Home Search results for (Page 2)

ಸಿ.ಬಿ.ಎಸ್. ಇ 12ನೇ ತರಗತಿಯ ಪರೀಕ್ಷೆ: ಗೊನ್ಝಾಗ ಶೇ 100 ಫಲಿತಾಂಶ

ಸಿಬಿಎಸ್.ಸಿ 12ನೇ ತರಗತಿಯ ಪರೀಕ್ಷೆಯಲ್ಲಿ ಸಂತ ಅಲೋಶಿಯಸ್ ಗೊನ್ಝಾಗ ಶಾಲೆ 100 ಶೇ ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆಹಾಜರಾದ 36 ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ (80% ಗಿ೦ತಲೂ ಹೆಚ್ಚು )ಮತ್ತು 27 ವಿದ್ಯಾರ್ಥಿಗಳುಪ್ರಥಮ ದರ್ಜೆಯಲ್ಲಿ (60% ಗಿ೦ತಲೂ ಹೆಚ್ಚು) ಉತ್ತೀರ್ಣರಾಗಿದ್ದಾರೆ. ಪೃಥ್ವಿ ಸಾಲಿಯಾನ್ 92.60 ಅಂಕಗಳಿಸಿ

ಬ್ರಹ್ಮಾವರ :ವಿದ್ಯಾಲಕ್ಷ್ಮೀ ಪ್ರೀಮಿಯರ್ ಲೀಗ್ ಕ್ರಿಕೆಟ್ ಮ್ಯಾಚ್

ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ VPL ಕ್ರಿಕೆಟ್ ಮ್ಯಾಚ್ ಗಾಂಧಿ ಮೈದಾನ ಬ್ರಹ್ಮಾವರ ಇಲ್ಲಿ ಜರುಗಿತು.ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಮಾನಸಿಕ, ದೈಹಿಕ ಆರೋಗ್ಯ ಉತ್ತಮವಾದ ಮನಸ್ಥಿತಿ ಹೊಂದಿರುವಲ್ಲಿ ಕ್ರೀಡೆಯು ಮುಖ್ಯವಾಗಿದೆ ಎನ್ನುವ ದೃಷ್ಟಿಕೋನವನ್ನು ಹೊಂದಿರುವ ವಿದ್ಯಾಲಕ್ಷ್ಮಿ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಿದ್ಯಾರ್ಥಿಗಳು ಆರು ತಂಡವನ್ನು ರಚಿಸಿ ವಿದ್ಯಾಲಕ್ಷ್ಮಿ ಪ್ರೀಮಿಯರ್ ಲೀಗ್ ಕ್ರಿಕೆಟ್

ಮಂಗಳೂರು ಅಮೃತಾ ವಿದ್ಯಾಲಯಂ ಶಾಲೆಗೆ ಶೇ.100 ಫಲಿತಾಂಶ

ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಮಂಗಳೂರಿನ ಅಮೃತಾ ವಿದ್ಯಾಲಯಂನ ವಿದ್ಯಾರ್ಥಿಗಳು ಶೇ.100 ಫಲಿತಾಂಶ ದಾಖಲಿಸಿದ್ದಾರೆ. ದೇವಿಕಾ ಜಯರಾಜ್ ಶೇ.96.80 ಪ್ರಥಮ, ಅದಿತೇಯ ಶೇ.93.4 ದ್ವಿತೀಯ, ಸುಮೇದಾ ಶೇ. 92.6 ತೃತಿಯಾ, ರಿಯಾ ಸಿಂಗ್ ಶೇ.91 ಚತುರ್ಥ ಸ್ಥಾನ ಪಡೆದಿದ್ದಾರೆ. ಮೂವರು ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು. ಎಂಟು ವಿದ್ಯಾರ್ಥಿಗಳು ಶೇ.85ಕ್ಕಿಂತ ಅಧಿಕ, ಆರು ವಿದ್ಯಾರ್ಥಿಗಳು ಶೇ. 80ಕ್ಕಿಂತ ಅಧಿಕ, ಏಳು ವಿದ್ಯಾರ್ಥಿಗಳು ಶೇ.70ಕ್ಕಿಂತ ಅಧಿಕ,

ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಶೋಕ ವಿದ್ಯಾಲಯಕ್ಕೆ ಶೇ.93 ಫಲಿತಾಂಶ

