ್ ಕನ್ನಡಭವನದಲ್ಲಿ ತಾಲೂಕು ತಹಶಿಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ಪುರಸಭಾ ಸದಸ್ಯ ಕೊರಗಪ್ಪ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪ.ಜಾತಿ,ಪ.ವರ್ಗದ ಸಂಘ ಸಂಸ್ಥೆಗಳ ಕುಂದು ಕೊರತೆಗಳನ್ನು ಅಲಿಸಬೇಕಾದ ಹೆಚ್ಚಿನ ಇಲಾಖಾಧಿಕಾರಿಗಳು ಗೈರು ಹಾಜರಾಗಿದ್ದು, ಬೆರಳೆಣಿಕೆಯ ಅಧಿಕಾರಿಗಳಷ್ಟೇ ಹಾಜರಾಗಿದ್ದಾರೆ. ಎಂದು ತಾಲೂಕು ತಹಶಿಲ್ದಾರ ಸಚ್ಚಿದಾನಂದ ಸತ್ಯಪ್ಪ ಕುಚನೂರು ಅವರಲ್ಲಿ ಪ್ರಶ್ನಿಸಿದರು.

ನಂತರ ಮಾತನಾಡಿದ ತಹಶಿಲ್ದಾರ ಸಚ್ಚಿದಾನಂದ ಸತ್ಯಪ್ಪ ಕುಚನೂರು ಅವರು ತಹಶಿಲ್ದಾರ್ ಸಭೆಗೆ ಹಾಜರಾಗದೇ ಇರುವ ಸರಕಾರಿ ಅಧಿಕಾರಿಗಳಿಗೆ ನೋಟಿಸು ನೀಡಲಾಗುವುದು, ಅವರ ಗೈರು ಹಾಜರಿಯ ಉತ್ತರವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದೆಂದು ತಿಳಿಸಿದ ಅವರು ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ನೀಲಯ್ಯ ಅವರು ಮಾತನಾಡಿ ಪ.ಜಾತಿ/ಪ.ಪಂಗಡದ ಜನರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರಕಾರಿ ಜಾಗದಲ್ಲಿ ಮನೆಕಟ್ಟಿ ಕುಳಿತವರಿಗೆ ಡಿ-ನೋಟಿಸ್ ನೀಡಿಲ್ಲ. ಎಂದ ಅವರು ಗ್ರಾಮ ಲೆಕ್ಕ ಅಧಿಕಾರಿಗಳು, ಪಿಡಿಓಗಳು ರಾಜಕೀಯ ವ್ಯಕ್ತಿಗಳ ಗುಲಾಮರಾಗಿ ಕಾರ್ಯ ನಿರ್ವಹಿಸುತ್ತಾ ದಲಿತರನ್ನು ಶೋಷಣೆ ಮಾಡುತ್ತಿದ್ದಾರೆಂದು ಆರೋಪಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ದಯಾವತಿ.ಎಂ ಹಾಗೂ ವಿವಿಧ ಇಲಾಖೆಯ ಇಲಾಧಿಕಾರಿಗಳು ಪ.ಜಾತಿ &/ಪ.ಪಂಗಡದ ಜನರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.