ಯುಎಇ: ಸಪ್ಟೆಂಬರ್ 24 ರಂದು ಪುಳಿಮುಂಚಿ ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ

ಬಹು ನಿರೀಕ್ಷೆಯ ಪುಳಿಮುಂಚಿ ತುಳು ಚಿತ್ರದ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಯುಎಇಯ ಅಜ್ಮಾನ್ ನ ಇಂಡಿಯನ್ ಅಸೋಸಿಯೇಷನ್ ಸಭಾಂಗಣದಲ್ಲಿ ಸಪ್ಟೆಂಬರ್ 24 ರಂದು ಜರಗಲಿದೆ.

ಮಾರ್ಗದೀಪ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯುಎಇಯ ವತಿಯಿಂದ ನಡೆಯುವ ಒಂಬತ್ತನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವೇದಿಕೆಯಲ್ಲಿ ಮಧ್ಯಾಹ್ನ 12.30 ಕ್ಕೆ ಟಿಕೆಟ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಫೆಮಿನಾ ಮಿಸ್ ಇಂಡಿಯಾ ಗೋವಾ 2019 ಶಾಸ್ತ್ರ ಶೆಟ್ಟಿ ಇವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.

ಯುಎಇಯ ಪ್ರೀಮಿಯರ್ ಪ್ರದರ್ಶನವು ಅಕ್ಟೋಬರ್ 7, 8 ರಂದು ದುಬೈ, ಅಬುಧಾಬಿ, ಶಾರ್ಜಾದಲ್ಲಿ ಪ್ರದರ್ಶನಗೊಳ್ಳಲಿದೆ.

ತ್ರಿಶೂಲ್ ಶೆಟ್ಟಿ ನಿರ್ದೇಶನದ ಚಿತ್ರವನ್ನು ಹರಿ ಪ್ರಸಾದ್ ರೈ ನಿರ್ಮಾಣ ಮಾಡಿದ್ದಾರೆ. ನಾಯಕನಾಗಿ ವಿನಿತ್ ಕುಮಾರ್, ನಾಯಕಿಯಾಗಿ ಸಮಂತಾ ಅಮೀನ್, ರಾಹುಲ್ ಅಮೀನ್, ಅರವಿಂದ ಬೋಳರ್,ಬೊಜರಾಜ ವಾಮಂಜೂರು,ನವೀನ್ ಡಿ.ಪಡಿಲ್,ಆರದ್ಯ ಶೆಟ್ಟಿ,ಸಾಯಿಕೃಷ್ಣ ಕುಡ್ಲ,ಪ್ರಸನ್ನ ಶೆಟ್ಟಿ, ರವಿ ರಾಮಕುಂಜ,ಸಂದಿಪ್ ಶೆಟ್ಟಿ ಅಭಿನಯಿಸಿದ್ದಾರೆ. ಕಾಂತರ ಖ್ಯಾತಿಯ ಸ್ವರಾಜ್ ಶೆಟ್ಟಿಯವರು ವಿಶೇಷ ಪಾತ್ರದಲ್ಲಿ ಈ ಚಿತ್ರದಲ್ಲಿ ಮಿಂಚಲಿದ್ದಾರೆ.ಎಂದು ಸಹ ನಿರ್ಮಾಪಕರಾದ ದೇವಿ ಪ್ರಸಾದ್ ಜಿ.ಎಸ್ ತಿಳಿಸಿದ್ದಾರೆ.

Related Posts

Leave a Reply

Your email address will not be published.