ಮಂಗಳೂರಿನ ಅಶೋಕನಗರದಲ್ಲಿರುವ ಅಶೋಕ ವಿದ್ಯಾಲಯ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‍ನಲ್ಲಿ 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇ.93 ಫಲಿತಾಂಶ ಬಂದಿದೆ. ಉತ್ತಮ ಬೋಧಕ ವೃಂದ ಮತ್ತು ಆತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಅಶೋಕ ವಿದ್ಯಾಲಯ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‍ಗೆ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಶೋಮಿತ್ ಸಿ ಬಂಗೇರಾ 609(97.44%) ನೇಹಾ ಕೃಷ್ಣ ಕೋಟ್ಯಾನ್ 602(96.32%), ವೈವಿದ್ಯಾ 593 (94.88%) ಅಂಕ ಪಡೆದು ಶಾಲೆಗೆ

ರಘುಪತಿ ಭಟ್ ಅವರು ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಮನವಿ : ಸುನಿಲ್ ಕುಮಾರ್

ವಿಧಾನ ಪರಿಷತ್ ಚುನಾವಣೆಗೆ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಪಕ್ಷೇತರಾಗಿ ಸ್ಪರ್ಧೆ ಮಾಡುವುದಾಗಿ ನಿರ್ಧರಿಸಿದ್ದು, ಅವರ ಮನೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸುನೀಲ್ ಕುಮಾರ್ ಅವರು, ಪರಿಷತ್ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಭಾವನೆಯನ್ನು ರಘುಪತಿ ಭಟ್ ವ್ಯಕ್ತಪಡಿಸಿದ್ದಾರೆ. ದುಡುಕಿನ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದೇನೆ. ಈ ಹಿಂದೆ

ಕಾಪು ಲಕ್ಷ್ಮೀ ಜನಾರ್ಧನ ದೇವಸ್ಥಾನಕ್ಕೆ ಚಿತ್ರ ನಟ ದೊಡ್ಡಣ್ಣ ಕುಟುಂಬ ಭೇಟಿ

ಕಾಪು ಸಾವಿರ ಸೀಮೆಯ ಒಡೆಯ ಕಾಪು ಲಕ್ಷ್ಮೀ ಜನಾರ್ಧನ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ಅನುಗ್ರಹ ಪ್ರಸಾದ ಪಡೆದರು. ಈ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕರಾದ ಜನಾರ್ಧನ್ ಭಟ್ ದೇವಸ್ಥಾನದ ವತಿಯಿಂದ ಗೌರವಿಸಿದರು. ದೇವಸ್ಥಾನದ ವಠಾರದಲ್ಲಿ ಗಿಡ ನೆಡುವ ಮೂಲಕ ವೃಕ್ಷ ಸಂರಕ್ಷಣೆಗೆ ಪ್ರೋತ್ಸಾಹ ನೀಡಿದರು. ಈ ಸಂದರ್ಭ ಜೋತಿಷ್ಯ ವಿದ್ವಾನ್ ಪ್ರಕಾಶ್ ಅಮ್ಮಣ್ಣಯ, ಗಿರೀಶ್

ಮಾಜಿ ಶಾಸಕ ರಘುಪತಿ ಭಟ್ ಗೆ ಕೈ ತಪ್ಪಿದ ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ : ಪಕ್ಷೇತರವಾಗಿ ಸ್ಪರ್ಧೆಗೆ ನಿರ್ಧಾರ

ಉಡುಪಿ: ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಉಡುಪಿ ಕರಂಬಳ್ಳಿಯ ಸ್ವಗೃಹದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘುಪತಿ ಭಟ್ ಅವರು, ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.

ಕನ್ನಾಂಗಾರು : ಮನೆಗೆ ನುಗ್ಗಿ ನಗ ನಗದು ಕಳವು

ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತ ಪಡಿಸಿಕೊಂಡ ಕದೀಮರು ಮನೆಯ ಬಾಗಿಲು ಹೊಡೆದು ಲಕ್ಷಾಂತರ ಮೌಲ್ಯದ ನಗ ಹಾಗೂ ಸಹಸ್ರಾರು ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಹೆಜಮಾಡಿಯ ಕನ್ನಾಂಗಾರಿನ ಅಶ್ರಫ್ ಎಂಬರ ಮನೆಯಲ್ಲಿ ಅವರ ಪತ್ನಿ ಇದ್ದು, ಭಾನುವಾರ ಮಧ್ಯಾಹ್ನ ಮನೆಗೆ ಬೀಗ ಹಾಕಿ ಕೂಗಳತೆ ದೂರದಲ್ಲಿರುವ ತನ್ನ ತಾಯಿಮನೆಗೆ ಹೋಗಿದ್ದು ರಾತ್ರಿ ಅಲ್ಲಿಯೆ ಉಳಿದಿದ್ದರು. ಸೋಮವಾರ ಸಂಜೆ ಸಮಯ ಆರ್ಡರ್ ಮಾಡಲಾದ “ಎಸಿ”ಯನ್ನು ಮನೆಗೆ ತಂದ ವ್ಯಕ್ತಿ ಮನೆಮಂದಿ

ನಾಮಪತ್ರ ಸಲ್ಲಿಕೆಗೆ ವಾರಣಾಸಿಯಲ್ಲಿ ಅಡ್ಡಿ : ನೋವು ತೋಡಿಕೊಂಡ ಶ್ಯಾಮ್ ರಂಗೀಲಾ

ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಲು ಹೋಗಿದ್ದೆ. ಕುಳಿತುಕೊಳ್ಳಲು ಹೇಳಿ, ಆಮೇಲೆ ಸಮಯವಾಯಿತು ಹೊರಡಿ ಎಂದು ಅಧಿಕಾರಿಗಳು ಚಮಚಾಗಿರಿ ಮಾಡಿದ್ದಾರೆ ಎಂದು ಕಮೆಡಿಯನ್ ಶ್ಯಾಮ್ ರಂಗೀಲಾ ಹೇಳಿದ್ದಾರೆ. ಶ್ಯಾಮ್ ರಂಗೀಲಾ ಅವರು ಈ ಬಗೆಗೆ ಜಾಲ ತಾಣಗಳಲ್ಲಿ ತನ್ನ ನೋವು ಹಂಚಿಕೊಂಡಿದ್ದಾರೆ. ನನ್ನ ನಾಮಪತ್ರ ಸಲ್ಲಿಸಲಾಗದ್ದಕ್ಕೆ ನೋವಾಗಿದೆ ಎಂದಿದ್ದಾರೆ. ಪ್ರಧಾನಿ ಮೋದಿಯವರು ಸ್ಪರ್ಧಿಸುವ ವಾರಣಾಸಿಯಲ್ಲಿ ಸಾಕಷ್ಟು ಜನರು ಸ್ಪರ್ಧಿಸದಂತೆ ಮೊದಲೇ ನಿರ್ಣಯಿಸಿದಂತೆ ಕಾಣುತ್ತದೆ.

ಮುಂಬೈಯಲ್ಲಿ ಮೂರು ದಿನದಿಂದ ಮಳೆ : ಪೆಟ್ರೋಲ್ ಬಂಕ್ ಮೇಲೆ ಬಿದ್ದ ಕಬ್ಬಿಣದ ಹೋರ್ಡಿಂಗ್

ಮುಂಬಯಿ ನಗರದಲ್ಲಿ ಮೂರು ದಿನದಿಂದ ಮಳೆ ಸುರಿಯುತ್ತಿದ್ದು, ಈ ಮಳೆಗಾಲದ ಮೊದಲ ನರಬಲಿಯನ್ನು ಮಳೆ ಪಡೆದಾಯಿತು. ಘಾಟ್ಕೋಪರ್‍ನ ವೆಸ್ಟರ್ನ್ ಎಕ್ಸ್ಪ್ರೆಸ್ ಹೈವೆಯ ಪೊಲೀಸ್ ಗ್ರೌಂಡ್ ಪೆಟ್ರೋಲ್ ಬಂಕ್ ಮೇಲೆ ಭಾರೀ ಕಬ್ಬಿಣದ ಹೋರ್ಡಿಂಗ್ ಉರುಳಿ ಬಿದ್ದು ಮೂವರು ಸಾವಿಗೀಡಾದರು. ಅಲ್ಲದೆ 54 ಮಂದಿ ಗಾಯಗೊಂಡರು. ಇನ್ನೂ ಕೆಲವರು ಭಾರೀ ಹೋರ್ಡಿಂಗ್‍ನಡಿ ಸಿಲುಕಿದ್ದಾಗಿ ಹೇಳಲಾಗಿದೆ. ಮುಂಬಯಿಯ ವಡಾಲದಲ್ಲಿ ಕಟ್ಟುಗೆಯ ಉದ್ಯಾನ ಗೋಪುರ ಬಿದ್ದು ಮೂವರು ತೀವ್ರ ಗಾಯಗೊಂಡರು. ಹಲವು